ನಾಳೆಯೇ SSLC ಫಲಿತಾಂಶ ; ಪರೀಕ್ಷೆ ಬರೆದಿರೋ ಮಕ್ಕಳಿಗೆ ಸುದ್ದಿ ಒನ್ ಕಡೆಯಿಂದ ಆಲ್ ದಿ ಬೆಸ್ಟ್

1 Min Read

 

 

ಬೆಂಗಳೂರು; ಈ ಬಾರಿ ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಅಧಿಕ ಮಂದಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನ ಬರೆದಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಅನ್ನೋದು ಮಕ್ಕಳ ಭವಿಷ್ಯಕ್ಕೆ ಬಹಳ ಮುಖ್ಯವಾದಂತ ಪರೀಕ್ಷೆಯಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಪರೀಕ್ಷೆಯ ಅಂಕಗಳೇ ಬುನಾದಿ. ಹೀಗಾಗಿ ವಿದ್ಯಾರ್ಥಿಗಳು ಮಾತ್ರವಲ್ಲ. ಪೋಷಕರು ಕೂಡ ಎಸ್ಎಸ್ಎಲ್ಸಿ ಫಲಿತಾಂಶಕ್ಕಾಗಿ ಕಾಯುತ್ತಾ ಇರುತ್ತಾರೆ. ನಾಳೆಯೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ ಎನ್ನಲಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಈ ಸಂಬಂಧ ಮಾಹಿತಿಯನ್ನು ನೀಡಿದೆ.

ಕಳೆದ ತಿಂಗಳು ಅಂದ್ರೆ ಮಾರ್ಚ್ ಮತ್ತು ಏಪ್ರಿಲ್ ನಡುವೆ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ರಾಜ್ಯದ ಎಲ್ಲೆಡೆ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರೆ. ಈಗಾಗಲೇ ಮೌಲ್ಯ ಮಾಪನ ಕಾರ್ಯವನ್ನು ಕರ್ನಾಟಕ ಪರೀಕ್ಷಾ ಮಂಡಳಿ ಮುಗಿಸಿದೆ. ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಬೆಳಗ್ಗೆ 11.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚುವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ನಾಳೆ ಬೆಳಗ್ಗೆ ಶಿಕ್ಷಣ ಸಚಿವರು ಫಲಿತಾಂಶ ಪ್ರಕಟಿಸಿದ ಕೂಡಲೇ ವಿದ್ಯಾರ್ಥಿಗಳು ತಮ್ಮ ತಮ್ಮ ಮೊಬೈಲ್ ನಲ್ಲಿಯೇ ಫಲಿತಾಂಶವನ್ನು ನೋಡಬಹುದು. ಹಾಗೇ ವೆಬ್ಸೈಟ್ ಮೂಲಕವೂ ಫಲಿತಾಂಶವನ್ನು ನೋಡಬಹುದು. http://karresult.nic.in ಜಾಲತಾಣದಲ್ಲಿ ಫಲಿತಾಂಶ ಲಭ್ಯವಾಗಲಿದೆ‌.

ಪರೀಕ್ಷೆ ಅನ್ನೋದು ಜೀವನಕ್ಕೆ ಬಹಳ ಮುಖ್ಯ ಹೌದು. ಆದರೆ ಅದೇ ಅಂತಿಮವೂ ಅಲ್ಲ. ಈ ಪರೀಕ್ಷೆಯ ಫಲಿತಾಂಶಗಳೆಲ್ಲಾ ಮುಂದಿನ ಓದಿಗೆ ಅನುಕೂಲ. ಒಮ್ಮೆ ಫೇಲ್ ಆದ ವಿದ್ಯಾರ್ಥಿಗಳು ಜೀವನದಲ್ಲೇನೂ ಫೇಲ್ ಆದಂತೆ ಅಲ್ಲ. ಪರೀಕ್ಷೆಯಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ಮತ್ತೆ ಮತ್ತೆ ಪ್ರಯತ್ನಿಸಿದರೆ ಎಂಥ ಡಲ್ ಆಗಿರುವ ಸ್ಟುಡೆಂಟ್ ಕೂಡ ಮತ್ತೆ ಪಾಸ್ ಆಗಿಯೇ ಆಗ್ತಾನೆ. ಹೀಗಾಗಿ ಈ ಬಾರಿಯ ಫಲಿತಾಂಶ ಅಂದುಕೊಂಡಂತೆ ಬಾರದೆ ಇದ್ದರು, ಫೇಲ್ ಆದರೂ ಮಕ್ಕಳು ಧೈರ್ಯವಾಗಿರಬೇಕೆಂಬುದೇ ಸುದ್ದಿ ಒನ್ ಕಳಕಳಿ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks