ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.15 : ಹತ್ತನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮುಂದೆ ಪಿಯುಸಿಯಲ್ಲಿ ಕಲಿಯಬೇಕಾದ ವಿಜ್ಞಾನ ವಿಷಯಗಳ ಬಗ್ಗೆ ಚಿತ್ರದುರ್ಗದ ಎಸ್ ಆರ್ ಎಸ್ ಪಿಯು ಕಾಲೇಜಿನಲ್ಲಿ ನುರಿತ ಅನುಭವಿ ಉಪನ್ಯಾಸಕರಿಂದ ಬಹು ಆಯ್ಕೆ ಮಾದರಿಯಲ್ಲಿ ನೀಟ್, ಜೆಇಇ, ಸಿಇಟಿ ಪರೀಕ್ಷೆಗಳಿಗೆ ಅನುಗುಣವಾಗಿ ಸುಮಾರು 25 ದಿನಗಳ ಕಾಲ ನಡೆಯುವ ಚಾಣಕ್ಯ ಫೌಂಡೇಷನ್ ತರಗತಿಗಳ ಬೇಸಿಗೆ ಶಿಬಿರ ಏಪ್ರಿಲ್ 15ರಂದು ಉದ್ಘಾಟನೆಯಾಯಿತು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ರವಿ ಟಿ.ಎಸ್ ಅವರು ಓರ್ವ ವ್ಯಕ್ತಿ ಜಗತ್ತಿಲ್ಲಿ ಶ್ರೀಮಂತ ಎನಿಸಿಕೊಳ್ಳಬೇಕಾದರೆ ಹಣದಿಂದಲ್ಲ, ಜ್ಞಾನದಲ್ಲಿ ಶ್ರೀಮಂತನಾಗಬೇಕು ಎಂದು ಹೇಳುತ್ತಾ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ನೀಟ್, ಜಿಇಇ, ತರಬೆತಿಯ ಸಂಚಾಲಕರಾದ ಶ್ರೀ ಶ್ರೀನಿವಾಸ ಕುಮಾರ್ ಡಿ, ಹಾಗೂ ಶ್ರೀ ಅಮಾನ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಅಂಕಗಳಿಗಿಂತ ಸಂಸ್ಕಾರ ಮುಖ್ಯ ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಅಣ್ಣಪ್ಪ ಎಚ್. ಇವರು ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಉಪ ಪ್ರಾಂಶುಪಾಲರಾದ ಶ್ರೀ ಮನೋಹರ ಬಿ ಅವರು ನೀಟ್, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.