Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಪ್ಪು ಸ್ಮರಣೆಯಂದು ಶ್ರೀದೇವಿ ಭಾವುಕ ಪೋಸ್ಟ್ : ಯುವ ರಾಜ್‍ಕುಮಾರ್ ಗೂ ಎಚ್ಚರಿಕೆ..!

---Advertisement---

ಇಂದು ಪುನೀತ್ ರಾಜ್‍ಕುಮಾರ್ 3ನೇ ವರ್ಷದ ಪುಣ್ಯಸ್ಮರಣೆ. ಇಡೀ ರಾಜ್ಯ ಅಪ್ಪು ಅವರಿಗೆ ನಮನ ಸಲ್ಲಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಇಂದು ಅಭಿಮಾನಿಗಳು ಅವರ ಸಮಾಧಿಯ ದರ್ಶನ ಪಡೆದಿದ್ದಾರೆ. ದೊಡ್ಮನೆಯ ಸೊಸೆಯಾಗಿದ್ದ ಶ್ರೀದೇವಿ ಅವರು ಕೂಡ ಇಂದು ಅಪ್ಪು ಸ್ಮರಣೆ ಮಾಡಿದ್ದಾರೆ. ಅದೇ ಪೋಸ್ಟ್ ನಲ್ಲಿ ಯುವ ರಾಜ್‍ಕುಮಾರ್ ಅವರಿಗೂ ಎಚ್ಚರಿಕೆಯನ್ಮು ನೀಡಿದ್ದಾರೆ‌ .

‘ಅಕ್ಟೋಬರ್ 29-2024ರಂದು ನಿಮ್ಮ ಕಳೆದುಕೊಂಡ ಇಡೀ ಕರ್ನಾಟಕ ಸ್ತಬ್ಧವಾಗಿತ್ತು. ಎರಡು ಲಕ್ಷಕ್ಕೂ ಅಧಿಕ ಜನ ನಿಮ್ಮ ದರ್ಶನ ಮಾಡಲು ಬಂದಿದ್ದರು. ನನಗೂ 48 ಗಂಟೆಗಳ ಕಾಲ ಆಘಾತವಾದಂತಾಗಿತ್ತು. ಆ ದಿನ ಇವತ್ತು ಮರುಕಳುಹಿಸಿದೆ. ಪುನೀತ್ ರಾಜ್‍ಕುಮಾರ್ ಸದಾ ಖುಷಿ, ಸಂತೋಷ, ನಗುವನ್ನೇ ಎಲ್ಲರಿಗೂ ಹಂಚುತ್ತಿದ್ದರು. ಸಣ್ಣ ಅಥವಾ ದೊಡ್ಡ ವಿಚಾರವಾಗಿರಲಿ ನಿಮ್ಮ ಮಾರ್ಗದರ್ಶನ ಸರಿಯಾಗಿ ಇರ್ತಾ ಇತ್ತು. ನಿಮ್ಮ ಮಾತುಗಳು ಸ್ಪೂರ್ತಿದಾಯಕವಾಗಿರುತ್ತಾ ಇದ್ದವು. ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಕಲಿಯಬೇಕೆಂದು ಪುನೀತ್ ರಾಜ್‍ಕುಮಾರ್ ಹೇಳುತ್ತಿದ್ದರು. ಅಪ್ಪು ಅವರ ಈ ಮಾತನ್ನು ಪಾಲಿಸಿದ್ದಕ್ಕೆ ಇಂದು ನನ್ನನ್ನು ನಾನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ.

ಹುಡುಗಿಯರು ಮತ್ತು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರವಾಗಿರಬೇಕು ಎಂದು ಯಾವಾಗಲೂ ನೀವೂ ಸಲಹೆ ನೀಡುತ್ತಿದ್ರಿ. ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ಉದಾಹರಣೆ ನೀಡುತ್ತಿದ್ರಿ. ಆಗ ನನಗೆ ಅರ್ಥವಾಗಿರಲಿಲ್ಲ. ಆದರೆ ಈಗ ಅರ್ಥವಾಗಿದೆ. ನನ್ನ ಜೀವನದಲ್ಲಿ ಕಷ್ಟ ಹಾಗೂ ದೊಡ್ಡ ಪಾಠವನ್ನೇ ಕಲಿತಿದ್ದೇನೆ. ಸ್ತ್ರೀದ್ವೇಷಿಯಾಗಿರುವವರು ನನ್ನ 10 ವರ್ಷ ಸಮಯ ಮತ್ತು ವೃತ್ತಿಯನ್ನು ಕಿತ್ತುಕೊಂಡರು. ಅದಕ್ಕೆ ತಕ್ಕ ಬೆಲೆಯನ್ನು ಅವರು ತರಲೇಬೇಕು. ಇದು ನನ್ನ ಪ್ರಾಮೀಸ್ ಅಂತಾನೂ ಎಚ್ಚರಿಕೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...