ಚಿತ್ರದುರ್ಗ, (ನ.18) : ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಕೃಷಿ ಸಂಶೋಧನಾ ಪರಿಷತ್ ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ನವೆಂಬರ್-18ರ ಗುರುವಾರದಂದು ಭಾರತೀಯ ಕೃಷಿ ಸಂಶೋಧನಾ ತರಬೇತಿ ಪ್ರವೇಶ ಪರೀಕ್ಷೆಯ ರಾಷ್ಟ್ರಮಟ್ಟದ ರ್ಯಾಂಕ್ಗಳನ್ನು ಪ್ರಕಟಿಸಿಲಾಗಿದ್ದು, ಅದರಲ್ಲಿ ಕಾಲೇಜಿನ ವಿದ್ಯಾರ್ಥಿ ಕು.ಧ್ವುವ ಎನ್ ಎಲ್ ಚೌಧರಿ, ರಾಷ್ಟ್ರಮಟ್ಟದಲ್ಲಿ 354ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಂತರದ ಸ್ಥಾನಗಳಲ್ಲಿ ಕು. ಭರತ್ ಆರ್ ಎಸ್, 700ನೇ ರ್ಯಾಂಕ್, ಕು. ಹರಿಪ್ರಿಯಾ, 3626ನೇ ರ್ಯಾಂಕ್ಗಳನ್ನು ಪಡೆದು ಚಿತ್ರದುರ್ಗ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ದಾಖಲಿಸಿದ್ದಾರೆ. ಉಳಿದಂತೆ ಒಟ್ಟು 36 ವಿದ್ಯಾರ್ಥಿಗಳು ಅರ್ಹತಾ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಕಾಲೇಜಿನ ವಿಶೇಷ.
ಈ ಅಮೋಘ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ.ರವಿ ಟಿ.ಎಸ್. ಪ್ರಾಂಶುಪಾಲರಾದ ಗಂಗಾಧರ್ ಈ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.