ಬೆಂಗಳೂರು: ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಒಂದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಬಿಸಿಯೂಟ ಮಾಡುವಾಗ ಮಹಿಳೆಯರು ಬಳೆ ತೊಟಗಟಿರಬಾರದು ಎಂಬುದು ಆ ಆದೇಶವಾಗಿದೆ. ಹೀಗಾಗಿ ಈ ಆದೇಶದ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದಾರೆ.
ಕರ್ನಾಟಕ ಸರ್ಕಾರ ಆದೇಶ ಒಂದನ್ನು ಹೊರಡಿಸಿದೆ. ಶಿಕ್ಷಣ ಇಲಾಖೆಯು ಪಿಎಂ ಪೋಷಣ್ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲಾದ ಯೋಜನೆಯಡಿ ಬಿಸಿಯೂಟ ಯೋಜನೆ ನೀಡಲಾಗುತ್ತದೆ. ಎಸ್ಡಿಎಂಸಿ ಸಮಿತಿ ಶಾಲೆಗೆ ಭೇಟಿ ನೀಡಬೇಕು. ಜೊತೆಗೆ ಬಿಸಿಯೂಟದ ಶುಚಿ – ರುಚಿಯನ್ನು ನೋಡಬೇಕು ಎಂದು ತಿಳಿಸಲಾಗಿದೆ. ಎಸ್ಡಿಎಂಸಿ ಸದಸ್ಯರು ಏನೆಲ್ಲಾ ಮಾಡಬೇಕು ಎಂಬುದನ್ನು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಸುಮಾರು 55 ಸಾವಿರ ಅಡುಗೆ ಸಿಬ್ಬಂದಿಯಿದ್ದು, ಅವರಲ್ಲಿ ಬಹುತೇಕ ಮಂದಿ ಕುಂಕುಮ, ಬಳೆ ತೊಡುವವರೇ ಹೆಚ್ಚಿದ್ದಾರೆ. ಇಲಾಖೆಯ ಈ ಆದೇಶ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ. ಮಕ್ಕಳ ಮೇಲೆ ಕಾಳಜಿ ಇದ್ದರೆ, ಈ ನಿಯಮವನ್ನು ಹಿಂದೆಯೇ ಮಾಡಬೇಕಿತ್ತು. ಅಷ್ಟಕ್ಕೂ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ? ಇದು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ದ್ವೇಷದ ರಾಜಕಾರಣ ಎಂದು ಹಿಂದೂ ಜನಜಾಗೃತಿ ಕಿಡಿಕಾರಿದೆ.