ಮಾರ್ಚ್ 15 ರಂದು ದಂತ ವೈದ್ಯರಿಗೆ ವಿಶೇಷ ಕಾರ್ಯಾಗಾರ

0 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 13 : ಖ್ಯಾತ ವಸಡು ರೋಗ ತಜ್ಞರು ಹಾಗೂ ಕಳೆದ 30 ವರ್ಷಗಳ ಅನುಭವವಿರುವ ಡಾ.ವಾದಿರಾಜ ಅವರಿಂದ ಖಾಸಗಿ ದಂತ ವೈದ್ಯರಿಗೆ “ವಸಡು ಚಿಕಿತ್ಸೆ ಹಾಗೂ ಕೃತಕ ಹಲ್ಲಿನ ಕೆಲಸ ನಿರ್ವಹಿಸುವ ಇಂಪ್ಲಾಂಟ್ ದೃಢತೆಯಲ್ಲಿ ವಸಡುಗಳ ಪಾತ್ರ ” ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ಮಾರ್ಚ್ 15 ರಂದು ನಡೆಯಲಿದೆ.

ನಗರದ ಎಪಿಎಂಸಿ ಮಾರ್ಕೆಟ್ ಗೇಟ್ ಎದುರು, ಜುಡಿಯೋ ಮೇಲ್ಭಾಗ ಜಗಳೂರು ಮಹಾಲಿಂಗಪ್ಪ ಟವರ್ಸ್ ನಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘ (ರಿ) ಇವರ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Share This Article