ಶ್ರೀ ತುಳಜಾ ಭವಾನಿ ದೇವಸ್ಥಾನದ ಕಳಸ ಸ್ಥಾಪನೆ

1 Min Read

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಫೆ.06) :  ಲಕ್ಷ್ಮೀಸಾಗರ ಗೇಟ್ ಬಳಿಯ ಶ್ರೀ ತುಳಜಾ ಭವಾನಿ ದೇವಸ್ಥಾನ ಟ್ರಸ್ಟ್ ವತಿಯಿಂದ ಅಮ್ಮನವರ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ಎರಡನೇ ದಿನವಾದ ಇಂದು ಬೆಳಿಗ್ಗೆ ಪುಣ್ಯಾಹ ಬಿಂಬಶುದ್ದಿ ಕಳಸ ಸ್ಥಾಪನೆ ಬಿಂಬ ಶುದ್ದಿ ಹವನ ಅಕ್ಷತ ಹೋಮ ಬಿಂಬ ಜಲಾಧಿವಾಸ ಕಲಶಾಭೀಷೇಕ ಕುಂಡಶುದ್ದಿ, ಅಗ್ನಿ ಪ್ರತಿಷ್ಠಾಪನೆ ಸೌರಹೋಮ ಕಾರ್ಯಕ್ರಮ ನಡೆಯಿತು.

ಸಂಜೆ ಅಗ್ನಿಜನನ ಹೋಮ, ಪ್ರತಿಷ್ಠಾ ಹೋಮ, ಅಧಿವಾಸ ಹೋಮ, ಶಾಂತಿ ಹೋಮ, ಪೀಠಾಧಿವಾಸ ಹೋಮ, ಪ್ರಾಸಾಧಿವಾಸ ಹೋಮ, ಶೀಖರ ಕಲಶಾಧಿವಾಸ ಹೋಮ, ಮಂಡಲಪೂಜಾ ಅಷ್ಟಬಂಧಿ ಶುದ್ದಿರತ್ನನ್ಯಾಸ ರುದ್ರ ಜಪ ಪಂಚಶಾಂತಿ ಪಂಚಾಕ್ಷರಿ ಜಪ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಸತೀಶ್ ಮಹಳದ್ಕರ್ ಕಾರ್ಯದರ್ಶಿ ಸಂತೋಷ ಮಹಳದ್ಕರ್, ಕಿರುತೆರೆಯ ನಟ ಗಣೇಶ್, ನಾಗಾರಾಜ್ ಬೇದ್ರೆ, ಮಮತ, ವ್ಯವಸ್ಥಾಪಕರಾದ ದಾಸ್ಯನಾಯ್ಕ್ ಭಾಗವಹಿಸಿದ್ದರು.

ಶಿರಸಿಯ ನಾಗರಾಜ್ ಭಟ್ಟರು ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಫೆ.7 ರಂದು ಬೆಳಿಗ್ಗೆ ದೇವರ ಪ್ರತಿಷ್ಠೆ ಶಿಖರ ಪ್ರತಿಷ್ಠೆ ಸಪ್ತಶತಿ ಪಾರಾಯಣ, ಸಂಜೆ ಕಲಾತತ್ವ ಹೋಮ, ಕಲಶಾಭೀಷೇಕ, ನವಕ್ಷಾರಿ ಜಪ ಬ್ರಹ್ಮ ಕಳಶ ಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *