ಏಪ್ರಿಲ್ 1 ರಿಂದ 15 ರವರೆಗೆ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ : ಕಾರ್ಯಕ್ರಮಗಳ ವಿವರ ಇಲ್ಲಿದೆ…!

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 25 : ಐತಿಹಾಸಿಕ ಚಿತ್ರದುರ್ಗದ ಮೇಲುದುರ್ಗದಲ್ಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ಪ್ರತಿವರ್ಷದ ಮಾಮೂಲು ಪದ್ದತಿಯಂತೆ ಶ್ರೀ ವಿಶ್ವಾವಸುನಾಮ ಸಂವತ್ಸರದಲ್ಲಿ ಏಪ್ರಿಲ್ 1 ರಿಂದ 15 ರವರೆಗೆ ಹಮ್ಮಿಕೊಳ್ಳಲಾಗಿದೆ.

ಏ. 01ರಂದು ಮಂಗಳವಾರ ರಾತ್ರಿ 11-40ಕ್ಕೆ ಅಮ್ಮನವರ ಜಾತ್ರೆಯ ಸಾರು ಹಾಕುವ ಕಾರ್ಯಕ್ರಮ,

ಏ.05 ರಂದು  ಶನಿವಾರ ಕಂಕಣಧಾರಣೆ, ಅಮ್ಮನವರಿಗೆ ಭಂಡಾರ ಪೂಜೆ ಮತ್ತು ರುದ್ರಾಭಿಷೇಕ,

ಏ.06ರಂದು  ಭಾನುವಾರ ರಾತ್ರಿ 8-00 ಗಂಟೆಯಿಂದ ರಾಜಬೀದಿಗಳಲ್ಲಿ ಸಿಂಹವಾಹಿನಿ ಉತ್ಸವ,

ಏ.07ರಂದು  ಸೋಮ ವಾರ ರಾತ್ರಿ 8-00 ಗಂಟೆಯಿಂದ ರಾಜಬೀದಿಗಳಲ್ಲಿ ಸರ್ಪೋತ್ಸವದೊಂದಿಗೆ ಭಕ್ತರ ಮನೆಗಳಲ್ಲಿ ಪೂಜಾ ಕಾರ್ಯಕ್ರಮ ರಾತ್ರಿ 8-00 ಗಂಟೆಯಿಂದ ರಾಜಬೀದಿಗಳಲ್ಲಿ ಮಯುರೋತ್ಸವ(ನವಿಲು ಉತ್ಸವ)

ಏ.08ರಂದು  ಮಂಗಳವಾರ ರಾತ್ರಿ ಶ್ರೀ ಅಮ್ಮನವರಿಗೆ ಭಂಡಾರ ಪೂಜಾ ಕಾರ್ಯಕ್ರಮ  ಏ.09ರಂದು  ಬುಧವಾರ ಬೆಳಗ್ಗೆ ಭಂಡಾರದ ಪೂಜೆ 9-00 ಗಂಟೆಗೆ ಅಮ್ಮನವರು ಕೆಳಗೆ ಇಳಿಯುವ ಕಾರ್ಯಕ್ರಮ. ಅರ್ಚಕರ ಮನೆಯಿಂದ ಮಕ್ಕಳಿಗೆ ಬೇವಿನ ಉಡಿಗೆ ಸೇವಾ ಅಶೋತ್ಸವದಲ್ಲಿ ಕಾಮನಬಾವಿ ಹೊಂಡದಲ್ಲಿ ಗಂಗಾಪೂಜೆಗೆ ಆಗಮಿಸಿ, ಇದೇ ರಾತ್ರಿ 9-00 ಗಂಟೆಯಿಂದ ಶ್ರೀ ಅಮ್ಮನವರ ಉತ್ಸವ ಜಿಲ್ಲಾಧಿಕಾರಿಗಳವರ ಬಂಗಲೆಗೆ ಬಿಜಯುಂಗೈಯುವುದು. ಮಂಗಳಾರತಿ ಕೆಳಗೋಟೆ ಭಕ್ತಾದಿಗಳಿಂದ.

ಏ.10ರಂದು  ಗುರುವಾರ ಸಾಯಂಕಾಲ 7-00 ಗಂಟೆಗೆ ಇದೇ ಕರುವಿನಕಟ್ಟೆ ಭಕ್ತಾಧಿಗಳಿಂದ ಸೇವೆ, ರಾಜಬೀದಿಗಳಲ್ಲಿ ಉತ್ಸವ. ಏ.11ರಂದು  ಶುಕ್ರವಾರ ಬೆಳಗ್ಗೆ 8-00 ಗಂಟೆಯಿಂದ ರಾಜ ಬೀದಿಗಳಲ್ಲಿ ಅಕ್ಟೋತ್ಸವ ಮತ್ತು ಹೂವಿನ ಉತ್ಸವ ಮಹಾ ಮಂಗಳಾರತಿ. ಏ.12ರಂದು  ಸಂಜೆ 5-30ಕ್ಕೆ ಜಾತ್ರಾ ಬಯಲಿನ ಪಾದಗಟ್ಟೆಯಲ್ಲಿ ‘ಸಿಡಿ ಉತ್ಸವ’ ಅಮ್ಮನವರಿಗೆ ಮಹಾಮಂಗಳಾರತಿ ಕಾರ್ಯಕ್ರಮ ಏ.13ರಂದು  ಭಾನುವಾರ ಸಾಯಂಕಾಲ 6-30ಕ್ಕೆ ಬೆಟ್ಟದ ಮೇಲೆ ಓಕಳಿ ಉತ್ಸವ ಜೋಗತಿ ಮತ್ತು ಜೋಗಪ್ಪ ಇವರಿಂದ. ಏ.15ರಂದು ಬೆಳಗ್ಗೆ 10-30ಕ್ಕೆ ಕಂಕಣ ವಿಸರ್ಜನೆ ಮತ್ತು ಗಂಗಾಪೂಜೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.

 

ದಿನಾಂಕ: 11-04-2025ನೇ ಶುಕ್ರವಾರ ಬೆಳಗ್ಗೆ 09:30ಕ್ಕೆ ಶ್ರೀ ಏಕನಾಥೇಶ್ವರಿ ಅಮ್ಮನವರ ಪಾದಗುಡಿಯ ಜಾತ್ರೆ ಬಯಲಿನ ದ್ವಾರಬಾಗಿಲಿನ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಮೇಲ್ಕಂಡ ಎಲ್ಲಾ ಸಕಲ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಭಾಗವಹಿಸಿ, ತನು, ಮನ, ಧನಗಳಿಂದ ಸಹಕರಿಸಿ, ಶ್ರೀ ಏಕನಾಥೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವು ವಿನಂತಿಸಿದೆ.

Share This Article
Leave a Comment

Leave a Reply

Your email address will not be published. Required fields are marked *