ಹೆಲಿಕಾಪ್ಟರ್ ದುರಂತದ ಬಗ್ಗೆ ಊಹಾಪೋಹ : ಭಾರತೀಯ ವಾಯುಸೇನೆಯಿಂದ ಮನವಿ..!

ನವದೆಹಲಿ: ಹೆಲಿಕಾಪ್ಟರ್ ದುರಂತದಿಂದ ತುಂಬಾ ಮುಖ್ಯವಾದ ವ್ಯಕ್ತಿಯನ್ನ ಕಳೆದುಕೊಂಡು ಎಲ್ಲರು ದುಃಖದಲ್ಲಿದ್ದಾರೆ. ಹೀಗಿರುವಾಗ ದುರಂತದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ಇದೀಗ ಆ ಊಹಾಪೋಹಗಳಿಗೆ ಭಾರತೀಯ ವಾಯುಸೇನೆ ಉತ್ತರ ನೀಡಿದೆ.

ಎಲ್ಲಾ ರೀತಿಯ ಊಹಾಪೋಹಗಳನ್ನ ನಿಲ್ಲಿಸಿ, ಮೃತಪಟ್ಟವರ ಘನತೆ, ಗೌರವವನ್ನ ಕಾಪಾಡುವಂತೆ ಭಾರತೀಯ ವಾಯುಸೇನೆ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದೆ. ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದ ಕಾರಣದ ತನಿಖೆಗಾಗಿ ಭಾರತೀಯ ವಾಯುಪಡೆಯು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ರಚಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ.

ದುರಂತಕ್ಕೆ ಕಾರಣವಾದ ಸತ್ಯವನ್ನೂ ಹೊರತರಲಾಗುತ್ತದೆ. ಮಡಿದವರ ಘನತೆಯನ್ನು ಕಾಪಾಡಲು, ಮಾಹಿತಿ ಇಲ್ಲದ ಊಹಾಪೋಹಗಳನ್ನು ತಡೆಯಬೇಕು ಎಂದು ವಾಯುಪಡೆಯ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿದೆ. ತಮಿಳುನಾಡಿನ ಬಳಿ ಹೆಲಿಕಾಪ್ಟರ್ ಪತನಗೊಂಡ ಹಿನ್ನೆಲೆ ಹೆಲಿಕಾಪ್ಟರ್ ಒಳಗಿದ್ದ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಮಂದಿ ನಿಧನರಾಗಿದ್ದಾರೆ. ಗ್ರೂಪ್ ಕ್ಯಾಪ್ಟನ್ ಬದುಕುಳಿದಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆತಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *