ಬೆಳಗಾವಿ: ಸಾಹುಕಾರ್ ಗಳೆಲ್ಲಾ ಭಿಕ್ಷುಕರಾಗುತ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಸಚಿವ ಎಸ್ ಟಿ ಸೋಮಶೇಖರ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ರಮೇಶ್ ಅಷ್ಟೇ ಅಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದು ಸಾಲ ಬಾಕಿ ಇದೆ. ಲಕ್ಷ್ಮೀ ಒಡೆತನದ ಸಕ್ಕರೆ ಕಾರ್ಖಾನೆ ಸಾಲವೂ ಬಾಕಿ ಇದೆ. ರಾಜ್ಯದಲ್ಲಿ 6 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಇದೆ. ಇದರಲ್ಲಿ ರಾಜಕೀಯವೇನಿಲ್ಲ. ಮುಚ್ಚು ಮರೆಯೂ ಇಲ್ಲ ಎಂದಿದ್ದಾರೆ.
ನಾನು ಮುಖ್ಯಮಂತ್ರಿಯನ್ನು ನೇರವಾಗಿ ಕೇಳಬೇಕು. ನಾವೂ ಹದಿನೇಳು ಜನ ಸರ್ಕಾರ ತಂದಿರುವುದು. ನಾನೊಬ್ಬನೇ ತಂದಿಲ್ಲ. ಯಾರು ಏನು ಮಾಡ್ತಾರೆ, ಏನು ಎಂಬುದು ಮುಖ್ಯಮಂತ್ರಿ ಅವರಿಗೆ ಸಂಪೂರ್ಣ ಮಾಹಿತಿ ಇದೆ. ನಮಗೆ ಆ ಬಗ್ಗೆ ಎಲ್ಲಾ ಮಾಹಿತಿ ಇಲ್ಲ. ನಮಗೇನಿದ್ರು ಸಹಕಾರ ಖಾತೆ ಕೊಟ್ಟಿದ್ದಾರೆ, ಅದಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಸರಿ ಪಡಿಸುವ ಕೆಲಸ ನನ್ನದು. ಉಳಿದದ್ದೆಲ್ಲಾ ಮುಖ್ಯಮಂತ್ರಿಗಳದ್ದೆ ಪರಮಾಧಿಕಾರ ಎಂದಿದ್ದಾರೆ.
ಸಚಿವ ಸಂಪುಟದ ಬಗ್ಗೆ ಮಾತನಾಡಿ, ಏನು ಮಾಡಬೇಕು ಎಂಬುದು ಸಿಎಂಗೆ ಸಂಪೂರ್ಣ ಮಾಹಿತಿ ಇದೆ. ಕೇಂದ್ರ ನಾಯಕರಿಗೂ ಮಾಹಿತಿ ಇದೆ. ಮುಖ್ಯಮಂತ್ರಿಗಳು ಹೈಕಮಾಂಡ್ ಬಳಿ ಚರ್ಚೆ ಮಾಡಿ ಮುಂದುವರೆಯುತ್ತಾರೆ. ರಾಷ್ಟ್ರೀಯ ಪಕ್ಷವಾದ್ದರಿಂದ ಕೇಂದ್ರದ ನಾಯಕರಿರುತ್ತಾರೆ, ಕೇಂದ್ರದ ಅಧ್ಯಕ್ಷರಿರುತ್ತಾರೆ. ಅವರತ್ರ ಮಾತಾಡಿ ಮಾಡುವುದಕ್ಕೆ ಮುಖ್ಯಮಂತ್ರಿಗಳಿಗೆ ಅಧಿಕಾರವಿರುತ್ತದೆ ಎಂದಿದ್ದಾರೆ.