ವರದಿ ಮತ್ತು ಫೋಟೋ ಕೃಪೆ
ಟಿ.ಶಿವಮೂರ್ತಿ, ಕೋಡಿಹಳ್ಳಿ
ಚಳ್ಳಕೆರೆ ತಾ.
ಮೊ : 97427 56304
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 17 : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು,ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಶರಣ ಬಸವೇಶ್ವರ ಸ್ವಾಮಿ ತೇರಿಗೆ ಭಾರಿ ವಂಶಸ್ಥರ ಕುಟುಂಬದ ವತಿಯಿಂದ ಜರುಗುವ ಮೀಸಲು ಪೂಜಾ ಸಕಲ ವಿಧಿ ವಿಧಾನಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮದ ಮುಖಂಡರು ತೇರಿಗೆ ಚಾಲನೆ ನೀಡಿದರು.
ನಂತರ ಬಣ್ಣ ಬಣ್ಣದ ಭಾವುಟ ಮತ್ತು ಹೂವಿನ ಹಾರಗಳಿಂದ, ಶೃಂಗಾರಗೊಂಡ ತೇರು ಅದ್ದೂರಿಯಾಗಿ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಪಾದಗಟ್ಟೆ ಸಮೀಪದ ಶ್ರೀ ಮಹಶ್ರೀ ವಾಲ್ಮೀಕಿ ಪುತ್ಥಳಿ ವೃತ್ತದ ಬಳಿ ಸೇರಿತು. ನಂತರ ರಥದ ಮುಕ್ತಿ ಭಾವುಟವನ್ನು ಗ್ರಾಮದ ಪಾಲಯ್ಯನವರ ಪುತ್ರ ಶ್ರೀ ಅನಿಲ್ ಕುಮಾರ್ ರವರು ಒಂಬತ್ತು ಸಾವಿರದ ಐದುನೂರು ( 9,500 ) ಗೆ ಮುಕ್ತಿ ಭಾವುಟವನ್ನು ಪಡೆದು ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.
ನಂತರ ಸಂಜೆಯ ವೇಳೆ ತೇರಿನ ಭವ್ಯವಾದ ಮೆರವಣಿಗೆಯು ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಕೀಲು ಕುದುರೆ, ಹೂವು, ಹಣ್ಣು ಕಾಯಿ ದವನ, ನೂರಾರು ಭಕ್ತರು ತೇರಿಗೆ ಸಮರ್ಪಿಸಿವರು, ಮಂಗಳ ವಾದ್ಯಗಳೊಂದಿಗೆ ರಥೋತ್ಸವವು ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಬಳಿ ಸೇರಿತು.
ಇದೇ ವೇಳೆಯಲ್ಲಿ ದಲಿತ ಸಮುದಾಯದ ಶ್ರೀ ದುರ್ಗಾಂಬಿಕ ದೇವಿಯ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು ಇಲ್ಲಿ ಎಲ್ಲಾ ಹಿರಿಯರು,ಮಹಿಳೆಯರು,ಯುವಕರು, ಯುವತಿಯರು, ಮಕ್ಕಳು, ದೀಪ ಹಚ್ಚಿ ಬೆಳಗುವ ಮೂಲಕ ತಮ್ಮ ಕೋರಿಕೆ ಇಷ್ಟಾರ್ಥಗಳನ್ನು ಶ್ರೀ ದೇವಿಯ ಪಾದ ಕಮಲಗಳಿಗೆ ಸಮರ್ಪಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ನಂತರ ಗ್ರಾಮದ ಮುಖಂಡರಾದ ದೊಡ್ಡ ಓಬಯ್ಯ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಪಾಲ್ಗೊಂಡು ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವವನ್ನು ಯಶಸ್ವಿಗೊಳಿಸಿದ್ದಾರೆ, ಸ್ವಾಮಿಯು ಗ್ರಾಮದ ಎಲ್ಲ ಸದ್ಭಕ್ತರಿಗೆ ನೆರೆಹೊರೆಯ ಜನರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಎಸ್. ಟಿ ರೇವಣ್ಣ, ರಾಜಣ್ಣ, ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಶ್ರೀಮತಿ ಡಿ.ಓ ಲಕ್ಷ್ಮೀ, ದ್ರಾಕ್ಷಯಣಿ ನಾಗರಾಜ್, ಹಾಗೂ ಗ್ರಾಮದ ಮುಖಂಡರಾದ ಗ್ರಾಮದ ಜಿ.ತಿಪ್ಪೇಸ್ವಾಮಿ, ಬಾಲಯ್ಯ, ಒಬಣ್ಣ, ಬಸಯ್ಯ, ಪಾಲಯ್ಯ,ಗೋಪಣ್ಣ,ತಿಪ್ಪಯ್ಯ ರೈತರಾದ ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್, ಲಿಂಗಾರೆಡ್ಡಿ, ಭೀಮರೆಡ್ಡಿ, ರುದ್ರಣ್ಣ, ಓಬಯ್ಯ, ಟಿ. ರಾಜಣ್ಣ,ಸಣ್ಣ ನಾಗಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಎಂ.ಏಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ,ಮಲ್ಲಯ್ಯ,ಹನುಮಂತಪ್ಪ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ರುದ್ರಮುನಿ, ಮಂಜುನಾಥ್,ಎಂ.ಟಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಶ್ರೀನಿವಾಸ್, ಮಾರಣ್ಣ,ಭೀಮಣ್ಣ, ಹನುಮಂತಪ್ಪ,ದುರುಗಣ್ಣ,ಸಣ್ಣ ತಿಪ್ಪೇಸ್ವಾಮಿ, ಶ್ರೀಧರ್ ತಿಪ್ಪೇಸ್ವಾಮಿ, ವಿಜಯ್ ಕುಮಾರ್, ಪರಶುರಾಮ್, ಮುಂತಾದ ಊರಿನ ಸಮಸ್ತ ಗ್ರಾಮಸ್ಥರು ಯುವಕರು, ನಾಗರೀಕ ಬಂಧುಗಳು ಉಪಸ್ಥಿತರಿದ್ದರು, ಎಲ್ಲರ ಸಹಕಾರದೊಂದಿಗೆ ಶ್ರೀ ಶರಣ ಬಸವೇಶ್ವರ ಸ್ವಾಮಿಯ ರಥೋತ್ಸವವು ಹಾಗೂ ಶ್ರೀ ದುರ್ಗಾಂಬಿಕ ದೇವಿಯ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ ಮತ್ತು ಫೋಟೋ ಕೃಪೆ
ಟಿ.ಶಿವಮೂರ್ತಿ, ಕೋಡಿಹಳ್ಳಿ
ಚಳ್ಳಕೆರೆ ತಾ.
ಮೊ : 97427 56304


