Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಶ್ಮಿಕಾ ಮದುವೆಯಲ್ಲಿ ಸ್ಟಾರ್ ನಟರಿಗೆ ಇಲ್ಲ ಆಹ್ವಾನ : ಸಿಕ್ಕಾಪಟ್ಟೆ ನಿಯಮಗಳು..!

---Advertisement---

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೈನಲಿ ಅಧಿಕೃತವಾಗಿದೆ. ಸೆಲೆಬ್ರೆಟಿಗಳ ಮದುವೆಯಲ್ಲಿ ಸಹಜವಾಗಿ ಒಂದಷ್ಟು ರೂಲ್ಸ್ ಗಳನ್ನ ಮಾಡಿಕೊಳ್ತಾರೆ. ಮದುವೆಗೆ ಆತ್ಮೀಯರು, ಕುಟುಂಬಸ್ಥರಷ್ಟೇ ಇದ್ದರು ಕೂಡ ನಿಯಮಗಳು ಇದ್ದೇ ಇರುತ್ತದೆ. ಇದೀಗ ರಶ್ಮಿಕಾ – ವಿಜಯ್ ಮದುವೆಯಲ್ಲಿ ಇರುವ ರೂಲ್ಸ್ ಗಳು ಸಿಕ್ಕಾಪಟ್ಟೆ ಚರ್ಚೆಯಾಗ್ತಾ ಇದೆ.

ಫೆಬ್ರವರಿ24ರಿಂದ ಮದುವೆ ಶಾಸ್ತ್ರಗಳು ಆರಂಭವಾಗಲಿವೆ. 26ಕ್ಕೆ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಎರಡು ಮನೆಯಲ್ಲೂ ಸಂಪ್ರದಾಯಗಳು ಆರಂಭವಾಗಿವೆ. ಇದರ ನಡುವೆ ಮದುವೆ ದಿನ ನೋ ಫೋನ್ ರೂಲ್ಸ್ ಜಾರಿಗೆ ತಂದಿದ್ದಾರೆ. ಮದುವೆ ಮನೆಗೆ ಬರುವವರು ಫೋನ್ ಬಳಸುವಂತಿಲ್ಲ, ಮದುವೆಯ ಒಂದೇ ಒಂದು ಫೋಟೋ ಕೂಡ ತೆಗೆಯುವಂತಿಲ್ಲ. ಈಗಾಗಲೇ ಈ ನಿಯಮವನ್ನು ಹಲವು ಸೆಲೆಬ್ರೇಟಿಗಳು ಫಾಲೋ ಮಾಡಿದ್ದಾರೆ. ವಿರಾಟ್ – ಅನುಷ್ಕಾ, ನಯನತಾರಾ – ವಿಘ್ನೇಶ್ ಮದುವೆಯಲ್ಲೂ ಫೋನ್ ನಿಷೇಧ ಮಾಡಲಾಗಿತ್ತು.

ಆದರೆ ಇದರಲ್ಲಿ ಮತ್ತೊಂದು ಶಾಕಿಂಗ್ ನ್ಯೂಸ್ ಅಂದ್ರೆ ಸ್ಟಾರ್ ನಟರಿಗೇನೆ ಇವರ ಮದುವೆಗೆ ಆಹ್ವಾನ ಇಲ್ಲದೆ ಇರುವುದು. ರಶ್ಮಿಕಾ ಮಂದಣ್ಣ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಕೋ ಸ್ಟಾರ್ ಗಳಿಗೂ ಆಹ್ವಾನ ನೀಡಿಲ್ಲ. ಕೇವಲ ಆತ್ಮೀಯರು ಹಾಗೂ ಕುಟುಂಬದವರಷ್ಟೇ ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ನೀಡಿರುವಂತಹ ಆಹ್ವಾನ ಪತ್ರಿಕೆಯಲ್ಲಿಯೇ ಯಾವುದೇ ಉಡುಗೊರೆ ತರಬೇಡಿ ಎಂದು ಬರೆದಿದ್ದಾರೆ. ಮದುವೆಗೆ ಆಪ್ತರಿಗಷ್ಟೇ ಆಹ್ವಾನ ನೀಡಿರುವ ರಶ್ಮಿಕಾ – ವಿಜಯ್ ಮಾರ್ಚ್ 4 ರಂದು ಹೈದರಾಬಾದ್ ನಲ್ಲಿ ಎಲ್ಲರನ್ನು ಆಹ್ವಾನಿಸಿ, ಅದ್ದೂರಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...