ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ಡೇಟ್ ಫಿಕ್ಸ್ ಆಗಿದೆ. ನಾಳೆಯೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ. 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಳೆಯೇ ತಿಳಿಯಲಿದೆ. ಮೇ 9ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ವರ್ಷ 8.69 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 4.41 ಲಜ್ಷ ಬಾಲಕರು ಪರೀಕ್ಷೆ ಬರೆದರೆ, 4.28 ಲಕ್ಷ ಬಾಲಕಿಯರು ಪರೀಕ್ಷೆ ಬರೆದಿದ್ದರು. ಫಲಿತಾಂಶವನ್ನು ನಾಳೆ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಘೋಷಣೆ ಮಾಡಲಿದ್ದು, ವೆಬ್ಸೈಟ್ ನಲ್ಲೂ ನೋಡಬಹುದು. kseeb.kar.nic.in ಮತ್ತು karresult.nic.in ವೆಬ್ಸೈಟ್ ಗೆ ಭೇಟಿ ನೀಡಿಯೂ ಫಲಿತಾಂಶ ಕಾಣಬಹುದಾಗಿದೆ.
ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ನಾಳೆ ಫಲಿತಾಂಶದ ಕುತೂಹಲ ಹೆಚ್ಚಾಗಿದೆ. ಫೇಲ್ ಆದ ವಿದ್ಯಾರ್ಥಿಗಳಿಗೂ ಪರೀಕ್ಚೆ ಬರೆಯಲು ಸಾಕಷ್ಟು ಅವಕಾಶವಿರುವ ಕಾರಣ, ಹೆಚ್ಚು ಚಿಂತೆಗೆ ಒಳಗಾಗಿವ ಅವಶ್ಯಕತೆ ಇರುವುದಿಲ್ಲ. ಫಲಿತಾಂಶ ನೋಡಿದ ಮೇಲೆ ಒಂದು ವೇಳೆ ಪಾಸಾಗದ ವಿದ್ಯಾರ್ಥಿಗಳು, ಈಗಷ್ಟೇ ಓದಿರುವುದನ್ನು ನೆನಪಿಟ್ಟುಕೊಂಡು ಇನ್ನಷ್ಟು ಓದುವ ಕಡೆಗೆ ಗಮನ ಹರಿಸಿ. ಪೋಷಕರು ಕೂಡ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬ ಬೇಕಾಗಿರುತ್ತದೆ.