ಶ್ರೀರಾಮಚಂದ್ರ ಪ್ರಭುವಿನ ಆದರ್ಶ ಗುಣಗಳು ಮತ್ತು ಕರ್ತವ್ಯ ನಿಷ್ಟೆ ನಮ್ಮೆಲ್ಲರಿಗೂ ಮಾದರಿ : ಬಿ.ಎ. ಲಿಂಗಾರೆಡ್ಡಿ

2 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ.22 : ಕೋಟ್ಯಾಂತರ ಹಿಂದೂಗಳ ಬಹಳ ವರ್ಷಗಳಿಂದ ಕಾಣುತ್ತಿದ್ದ ಕನಸು ಇಂದು ನನಸಾಗಿದೆ. ಮರ್ಯಾದ ಪುರುಷೋತ್ತಮನಾದ ಶ್ರೀರಾಮನನ್ನು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕಣ್ತುಂಬಿಕೊಳ್ಳುವ ಸೌಭಾಗ್ಯ ನಮ್ಮ ಪೂರ್ವಜನ್ಮದ ಪುಣ್ಯಫಲ ಇಂದು ಈಡೇರಿದೆ.  ಹಾಗೆಯೇ ನಮ್ಮ ಕನಸು ಈ ದಿನ ನನಸಾಗಿದೆ, ಹಾಗೂ ಭವ್ಯಭಾರತದ ಸಮಾಜದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಮಹತ್ವದ ಘಟನೆಯಾಗಿದೆ ಶ್ರೀ ರಾಮಚಂದ್ರ ಪ್ರಭುವಿನ ಆದರ್ಶ ಗುಣಗಳು ಮತ್ತು ಆತನ ಕರ್ತವ್ಯ ನಿಷ್ಟೆ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದು ಎಸ್ ಆರ್ ಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ ಹೇಳಿದರು.

ನಗರದ ಹೊರವಲಯದಲ್ಲಿರುವ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿಂದು ಶ್ರೀರಾಮ ಜನ್ಮಭೂಮಿಯ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹ ಪುನರ್ ಪ್ರತಿಷ್ಠಾಪನೆಯ ಸಂದರ್ಭದಲ್ಲೇ ಬ್ಲ್ಯೂ ಜೆಮ್ಸ್ ಮಾಂಟೆಸರಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸುಯೋಜಿತ ನೂತನ ಕಟ್ಟಡದಲ್ಲಿ 21ನೇ ಶತಮಾನದಲ್ಲಿ  ಸಿಗಬೇಕಾದ ಪ್ರತಿಯೊಂದು ಸೌಲಭ್ಯವನ್ನು ಮಕ್ಕಳಿಗೆ ಕಲ್ಪಿಸಿಕೊಡಲಾಗಿದೆ. ಹಾಗೂ ಬಾಲರಾಮನ ಲೀಲೆಗಳು ಮತ್ತು ರಾಮಾಯಣದ ಕೆಲವು ಮೌಲ್ಯಗಳನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಕುರಿತು ಗೌರವಾನ್ವಿತರು ಮಾತನಾಡಿ ಶಿಕ್ಷಣದ ಮೊದಲ ಮೆಟ್ಟಿಲು ಈ ಮಾಂಟೆಸರಿ ಈ ವಿಭಾಗಕ್ಕೆ ಇಂದು “ಅಯೋಧ್ಯಾ ಬ್ಲಾಕ್” ಎಂದು ಹೆಸರಿಟ್ಟಿರುವುದು ನಿಜಕ್ಕೂ ಅದ್ಭುತ, ಈ ಶುಭದಿನದ  ಮಹತ್ವ, ರಾಮ ಮಂದಿರದ ಇತಿಹಾಸ, ಹಿಂದೂ ಸಂಸ್ಕøತಿಯ ಸಾಕಾರ ಪ್ರತಿಷ್ಠಾನವಾಗಿದ್ದು ಇತಿಹಾಸದ ವಿಭಾಗಕ್ಕೆ ಅನೇಕ ಅದ್ಭುತ ಘಟನೆಗಳನ್ನು ಹೊಂದಿದೆ ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿ ಬಾಬುರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಚಿತ್ರದುರ್ಗ, ನಾಗರಾಜು ಅಧ್ಯಕ್ಷರು, ಜಾನ್ಹವಿ ನರ್ಸಿಂಗ್ ಸ್ಕೂಲ್ ಚಿತ್ರದುರ್ಗ.
ಪಿ ಜಿ ರಮೇಶ್ ಮಾಜಿ ಆಯುಕ್ತರು ಪೌರಾಡಳಿತ ಸೇವೆ,ಕರ್ನಾಟಕ,   ಶ್ರೀಮತಿ ಸುಜಾತ ಲಿಂಗಾರೆಡ್ಡಿ ಕಾರ್ಯದರ್ಶಿಗಳು,ಎಸ್ ಆರ್ ಎಸ್ ಶಿಕ್ಷಣ ಸಮೂಹ ಸಂಸ್ಥೆಗಳು ಚಿತ್ರದುರ್ಗ,  ಅಮೋಘ್ ಬಿ ಎಲ್  ಉಪಾಧ್ಯಕ್ಷರು, ಎಸ್ ಆರ್ ಎಸ್ ಶಿಕ್ಷಣ ಸಮೂಹ ಸಂಸ್ಥೆಗಳು ಚಿತ್ರದುರ್ಗ,  ಡಾ.ರವಿ ಟಿ ಎಸ್ ಆಡಳಿತಾಧಿಕಾರಿಗಳು, ಎಸ್ ಆರ್ ಎಸ್ ಶಿಕ್ಷಣ ಸಮೂಹ ಸಂಸ್ಥೆಗಳು ಚಿತ್ರದುರ್ಗ, ಪೋಷಕರು ,ಆಡಳಿತ ಮಂಡಳಿ,ಶಾಲೆಯ ಪ್ರಾಂಶುಪಾಲರು ಎಲ್ಲಾ ವಿಭಾಗದ ಶೈಕ್ಷಣಿಕ ಸಂಯೋಜಕರು, ಬೋಧಕವೃಂದ, ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *