ಇಂದಿನಿಂದ SSLC ಮೌಲ್ಯಮಾಪನ ಆರಂಭ : ಮೇ 2ನೇ ವಾರಕ್ಕೆ ಫಲಿತಾಂಶ ಸಾಧ್ಯತೆ

1 Min Read

 

 

ಬೆಂಗಳೂರು: ಈಗಾಗಲೇ ಪಿಯುಸಿ ಫಲಿತಾಂಶ ಬಂದಾಗಿದೆ. ಇನ್ನು ಎಸ್ಎಸ್ಎಲ್ಸಿ ಫಲಿತಾಂಶ ಬಾಕಿ ಇದೆ. ಈ ಬಾರಿ ಸುಮಾರು 8.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಬಾರಿಯ ಫಲಿತಾಂಶವನ್ನು ಆದಷ್ಟು ಬೇಗ ನೀಡಲು ಮಂಡಳಿ ಸೂಚನೆ ಯೋಜನೆ ಹಾಕಿಕೊಂಡಿದೆ. ಇನ್ನು ಇಂದಿನಿಂದ ಮೌಲ್ಯಮಾಪನ ಆರಂಭವಾಗಿದೆ.

ಮೇ 2ನೇ ವಾರಕ್ಕೆ ಫಲಿತಾಂಶ ಬರುವ ಸಾಧ್ಯತೆ ಇದೆ. ಈಗಾಗಲೇ ಮೌಲ್ಯ ಮಾಪನಕ್ಕೆ ಹಾಜರಾಗಬೇಕಿದ್ದ ಎಲ್ಲಾ ಶಿಕ್ಷಕರಿಗೂ ಸೂಚನೆ ನೀಡಲಾಗಿದೆ. ಮೇ ಎರಡನೇ ವಾರದಲ್ಲಿಯೇ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಇರುವ ಕಾರಣ ಮೌಲ್ಯಮಾಪನಕ್ಕಾಗಲೀ, ಫಲಿತಾಂಶಕ್ಕಾಗಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.

ಇನ್ನು ಫಲಿತಾಂಶ ಬಂದ ಮೇಲೆ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಿಕೊಳ್ಳಬಹುದು. karresult.nic.in ನಲ್ಲಿ ಫಲಿತಾಂಶ ಪರಿಶೀಲಿಸಬಹುದು. ವೆಬ್ಸೈಟ್ ಓಪನ್ ಆದ ಬಳಿಕ 2023ರ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ, ನಿಮ್ಮ ರೋಲ್ ನಂಬರ್ ಹಾಕಬೇಕಾಗುತ್ತದೆ. ಬಳಿಕ ಫಲಿತಾಂಶ ಕಾಣಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *