ಚಿತ್ರದುರ್ಗ : ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು 2022-2023ರ “ಅಂತರಾಷ್ಟೀಯ ಸೈನ್ಸ್ ಒಲಂಪಿಯಾಡ್ ಫೌಂಡೇಷನ್” ಆಯೋಜಿಸಲಾಗಿದ್ದ, ಅಂತರಾಷ್ಟ್ರೀಯ ಜಿ.ಕೆ.ಒಲಂಪಿಯಾಡ್ ಪರೀಕ್ಷೆಯ ಫಲಿತಾಂಶದ ವಿವರ.
(ಪದಕ ಮತ್ತು ನಗದು ಬಹುಮಾನಗಳ ಪಟ್ಟಿ)
25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ((Medal of excellence)
10 ವಿದ್ಯಾರ್ಥಿಗಳಿಗೆ – (Medal of Distinction)
10 ವಿದ್ಯಾರ್ಥಿಗಳಿಗೆ – ₹ 500/- ಬಹುಮಾನ
3 ವಿದ್ಯಾರ್ಥಿಗಳಿಗೆ – ₹ 1000/- ಬಹುಮಾನ
2 ವಿದ್ಯಾರ್ಥಿಗಳಿಗೆ – ₹ 4000 ನಗದು ಬಹುಮಾನ
3 ವಿದ್ಯಾರ್ಥಿಗಳಿಗೆ – ₹ 2500 ನಗದು ಬಹುಮಾನ
3 ವಿದ್ಯಾರ್ಥಿಗಳಿಗೆ – ₹ 5000 ನಗದು ಬಹುಮಾನ
3 ವಿದ್ಯಾರ್ಥಿಗಳಿಗೆ – ಝ್ಹೋನಲ್ ಚಿನ್ನದ ಪದಕ
3 ವಿದ್ಯಾರ್ಥಿಗಳಿಗೆ – ಝ್ಹೋನಲ್ ಬೆಳ್ಳಿ ಪದಕ
3 ವಿದ್ಯಾರ್ಥಿಗಳಿಗೆ – ಝ್ಹೋನಲ್ ಕಂಚಿನ ಪದಕ
21 ವಿದ್ಯಾರ್ಥಿಗಳಿಗೆ 32.500/ರೂ ನಗದು ಬಹುಮಾನ ಪಡೆಯುವುದರೊಂದಿಗೆ ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿರುತ್ತಾರೆ. ಈ ಫಲಿತಾಂಶದಿಂದ ಸಂತೋಷಗೊಂಡು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಅಮೋಘ್ ಬಿ ಎಲ್, ಆಡಳಿತಾಧಿಕಾರಿಗಳಾದ ಡಾ|| ರವಿ ಟಿ ಎಸ್ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಪದಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಂ ಎಸ್ ಅಭಿನಂದಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವುದರೊಂದಿಗೆ ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆಯುವುದರ ಜೊತೆ ಇನ್ನಿತರ ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಶಾಲೆಯ JEE/NEET ಫೌಂಡೇಷನ್ ಶೈಕ್ಷಣಿಕ ಸಂಯೋಜಕರಾದ ಶ್ರೀಸಾಂಭಶಿವರಾವ್ ನಗುಲ ಮತ್ತು ಬೋಧಕ ವರ್ಗ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.