ಹದಗೆಟ್ಟ ಆರ್ಥಿಕ ಪರಿಸ್ಥಿತಿ : ಶ್ರೀಲಂಕಾದಲ್ಲಿ ಮತ್ತೆ ಪ್ರತಿಭಟನೆ..!

ಕೊಲಂಬೊ: ಶ್ರೀಲಂಕಾದ ವಾಣಿಜ್ಯ ರಾಜಧಾನಿ ಕೊಲಂಬೊದಲ್ಲಿ ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಿ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಶನಿವಾರ ಮುತ್ತಿಗೆ ಹಾಕಿದರು. ಕೆಲವು ಪ್ರತಿಭಟನಾಕಾರರು, ಶ್ರೀಲಂಕಾದ ಧ್ವಜಗಳು ಹಿಡಿದುಕೊಂಡು, ಅಧ್ಯಕ್ಷರ ನಿವಾಸಕ್ಕೆ ನುಗ್ಗಿದರು. ಈ ದೃಶ್ಯ ಸ್ಥಳೀಯ ಟಿವಿ ನ್ಯೂಸ್ ನಲ್ಲಿ ತೋರಿಸಲಾಗಿದೆ.

22 ಮಿಲಿಯನ್ ಜನರಿರುವ ದ್ವೀಪವು ಸಾಕಷ್ಟು ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ. ಹೀಗಾಗಿ ಇಂಧನ, ಆಹಾರ ಮತ್ತು ಔಷಧಿಗಳ ಅಗತ್ಯ ಆಮದುಗಳನ್ನು ಸೀಮಿತಗೊಳಿಸಿದೆ. ಏಳು ದಶಕಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ. ಸಾವಿರಾರು ಜನರು ಕೊಲಂಬೊದ ಸರ್ಕಾರಿ ಜಿಲ್ಲೆಗೆ ನುಗ್ಗಿ, ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಾಜಪಕ್ಸೆ ಅವರ ಮನೆಗೆ ತಲುಪಲು ಹಲವಾರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿದರು ಎಂದು ರಾಯಿಟರ್ಸ್ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ ಕೋಪಗೊಂಡ ಗುಂಪು ಅಧ್ಯಕ್ಷೀಯ ನಿವಾಸಕ್ಕೆ ಸುತ್ತುವರೆಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಿದ ಇಂಧನದ ತೀವ್ರ ಕೊರತೆಯ ಹೊರತಾಗಿಯೂ, ಆರ್ಥಿಕ ವಿನಾಶದಿಂದ ರಕ್ಷಿಸುವಲ್ಲಿ ಸರ್ಕಾರದ ವಿಫಲವಾಗಿದೆ ಎಂದು ದೇಶದ ಹಲವಾರು ಭಾಗಗಳಿಂದ ಕೊಲಂಬೊದಲ್ಲಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರ ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *