Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗಂಗಾವತಿಯಲ್ಲಿ ಇಂದು ಮತ್ತೊಮ್ಮೆ ಚಾಕು ಇರಿತ ಯುವಕರು..!

Facebook
Twitter
Telegram
WhatsApp

ಕೊಪ್ಪಳ : ಕ್ಷುಲ್ಲಕ ಕಾರಣಕ್ಕೆ ಗಂಗಾವತಿಯಲ್ಲಿ ಮತ್ತೆ ಚಾಕು ಇರಿತದ ಪ್ರಕರಣ ದಾಖಲಾಗಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಚಾಕು ಇರಿದಿದ್ದಾರೆ. ಪರಸ್ಪರ ಇಬ್ಬರು ಯುವಕರು ಚಾಕು ಇರಿದುಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಮರಭಗತ್ ಸಿಂಗ್ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಚಿನ್ (20), ಒಂಟಿ ರಾಜು( 28) ಇಬ್ಬರಿಗೂ ಚಾಕು ಇರಿದಿದ್ದಾರೆ. ಚಾಕು ಇರಿತಕ್ಕೊಳಗಾದ ಇಬ್ಬರನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಗಂಗಾವತಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ನಿನ್ನೆಯೂ ಸಹ ಚಾಕು ಇರಿತ ಘಟನೆಯಲ್ಲಿ ಗಂಗಾವತಿ ಜನ ಬೆಚ್ಚಿಬಿದ್ದಿದ್ದರು. ಇಂದು ಮತ್ತೆ ಸಹ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಚಾಕು ಇರಿದಿದ್ದಾರೆ. ಸದ್ಯ ಚಾಕು ಇರಿತಕ್ಕೊಳಗಾದವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು, ಭಾನುವಾರ ರಾಶಿ ಭವಿಷ್ಯ -ಏಪ್ರಿಲ್-28,2024 ಸೂರ್ಯೋದಯ: 05:55, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

ಯರೇಹಳ್ಳಿಯಲ್ಲಿ ಮತದಾನ ಬಹಿಷ್ಕಾರ : ಮರು ಮತದಾನ ನಡೆಸಿ, ವಾರದೊಳಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ : ಕರುನಾಡ ವಿಜಯಸೇನೆ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552   ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.27  : ಮೂಲಭೂತ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಯರೇಹಳ್ಳಿ ಗ್ರಾಮಸ್ಥರು ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ

error: Content is protected !!