Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಹಿನ್ನೆಲೆ : ಕಾಶಿ ವಿಶ್ವನಾಥ್ ಶ್ರೇಷ್ಠಿ ಅವರ ವಿಶೇಷ ಲೇಖನ

Facebook
Twitter
Telegram
WhatsApp

ಆರ್ಯವೈಶ್ಯ ಸಮುದಾಯ ವ್ಯವಹಾರದಲ್ಲಿ ಕಟ್ಟುನಿಟ್ಟು. ಅಂಗಡಿ ಗಲ್ಲ ಮೇಲೆ ಕುಳಿತರೆ ತನ್ನ ಸಂಬಂಧಿಕರನ್ನು ಗ್ರಾಹಕರಂತೆ ಪರಿಗಣಿಸುವ ವ್ಯಾವಹಾರಿಕ ನಿಷ್ಠೆ ಉಳ್ಳವರು. ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಮತ್ತೊಂದು ಬೆಲೆ ನಿಗದಿ ಮಾಡುವ ಗುಣದವರಲ್ಲ. ವ್ಯಾಪಾರದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಧರ್ಮದವರು.

ಈ ಕಾರಣಕ್ಕೆ ಶೆಟ್ಟರ ಅಂಗಡಿ ಅಂದರೆ ಅಲ್ಲಿ ಚೌಕಾಸಿಗೆ ಅವಕಾಶ ಇಲ್ಲ. ಗುಣಮಟ್ಟಕ್ಕೆ ಮೋಸ ಇಲ್ಲ; ಎಂಬ ನಂಬಿಕೆ ಜಗಜ್ಜಾಹೀರಾ. ಈ ವ್ಯವಹಾರ ಮಧ್ಯೆಯೂ ಆರ್ಯವೈಶ್ಯ ಸಮುದಾಯದವರು ಹೆಚ್ಚು ದೈವಭಕ್ತಿ ಉಳ್ಳವರು. ಇದಕ್ಕೆ ಚಿತ್ರದುರ್ಗ ನಗರದಲ್ಲಿ ಆರ್ಯವೈಶ್ಯ ಸಮುದಾಯದವರ ಧಾರ್ಮಿಕ ಕಾರ್ಯಗಳೇ ಸಾಕ್ಷಿ.

ಚಿತ್ರದುರ್ಗ ಆರ್ಯವೈಶ್ಯ ಸಮಾಜ ಇಡೀ ನಾಡಿಗೆ ಮಾದರಿ ಆಗಿದೆ. ಆನೆಬಾಗಿಲು ಸಮೀಪದ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನೂರಾರು ವರ್ಷಗಳ ಹಿಂದೆ ನಿರ್ಮಾಗೊಂಡಿದ್ದು, ಅಲ್ಲಿನ ಲಿಖಿತ ಬರವಣಿಗೆಯಂತೆ 1832ರ ಮುಂಚೆಯೂ ದೇವಸ್ಥಾನ ನಿರ್ಮಾಣಗೊಂಡಿದ್ದು, ಕಾಲಕ್ರಮೇಣ ಅಭಿವೃದ್ಧಿ ಕಾಣುತ್ತ ಬಂದಿದೆ. ದೇವಸ್ಥಾನದ ಪಕ್ಕದಲ್ಲಿನ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪ ಅನೇಕ ಧಾರ್ಮಿಕ, ವಿವಾಹ, ಶುಭ ಕಾರ್ಯಗಳ ಕೇಂದ್ರ ಸ್ಥಾನವಾಗಿತ್ತು.

ಕಾಲಕ್ರಮೇಣ ಜನಸಂಖ್ಯೆ ಹೆಚ್ಚಳ, ಜೀವನ ಶೈಲಿ ಬದಲಾದಂತೆ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪ ಬಡ ಜನರಿಗೆ ಸೀಮಿತವಾಗುತ್ತ ಬಂದಿತು. ಇದನ್ನು ಗಮನಿಸಿದ ಆರ್ಯವೈಶ್ಯ ಸಮಾಜದವರು ಹೊಸ ಚಿಂತನೆ ನಡೆಸಿದರು.

ಹಿರಿಯರ ದೂರದೃಷ್ಟಿ ಫಲವೇ ಇಂದು ನಗರದ ಹೃದಯದ ಭಾಗದಲ್ಲಿ ವಾಸವಿ ಮಹಲ್, ಬೃಹತ್ ಕನ್ನಿಕಾ ಪರಮೇಶ್ವರಿ ದೇಗಲವನ್ನು ಕಾಣಬಹುದು.

ಈ ಪ್ರದೇಶದಲ್ಲಿ 1968ರಲ್ಲಿ ಸಾಹುಕರ್ ವೀರಭದ್ರಪ್ಪ ಅವರು ನಿರ್ಮಿಸಿದ ಲೇಔಟ್ ನಲ್ಲಿ 98 ಸೈಟ್ ಖರೀದಿಸಲು ನಿರ್ಧರಿಸಿದ ನಮ್ಮ ಹಿರಿಯರು, ಮಾಲೀಕರು ಒಂದು ಲಕ್ಷ ರೂಪಾಯಿ ನೀಡುವಂತೆ ಹೇಳಿದಾಗ, ದೇವಸ್ಥಾನ ಕಾರ್ಯಕ್ಕೆ ಎಂದು ತಿಳಿಸಿ 2 ಸಾವಿರ ರೂ. ಕಡಿಮೆ ಮಾಡಿದ್ದು, ಸಮಾಜದ ಅಂದಿನ ಹಿರಿಯರು 98 ಸಾವಿರ ರೂ. ನೀಡಿ ನಿವೇಶನಗಳನ್ನು ಖರೀದಿಸಿದರು.

ಅ ಜಾಗದಲ್ಲಿ 1972ರಲ್ಲಿ ವಾಸವಿ ಮಹಲ್ ಕಟ್ಟಡ, 1976ರಲ್ಲಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ದೇವಿಯ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಸುಗಮವಾಗಿ ನಡೆಯಿತು.

ಇಂದು ಈ ಸ್ಥಳ ಚಿತ್ರದುರ್ಗದ ಹೃದಯಭಾಗವೆಂದು ಗುರುತಿಸಿಕೊಂಡಿದೆ. ಕೋಟೆನಾಡಿನ ಎಂ.ಜಿ.ರಸ್ತೆ ಎಂದೇ ವಾಸವಿ ಮಹಲ್ ರಸ್ತೆ ಖ್ಯಾತಿ ಗಳಿಸಿದೆ. ಇಂದು ಅನೇಕ ವ್ಯಾಪಾರಗಳ ಕೇಂದ್ರ ಬಿಂದುವಾಗಿದೆ. ಇಲ್ಲಿ ನಿರ್ಮಾಣಗೊಂಡಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ವಾಸವಿ ಮಹಲ್ ಅನೇಕ ಶುಭ ಕಾರ್ಯಗಳ ಕೇಂದ್ರವಾಗಿ ಗಮನಸೆಳೆಯುತ್ತಿದೆ.

ಭವ್ಯವಾದ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಕಾಲಕ್ರಮೇಣ ಅಭಿವೃದ್ಧಿ ಹಾದಿಯಲ್ಲಿ ಸಾಗಿದ್ದು, ಇಂದು ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ, ಉತ್ತಮ ಪರಿಸರ ದುರ್ಗದ ಜನರಿಗೆ ನೆಮ್ಮದಿ ತಾಣವಾಗಿದೆ. ದೇಗುಲವನ್ನು ವಿವಿಧ ರೀತಿ ಅಭಿವೃದ್ಧಿಗೊಳಿಸುತ್ತಲೇ ಬರಲಾಗಿದೆ.

ಕನ್ನಿಕಾ ಪರಮೇಸ್ವರಿ ದೇವಸ್ಥಾನದ ರಾಜಗೋಪುರ 1996ರಲ್ಲಿ ವೈಭವಯುತವಾಗಿ ನಿರ್ಮಾಣಗೊಂಡಿದ್ದು, ಅದರ ನೆನಪಿಗಾಗಿ ಪ್ರತಿವರ್ಷದ ರಾಜಗೋಪುರ ವಾರ್ಷಿಕೋತ್ಸವ ಆಚರಿಸಲಾಗುತ್ತದೆ.

ಜೊತೆಗೆ ದೇಗುಲ, ಧಾರ್ಮಿಕ ಕಾರ್ಯಗಳಿಗೆ ಕೊರತೆ ಆಗದಿರಲಿ ಎಂದು ವಾಸವಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದ್ದು, 32 ಮಳಿಗೆ ಕಟ್ಟಲಾಗಿದೆ. ಇದರಿಂದ ಪ್ರತಿ ತಿಂಗಳು 2.75 ಲಕ್ಷ ರೂಪಾಯಿ ಆದಾಯ ಬರುತ್ತದೆ.

1970ರಲ್ಲಿ 80 ಆರ್ಯವೈಶ್ಯ ಮನೆಗಳಿದ್ದು, ಪ್ರಸ್ತುತ ಒಂದು ಸಾವಿರ ಸಂಖ್ಯೆ ದಾಟಿದೆ. ಜನಸಂಖ್ಯೆ ಕೂಡ ನಾಲ್ಕೈದು ಸಾವಿರ ಸಮೀಪ ಬಂದಿದೆ. ಜಿಲ್ಲಾದ್ಯಂತ 7 ಸಾವಿರ ಸಂಖ್ಯೆಯಲ್ಲಿ ಆರ್ಯವೈಶ್ಯರು ಇದ್ದು, ಚಳ್ಳಕೆರೆ, ಹಿರಿಯೂರಲ್ಲಿ ಹೆಚ್ಚು ಇದ್ದಾರೆ. ಪರಿಣಾಮ ಈಗಿನ ವಾಸವಿ ಕಲ್ಯಾಣ ಮಂಟಪ ಚಿಕ್ಕದಾಗಿದೆ. ಜೊತೆಗೆ ವಾಹನ ದಟ್ಟನೆ ಹೆಚ್ಚಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಸಮಾಜದ ಹಿರಿಯರು ಶಾಶ್ವತ ಪರಿಹಾರ ಕಂಡುಕೊಳ್ಳುವ ಯತ್ನದಲ್ಲಿದ್ದೇವೆ.

ಅದರ ಚಿಂತನೆ ಫಲವಾಗಿ ಚಳ್ಳಕೆರೆ ರಸ್ತೆಯಲ್ಲಿ 4 ಎಕರೆ ಭೂಮಿ ಖರೀದಿಸಿದ್ದೇವೆ. ಇಲ್ಲಿ ವಿಶಾಲವಾದ ಕಲ್ಯಾಣ ಮಂಟಪ ಸೇರಿ ವಿವಿಧ ರೀತಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ.

ರೆಸಾರ್ಟ್ ರೀತಿ ನಿರ್ಮಾಣ ಮಾಡಬೇಕೆಂಬ ಮಹಾದಾಸೆ ಸಮುದಾಯದ ಹಿರಿಯರು ಹೊಂದಿದ್ದಾರೆ. ಮೀಟಿಂಗ್ ಹಾಲ್, ಸ್ವಿಮ್ಮಿಂಗ್, ವಾಹನ ಪಾರ್ಕ್, ಬಫೆ, ಹೊರಂಗಾಣ ವ್ಯವಸ್ಥೆ ಸೇರಿ ವಿವಿಧ ರೀತಿ ಆಕರ್ಷ, ಜನಪಯೋಗಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 10 ಕೋಟಿ ರೂ. ವೆಚ್ಚ ನಿಗದಿ ಮಾಡಿದ್ದು, ಕಾಮಗಾರಿ ಪ್ರಾರಂಭ ಮಾಡಿ, ಮೂರು ವರ್ಷದಲ್ಲಿ ಜನರಿಗೆ ಅರ್ಪಣೆ ಮಾಡಬೇಕೆಂಬ ಗುರಿ ಇದೆ.

ಧಾರ್ಮಿಕ ಕಾರ್ಯಗಳು:

ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷದ ಪೂರ್ತಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಹತ್ತು ಉತ್ಸವಗಳನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ.

ಯುಗಾದಿ ನಂತರ ಮೊದಲನೆ ಹಬ್ಬ ವಾಸವಿ ಜಯಂತಿ. ಕಾರ್ತಿಕ ಮಾಸದಲ್ಲಿ ಗಿರಿಜಾ ಕಲ್ಯಾಣ. ಶ್ರಾವಣ ಮಾಸದಲ್ಲಿ ಶ್ರೀನಿವಾಸ ಕಲ್ಯಾಣ. ವೈಕುಂಠ ಏಕಾದಶಿ ವಿಶೇಷವಾಗಿ ಆಚರಿಸುತ್ತವೆ. ವೈಕುಂಠ ಏಕಾದಶಿ ಸಂಭ್ರಮದಲ್ಲಿ ಒಂದೊಂದು ವರ್ಷ ಒಂದೊಂದು ವಿಶೇಷತೆಗಳು ಕೋಟೆನಾಡು ಜನರನ್ನು ಆಕರ್ಷಿಸುತ್ತಲೇ ಇವೆ. ಅದರಲ್ಲೂ ಅನಂತಪದ್ಮಾನಾಭನ ವೈಭವ, ಉಡುಪಿ ಕೃಷ್ಣನ ಕನಕನ ಭಕ್ತಿಗೆ ಒಲಿದು ಶ್ರೀಕೃಷ್ಣ ದರ್ಶನ ನೀಡುವ ದೃಶ್ಯ ಜನರ ಮನದಲ್ಲಿ ಈಗಲೂ ಉಳಿದಿದೆ. ಮುಂದಿನ ದಿನಗಳಲ್ಲೂ ಇಂತಹ ಹತ್ತಾರು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಮಾಜದ ಉದ್ದೇಶವಾಗಿದೆ.

ಮುಖ್ಯವಾಗಿ ವಾಸವಿ ಅಮ್ಮನವರ ಆತ್ಮರ್ಪಣೆ ಸ್ಮರಣೆ ಕಾರ್ಯಕ್ರಮವನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಸಮಾಜದ ವತಿಯಿಂದ ನಡೆಯುವ ವರ್ಷದ ಕಾರ್ಯಕ್ರಮದ ಮಾಹಿತಿ ಕುರಿತು ಕಿರುಹೊತ್ತಿಗೆಯನ್ನು ಮೊದಲೇ ಬಿಡುಗಡೆ ಮಾಡಿ, ಸಮಾಜದ ಪ್ರತಿ ಮನೆಗೆ ತಲುಪಿಸುತ್ತೇವೆ.

ವಾಸವಿ ಜಯಂತ್ಯುತ್ಸವ ನಮ್ಮ ಮೊದಲನೇ ಹಬ್ಬ. ಈ ವೇಳೆ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯ ದುರ್ಗದ ಜನರನ್ನು ದೇಗುಲದತ್ತ ಆಗಮಿಸುವ ರೀತಿ ಮಾಡಲಾಗುತ್ತದೆ. ಭಕ್ತಿಯೇ ಪ್ರಧಾನವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಆರ್ಯವೈಶ್ಯ ಸಮಾಜ: ಈ ಸಂಘ ನಿಂತ ನೀರಲ್ಲ. ಅನೇಕ ಮಹನೀಯರು ಕೆಲಸ ಮಾಡಿದ್ದಾರೆ. ಮೂರು ವರ್ಷಕ್ಕೆ ಒಮ್ಮೆ ಪದಾಧಿಕಾರಿಗಳ ಬದಲಾವಣೆ ಕಡ್ಡಾಯವಾಗಿ ಮಾಡಲಾಗುತ್ತದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಲಾಗುತ್ತಿದೆ.

ಸಮುದಾಯದ ನೇತೃತ್ವದಲ್ಲಿ ನಿರ್ಮಾಣಗೊಳ್ಳುವ ದೇವಸ್ಥಾನ, ಕಲ್ಯಾಣ ಮಂಟಪ ಹೀಗೆ ಯಾವುದೇ ಇರಲಿ ಅವುಗಳು ಜಾತ್ಯತಿತವಾಗಿ ಬಳಕೆ ಆಗಬೇಕೆಂಬುದು ಸಮುದಾಯದ ಮೂಲ ಉದ್ದೇಶ ಆಗಿದೆ.

ಸಮುದಾಯ ಧೈವಭಕ್ತಿಯಲ್ಲಿ ಹೇಗೆ ಮುಂಚೂಣಿಯಲ್ಲಿ ಇದ್ದಾರೆ, ಅದಕ್ಕೆ ಮೀಗಿಲಾಗಿ ದೇಶಭಕ್ತಿಯಲ್ಲಿ ಮಾದರಿ ಆಗಿದ್ದಾರೆ ಎಂಬುದಕ್ಕೆ ನಮ್ಮ ಕ್ರಾಂತಿಕಾರಿ, ವೈಚಾರಿಕ ನಡೆಯೇ ಸಾಕ್ಷಿ.

ಗುಜರಾತ್ ಭೂಕಂಪ ಸಂದರ್ಭದಲ್ಲಿ ನಮ್ಮ ಹಿರಿಯರು ಅಲ್ಲಿನ ಜನರಿಗೆ ನೆರವು ನೀಡಲು ಮುಂದಾದ ಸಂದರ್ಭ ಹಣದ ಕೊರತೆ ಎದುರಾಗಿತ್ತು. ಅ ಸಂದರ್ಭ ದೇವಸ್ಥಾನದ ಹುಂಡಿ ಹಣವನ್ನೇ ಜಿಲ್ಲಾಧಿಕಾರಿ ಮೂಲಕ ಗುಜರಾತ್ ರಾಜ್ಯಕ್ಕೆ ತಲುಪಿಸಿದ ಕ್ರಾಂತಿಕಾರಿ, ವೈಚಾರಿಕೆ ನಡೆ ನಮ್ಮ ಸಮುದಾಯಕ್ಕೆ ಇದೆ.

ದೇಶ ಸೇವೆಯಲ್ಲಿ ಈಶ ಸೇವೆ ಕಾಣುವ ವಿಶಾಲ ಗುಣವನ್ನು ಹೊಂದಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ ಸಾಕ್ಷಿ. ನಮ್ಮ ಕಾರ್ಯಕ್ಕೆ ನಾಡಿನಲ್ಲಿ ಮೆಚ್ಚುಗೆ ಜೊತೆಗೆ ಇದೇ ರೀತಿ ಅನೇಕ ದೇವಸ್ಥಾನಗಳ ಹುಂಡಿ ಹಣವನ್ನೇ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಅರ್ಪಿಸಿದ್ದು, ನಮ್ಮಲ್ಲಿ ಆತ್ಮತೃಪ್ತಿ ಜೋತೆಗೆ ಹೆಮ್ಮೆ ತಂದಿದೆ.

ಕಾಶ್ಮಿರದಲ್ಲಿ ಅವಘಡ, ಕೊಡುಗು, ಕೆರಳ ಹೀಗೆ ದೇಶದ ಯಾವದೇ ಮೂಲೆಯಲ್ಲಿ ಪ್ರಕೃತಿ ಸೇರಿ ವಿವಿಧ ರೀತಿಯಲ್ಲಿ ವಿಕೋಪ ಸಂದರ್ಭದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ತಕ್ಷಣಕ್ಕೆ ಜನರ ನೆರವಿಗೆ ಧಾವಿಸಿದೆ. ನಮ್ಮ ಅಳಿಲು ಸೇವೆ ನಮ್ಮ ನೆಮ್ಮದಿ  ಎಂಬುದು ನಮ್ಮ ಸಮಾಜದ ಅನಿಸಿಕೆ.

ಕರೋನಾ ಸೋಂಕು ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದೇವೆ. ಆ್ಯಕ್ಸಿಜನ್ ಸಮಸ್ಯೆ ಪರಿಹಾರಕ್ಕೆ 3 ಲಕ್ಷ ರೂ. ವೆಚ್ಚ ಮಾಡಿ ಜಿಲ್ಲಾಸ್ಪತ್ರೆಗೆ ನೀಡಿದ್ದೇವೆ. ಈ ಮೂಲಕ ಅನೇಕರ ಜೀವ ಉಳಿಸುವ ವೈದ್ಯರ ಕಾರ್ಯಕ್ಕೆ ಅಳಿಲು ರೀತಿ ಸೇವೆ ಸಲ್ಲಿಸಿದ್ದೇವೆ ಎಂಬುದು ಸಮುದಾಯದ ಜನರ ಅನಿಸಿಕೆ ಆಗಿದೆ.

ಜೊತೆಗೆ 1913ರಲ್ಲಿ ನಮ್ಮ ನಾಲ್ವರು ಹಿರಿಯರು ದೂರದೃಷ್ಟಿಯಿಂದ ಭೀಮಸಮುದ್ರದ ತುರೇಬಯಲು ಬಳಿ 7 ಎಕರೆ 20 ಗುಂಟೆ ಜಮೀನವನ್ನು (ಜಿಲ್ಲಾಧಿಕಾರಿ ಮಾರ್ಕಾಪುರಂ ಚಂಗಯ್ಯ ಶೆಟ್ಟಿ ಅಧಿಕಾರವಧಿ) 500 ರೂಪಾಯಿಗೆ ಸರ್ಕಾರದಿಂದ ಖರೀದಿಸಲಾಗಿತ್ತು. ಇಂದು ತೋಟವಾಗಿ ಅಭಿವೃದ್ಧಿಗೊಂಡಿದ್ದು ಪ್ರತಿ ವರ್ಷ 15-16 ಲಕ್ಷ ರೂ. ಆದಾಯ ಬರುತ್ತಿದೆ. ಈ ತೋಟದ ಉಸ್ತುವಾರಿ ವಹಿಸಿಕೊಂಡಿರುವ ವೆಂಕಟೇಶ್ ಕುಮಾರ್ ಬಾಬು ಅವರ ಶ್ರಮ ಮಾದರಿ ಆಗಿದೆ. ತೋಟಕ್ಕೆ ನೀರು ಸಮಸ್ಯೆ ಆಗದಂತೆ ಪ್ರತ್ಯೇಕ ಟ್ರಾನ್ಸ್ ಫಾರಂ ಅಳವಡಿಸಿದ್ದು, ಸಾವಯವ ಕೃಷಿ ಪದ್ಧತಿಯತ್ತ ಆಸಕ್ತಿ ವಹಿಸಲಾಗಿದೆ. ರಾಮಚಂದ್ರಪುರ ಮಠದಿಂದ ಗೊಬ್ಬರ ತರಿಸಿ, ತೋಟವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಫಲ ಆದಾಯ ಹೆಚ್ಚಾಗುತ್ತಲೇ ಇದೆ.

 

ಕಾಶಿ ವಿಶ್ವನಾಥ್ ಶ್ರೇಷ್ಠಿ

ಅಧ್ಯಕ್ಷರು, ಆರ್ಯವೈಶ್ಯ ಸಂಘ (ರಿ),  ಚಿತ್ರದುರ್ಗ

ಮೊ.ನಂ: 9535576662

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!