ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ವಿವಿಧ ವೇಷ ಧರಿಸಿ ಕಂಗೊಳಿಸಿದ ಪುಟಾಣಿಗಳು

2 Min Read

 

ಸುದ್ದಿಒನ್,ಚಿತ್ರದುರ್ಗ, ಸೆಪ್ಟೆಂಬರ್. 06 :  ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ಬ್ಲ್ಯೂಜೆಮ್ಸ್‍ನ ಚಿಣ್ಣರ ವಿಭಾಗದಲ್ಲಿಂದು “ಅನಂತಕೃಷ್ಣ ಬೃಹತ್ ಸಭಾಂಗಣದಲ್ಲಿ” “ಶ್ರೀಕೃಷ್ಣ ಜನ್ಮಾಷ್ಟಮಿ” ಆಚರಿಸಲಾಯಿತು.

ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿ”  ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾಗಿದೆ. ಪ್ರಾಚೀನ ದಂತಕಥೆಗಳ ಪ್ರಕಾರ ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಮಥುರಾ ನಗರದಲ್ಲಿ ಜನಿಸಿದನು.

 

ಜನ್ಮಾಷ್ಟಮಿ ನಿಮಿತ್ತ ಚಿಣ್ಣರು ಕೃಷ್ಣ ರಾಧೆ, ರುಕ್ಮಿಣಿ, ಬಲರಾಮ, ಕಂಸ, ಶೇಷನಾಗ, ಮಕ್ಕಳ ತಾಯಂದಿರು ದೇವಕಿ, ಯಶೋದೆ ವೇಶಧರಿಸಿ ಹೀಗೆ ಹಲವು ವೇಷದಾರಿಗಳಾಗಿ ಪಾಲ್ಗೊಂಡಿದ್ದರು. ನಂತರ ಕೃಷ್ಣನ ಮೂರ್ತಿಗೆ ಬೆಣ್ಣೆ ಅರ್ಪಿಸಿ ಆರತಿ ಬೆಳಗಿ ಪೂಜೆ ಮಾಡಲಾಯಿತು. ಪೋಷಕರು ತಮ್ಮ ಮುದ್ದು ಮಕ್ಕಳ ಜೊತೆ ರ್ಯಾಂಪ್ ವಾಕ್ ಮಾಡಿದರು.

ಶಾಲೆಯ ಪ್ರಾಂಶುಪಾಲರಾದ  ಪ್ರಭಾಕರ್ ಎಂ. ಎಸ್. ಕಾರ್ಯಕ್ರಮ ಕುರಿತು ಮಾತನಾಡಿ ಭಾರತದಾದ್ಯಂತ ಕೃಷ್ಣ ದೇವಸ್ಥಾನಗಳಲ್ಲಿ ಭವ್ಯವಾದ ಆಚರಣೆ ದಿನವನ್ನು ಆಚರಿಸಲಾಗುತ್ತದೆ. ಮಥುರಾ, ವೃಂದಾವನ ಮತ್ತು ದ್ವಾರಕಾ ಈ ಪುಣ್ಯ ಸ್ಥಳಗಳು. ಶ್ರೀಕೃಷ್ಣನ ತನ್ನ ಬಾಲ್ಯವನ್ನು ಕಳೆದ ಸ್ಥಳಗಳು ಪ್ರಪಂಚದಾದ್ಯಂತ ಪ್ರಸಿದ್ಧವಾದ ಪುಣ್ಯಸ್ಥಳವಾಗಿವೆ. ಕೃಷ್ಣ ಆರಾಧನೆಯಿಂದ ಹೆಚ್ಚಿನ ಸಂತೋಷ ಮತ್ತು ಏಕತೆಯ ಮನೋಭಾವವನ್ನು ತರುತ್ತದೆ. ಶ್ರೀಕೃಷ್ಣನು ಗೀತೆಯಲ್ಲಿ ಅನೇಕ ಸಲಹೆಗಳು ಮತ್ತು ಉಪದೇಶಗಳನ್ನು ನೀಡಿದ್ದಾನೆ. ಆತ ಉಚ್ಚರಿಸಿದ ಪ್ರತಿಯೊಂದು ಪದವೂ ಅನ್ಯಾಯದ ವಿರುದ್ದ ಯಾವಾಗಲೂ ಸ್ಫೂರ್ತಿಯಾಗಿದೆ ಎಂದರು.

ಮಕ್ಕಳು ಉತ್ಸಾಹಭರಿತವಾಗಿ  ಹಲವು ರೂಪಕಗಳಾದ ಗೋವರ್ದನಗಿರಿ, ಬರ್ತ್ ಆಫ್ ಕೃಷ್ಣ, ಬಟರ್ ಸ್ಟೀಲಿಂಗ್(ಬೆಣ್ಣೆ ಕದ್ದ ಕೃಷ್ಣ) ಮೊಸರು ಮಡಕೆ ಹೊಡೆತ, ರಾಧೆ ಮತ್ತು ಕೃಷ್ಣನ ಟಗ್ ಆಫ್ ವಾರ್, ಕಂಸ ಮರ್ದನ, ತಾಯಿಂದ ದೂರವಾದ ಕೃಷ್ಣ ಹೀಗೆ ಹಲವು ಕ್ರಿಯಾತ್ಮಕ ರೂಪಕಗಳನ್ನು ಅಭಿನಯಿಸಿ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು.

ಸಂಭ್ರಮದ ಆಚರಣಾ ಕಾರ್ಯಕ್ರಮದಲ್ಲಿ  ಮುದ್ದುಮಕ್ಕಳು ಪಿಕಾಕ್ ಫೆದರ್ಗಳಾಗಿ ಭಾಗವಹಿಸಿ  ಈ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮದಲ್ಲಿ ಪೋಷಕರು ಭಾಗವಹಿಸಿ ಕಾರ್ಯಕ್ರಮ ಆಚರಣೆಯ ಮಹತ್ವ ಕುರಿತು ತಮ್ಮ ಭಾವನೆಗಳೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ “ಎಸ್.ಆರ್.ಎಸ್ ಶಿಕ್ಷಣ ಸಮೂಹ ಸಂಸ್ಥೆಯ” ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಸಂಸ್ಥೆಯ ಮಾರ್ಗದರ್ಶಕರಾದ ಶ್ರೀಮತಿ ಲಿಖಿತಾ ಅಮೋಘ್  ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರಾದ ಶ್ರೀಮತಿ ಡಾ|| ಆಶ್ರೀತಾಕಿರಣ್, ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ಶಾಂತಕುಮಾರಿ ಮತ್ತು ಬೋಧಕ ವೃಂದದವರಾದ ಗೀತಾಪಾಟೀಲ್, ಕವಿತ, ಶಿಲ್ಪಾ,ಸುಷ್ಮ, ಮಂಗಳ,ತೇಜು, ಶೃತಿ, ಸುಮಯ, ಸಿರಿಷಾ, ಲತಾ, ಸಪ್ನ, ರೇಖಾ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *