ಗದಗ: ಸುಪ್ರೀಂ ಕೋರ್ಟ್ ಆದೇಶವಿದ್ದರೂ ಆಜಾನ್ ಶಬ್ಧ ಮಾತ್ರ ಕಡಿಮೆಯಾಗಿಲ್ಲ ಎಂದು ಶ್ರೀರಾಮ ಸೇನೆ ಕುಪಿತಗೊಂಡಿದೆ. ಈ ಸಂಬಂಧ ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಿದೆ. ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ್ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಖಾನಪ್ಪನವರ್, ಮೇ 9 ಮತ್ತು 10 ರಂದು ಹಿಂದೂ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಭಜನೆ ಹಾಕುವ ಮೂಲಕ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಹೋರಾಟಕ್ಕೆ ಸ್ಪಂದಿಸಿದ್ದ ಸರಕಾರ, ಮೈಕ್ ಬಳಸುವ ಸ್ಥಳಗಳಲ್ಲಿ ಸುಪ್ರೀಂ ಕೋರ್ಟ್ ಗೈಡ್ ನೈಲ್ ಪಾಲನೆಯಾಗಬೇಕು ಅಂತಾ ಪ್ರತಿಪಾದಿಸಿತ್ತು. ಕೆಲ ಮಸೀದಿಗಳಿಗೆ ನೋಟಿಸ್ ನೀಡಿತ್ತು. ಆದ್ರೂ ಕೆಲ ದಿನಗಳ ನಂತರ ಮತ್ತೇ ಅನೇಕ ಮಸೀದಿಗಳಲ್ಲಿ ಎಂದಿನಂತೆ ಆಜಾನ್ ಜೋರಾಗಿಯೇ ಕೇಳಿಸುತ್ತಿದೆ.
ಹೀಗಾಗಿ ಇದರ ವಿರುದ್ಧ 2ನೇ ಹಂತದ ಹೋರಾಟ ನಡೆಯಲಿದೆ. ಈ ವೇಳೆ ಬಿಜೆಪಿ ಶಾಸಕ, ಸಚಿವರ ಕಚೇರಿ, ಮನೆ ಮುಂದೆ ಧರಣಿ ಕೂರುತ್ತೇವೆ. ಹೋರಾಟಕ್ಕೆ ಸ್ಪಂದನೆ ಸಿಗದಿದ್ದರೆ, ಸುಪ್ರೀಂ ಕೋರ್ಟ್ ಆದೇಶ ಪಾನಲೆಯಾಗದಿದ್ದಲ್ಲಿ ಮುಂದಿನ ಹೋರಾಟ ನಡೆಸೋದಾಗಿ ತಿಳಿಸಿದರು. ಮೈಕ್ ಆಜಾನ್ ವಿರುದ್ಧ ರಾಮಸೇನೆ ಸುಮಾರು 20 ವರ್ಷದ ಸುಧೀರ್ಘ ಹೋರಾಟ ನಡೆಸಲಾಗಿದೆ.. ಇದಕ್ಕೂ ಮುಂಚೆ ಅನೇಕ ಸಂಘಟನೆಗಳು ಹೋರಾಟ ನಡೆಸಿದ್ದವು ಎಂದು ಮಾಹಿತಿ ನೀಡಿದ್ದಾರೆ.