in ,

ಜನವರಿ 27 ರಿಂದ ಫೆಬ್ರವರಿ 11 ರವರೆಗೆ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,ಜ. 17 : ಹಿರಿಯೂರು ಪಟ್ಟಣದ ದಕ್ಷಿಣ ಕಾಶಿಯೆಂದು ಹೆಸರಾಗಿರುವ ಹಿರಿಯೂರು ಪಟ್ಟಣದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಫೆಬ್ರವರಿ 7ರಂದು ಮಧ್ಯಾಹ್ನ 12ಕ್ಕೆ ಜರುಗಲಿದೆ.

ಕನ್ನಡ ನಾಡಿನ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಇದೇ ಜನವರಿ 27 ರಿಂದ ಕಂಕಣ ಕಲ್ಯಾಣೋತ್ಸವದೊಂದಿಗೆ ಪ್ರಾರಂಭಗೊಂಡು, ಫೆಬ್ರವರಿ 11 ರವರೆಗೆ ಬಹಳ ವಿಜೃಂಭಣೆ ನಡಯಲಿದೆ.

ಜನವರಿ 28ರಂದು ರಾತ್ರಿ 8ಕ್ಕೆ ಮಂಟಪೋತ್ಸವ,

ಜ.29ರಂದು ರಾತ್ರಿ 8ಕ್ಕೆ ಗಿಳಿ ವಾಹನೋತ್ಸವ,

ಜ.30ರಂದು ರಾತ್ರಿ 8ಕ್ಕೆ ಗಂಡುಭೇರುಂಡ ವಾಹನೋತ್ಸವ,

ಜ.31ರಂದು ರಾತ್ರಿ 8.00ಕ್ಕೆ ನವಿಲು ವಾಹನೋತ್ಸವ,

ಫೆ.1ರಂದು ರಂದು ರಾತ್ರಿ 8ಕ್ಕೆ ಸಿಂಹ ವಾಹನೋತ್ಸವ,

ಫೆ.2ರಂದು ರಾತ್ರಿ 8ಕ್ಕೆ ನಂದಿ ವಾಹನೋತ್ಸವ,

ಫೆ.3ರಂದು ರಾತ್ರಿ 8ಕ್ಕೆ ಸರ್ಪ ವಾಹನೋತ್ಸವ,

ಫೆ.4ರಂದು ರಾತ್ರಿ 8.00ಕ್ಕೆ ಅಶ್ವ ವಾಹನೋತ್ಸವ,

ಫೆ.5ರಂದು ರಾತ್ರಿ 8ಕ್ಕೆ ಗಜ ವಾಹನೋತ್ಸವ (ಮೂರು ಕಳಸ ಸ್ಥಾಪನೆ)

ಫೆ.6ರಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಸವ ವಾಹನೋತ್ಸವ (ದೊಡ್ಡ ಉತ್ಸವ) ನಡೆಯಲಿದೆ.
ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿ ಬೀರೇನಹಳ್ಳಿ ಮಜುರೆ ಕರಿಯಣ್ಣಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ

ಫೆ.7ರಂದು ಬೆಳಿಗ್ಗೆ 9ಕ್ಕೆ ಶಿವಧನಸ್ಸಿನ ಗಂಗಾ ಸ್ನಾನದ ಉತ್ಸವ ನಂತರ ಮಧ್ಯಾಹ್ನ 12ಕ್ಕೆ ಮಘಾ ನಕ್ಷತ್ರದಲ್ಲಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದ್ದು, ಮಧ್ಯಾಹ್ನ 1.30ಕ್ಕೆ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ರಥೋತ್ಸವ ನಡೆಯಲಿದೆ.

ಫೆ.8 ರಂದು ಸಂಜೆಕ್ಕೆ ಸಿದ್ಧನಾಯಕ ವೃತ್ತದಲ್ಲಿ ಶ್ರೀ ಮದಕರಿ ಯುವಕ ಸಂಘದಿಂದ ಜಂಗೀ ಕುಸ್ತಿಯನ್ನು ಏರ್ಪಡಿಸಲಾಗಿದೆ.

ಫೆ.9ರಂದು ರಾತ್ರಿ 8ಕ್ಕೆ ಸುಮಂಗಲೆಯರಿಂದ ಕರ್ಪೂರದಾರತಿ,

ಫೆ.10ರಂದು ರಾತ್ರಿ 8ಕ್ಕೆ  ಚಿಟುಗ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ, ವಸಂತೋತ್ಸವ, ಓಕಳಿ ಪಾರ್ವಟೋತ್ಸವ ನಡೆಯಲ್ಲಿದೆ.

ಫೆ.11ರಂದು ಮಧ್ಯಾಹ್ನ 12.00ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಹಿರಿಯೂರು ತಾಲ್ಲೂಕು ತಹಶೀಲ್ದಾರ್ ಪ್ರಶಾಂತ ಕೆ.ಪಾಟೀಲ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮಾಸಿಕ ಪಿಂಚಣಿ ಮೂರರಿಂದ ಐದು ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪಾಕಿಸ್ತಾನ ತನ್ನ ಪಾಠವನ್ನು ಕಲಿತಿದೆ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್