ಬೆಂಗಳೂರು: ಇಂದು ತುಮಕೂರು ಜಿಲ್ಲೆಯ ಪಾವಗಡದ ಬಳಿ ಭೀಕರ ಬಸ್ ದುರಂತ ನಡೆದಿದೆ. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಚಿವ ಶ್ರೀರಾಮುಲು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ಘಟನೆ ಬಹಳ ದುರದೃಷ್ಟಕರ. ಇವತ್ತು ಬಸ್ಸು ಅಪಘಾತದಲ್ಲಿ ಸುಮಾರು 8 ಜನ ಪ್ರಾಣ ಕಳೆದುಕೊಂಡಿದ್ದಾರೆ. 25 ಜನ ಗಾಯಾಳುಗಳಾಗಿದ್ದಾರೆ. ಈಗಾಗಲೇ ಅಧಿಕಾರಿಗಳನ್ನ ಕಳುಹಿಸಿಕೊಟ್ಟಿದ್ದೀನಿ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಆ ಬಸ್ ಸರಿಯಾಗಿದೆಯಾ ಇಲ್ವಾ, ಫಿಟ್ನೆಸ್ ಇದ್ಯಾ ಇಲ್ವಾ, ಇನ್ಸುರೆನ್ಸ್ ಬಗ್ಗೆನು ಪರಿಶಿಲನೆ ಮಾಡಲಾಗುತ್ತಿದೆ. ಓವರ್ ಲೋಡ್ ಹಾಕಿ ಕ್ರಾಸಿಂಗ್ ನಲ್ಲಿ ಸ್ಪೀಡಾಗಿ ಬರುತ್ತಿದ್ದ ಕಾರಣ ಈ ದುರ್ಘಟನೆ ನಡೆದಿದೆ. ಆ ಬಗ್ಗೆಯೂ ವಿಚಾರಣೆ ಮಾಡಲಾಗುತ್ತಿದೆ.
ಈ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ ಅಡ್ಡಾಡುತ್ತಿಲ್ಲ. ಪ್ರೈವೇಟ್ ಗಾಡಿ ಓಡಾಡುತ್ತಿವೆ ಎಂಬ ದೂರು ಇದೆ. ತಕ್ಷಣವೇ ಪ್ರೈವೇಟ್ ಗಾಡಿಗಳ ಪರ್ಮೀಟ್ ಕ್ಯಾನ್ಸಲ್ ಮಾಡಿ. ತಕ್ಷಣ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರಕ್ಕೆ ಪರ್ಮಿಟ್ ನೀಡಲಾಗುತ್ತದೆ. ಇಂದು ಈ ಘಟನೆಯಿಂದ ಬಹಳಷ್ಟು ನೋವಾಗಿದೆ. ಮೃತ ಹೊಂದಿರುವವ ಬಗ್ಗೆಯೂ ಸಿಎಂ ಬಳಿ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ.