ಶಿವಮೊಗ್ಗ: ರಾಜ್ಯದೆಲ್ಲೆಡೆ ಎಸ್ಎಸ್ಎಲ್ಸಿ ಎಕ್ಸಾಂ ಶುರುವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟ ಕೂಡ. ಈ ಸಮಯವನ್ನ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳುವ ಹಾಗೆಯೇ ಇಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿ ಕೆಟ್ಟದಾದಾಗ ಆ ವರ್ಷ ಮಕ್ಕ ಭವಿಷ್ಯವೇ ಹಾಳಾದಂತೆ ಆಗುತ್ತದೆ. ಎಸ್ಎಸ್ಎಲ್ಸಿ ಎಕ್ಸಾಂ ಸಮಯದಲ್ಲಿ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಆರ್ಶೀಯಾ ಮನಿಯಾರ್ ಕೊಪ್ಪಳದ ನಿವಾಸಿ. ಆದ್ರೆ ಶಿವಮೊಗ್ಗದ ಹೊಸನಗರ ತಾಲೂಕಿನ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದಾರೆ. ಇಂದು ಇಂಗ್ಲೀಷ್ ಪರೀಕ್ಷೆ ಇತ್ತು. ಆದರೆ ಪರೀಕ್ಷೆ ಸಮಯದಲ್ಲಿಯೇ ಆಕೆಯ ತಂದೆ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಸತಿ ಶಾಲೆಯ ಶಿಕ್ಷಕರು ಆರ್ಶೀಯಾಳನ್ನು ಕೊಪ್ಪಳಕ್ಕೆ ಕರೆದೊಯ್ದರು. ತಂದೆಯ ದರ್ಶನ ಮಾಡಿಸಿ, ಬಳಿಕ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಶವಸಂಸ್ಕಾರಕ್ಕೆ ಸಮಯವಾಗಿದ್ದ ಕಾರಣ, ಪರೀಕ್ಷೆ ಮುಗಿದ ಕೂಡಲೇ, ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ ಮಾಡಲಾಗಿದೆ.