Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ಮೂರು ನನ್ನ ಸಾಹಿತಿ ಪ್ರೊ ಎಚ್. ಶ್ರೀಶೈಲ ಆರಾಧ್ಯರ ಸಂಪೂರ್ಣ ಮಾಹಿತಿ

Facebook
Twitter
Telegram
WhatsApp

 

ಹುಟ್ಟಿನ ಘಳಿಗೆ :
ಭಾರತ ಸ್ವಾತಂತ್ರ್ಯದ ಅಂಚಿನಲ್ಲಿ ಆಗತಾನೆ 1946ರಲ್ಲಿ ಜನ್ಮತಾಳಿದ ಹಿರಿಯ ಸಾಹಿತಿ ಪ್ರೊ.ಶ್ರೀಶೈಲ ಆರಾಧ್ಯರ ಬದುಕು, ಸ್ವಾತಂತ್ರ್ಯದ ಬದುಕು ಬದುಕಿನ ಮಧ್ಯೆ ಅರಳಿದ ದೈತ್ಯ ಸಾಹಿತ್ಯ ಪ್ರತಿಭೆ. ಸಾಮಾನ್ಯವಾಗಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದ ಆಡಳಿತ ಸೂತ್ರದ ಹೊಸನಾಂದಿ ಹಾಡಬಹುದಾದ ಸಂದರ್ಭದ ಇತಿಹಾಸದ ಪುಟಗಳಲ್ಲಿ ಬೆಳೆದುಬಂದ ರೀತಿ ಇಂದು ಸಂಶೋಧಕರ ಸಾಲಿನಲ್ಲಿ ಅಚ್ಚಳಿಯದೇ ಉಳಿದ ಧೀಮಂತರೆಂದರೆ ಅವರೇ ಪ್ರೊ.ಶ್ರೀಶೈಲ ಆರಾಧ್ಯರು.

ಅಪ್ಪ-ಅಮ್ಮ, ಊರು, ತುಂಬು ಸಂಸಾರ, ವಿದ್ಯಾಭ್ಯಾಸ:
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಅಕ್ಟೋಬರ್ 1946 ರಲ್ಲಿ ಜನಿಸಿದರು. ತಂದೆ ಜೆ.ಹಾಲಾರಾಧ್ಯ, ತಾಯಿ ಮರುಳಮ್ಮ ಇವರ ಜೇಷ್ಠಪುತ್ರ. ಪತ್ನಿ ಸಿ.ವಿ.ಉಮಾದೇವಿ. ಇವರಿಗೆ ಮೂವರು ಹೆಣ್ಣುಮಕ್ಕಳು. ಎಸ್.ಎಸ್.ರೋಹಿಣಿ ಶೈಲೇಂದ್ರ, ಡಾ.ಎಸ್.ಎಸ್.ಅನುರಾಧ ಡಾ.ನಾಗರಾಜ್, ಮತ್ತೊಬ್ಬರು ವಿಧಿವಶರಾಗಿದ್ದಾರೆ. ತುಂಬು ಜೀವನದ ಮುದ್ದಿನ ಮಕ್ಕಳ ಲಾಲನೆ ಪಾಲನೆಯಲ್ಲಿ ಸುಖದುಃಖ, ನೋವು ನಲಿವುಗಳನ್ನು ಕಂಡ ಕ್ಷಣಗಳು ಅನೇಕ. ಸ್ವಗ್ರಾಮ ಸೋಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೂದಿಹಾಳು ಮತ್ತು ಶ್ರೀರಾಂಪುರದ ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ, ತುಮಕೂರು ಮತ್ತು ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದ ಆರಾಧ್ಯರು ಕನ್ನಡದ ಸಾರಸ್ವತ ಲೋಕದ ಹಳಗನ್ನಡ, ಮಧ್ಯಕಾಲೀನ, ನವೋದಯ, ಆಧುನಿಕ ಕನ್ನಡ ಸಾಹಿತ್ಯದ ಅರಿವಿನ ಬುತ್ತಿಯನ್ನು ಕಟ್ಟಿಕೊಂಡರು. ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಕಾಲೇಜುಗಳಲ್ಲಿ 33 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಪಾರ ಶಿಷ್ಯಬಳಗವನ್ನು ಸಂಪಾದಿಸಿದ್ದಾರೆ. ಮಾತ್ರವಲ್ಲದೆ ಜ್ಯೋತಿಷ್ಯ ಅಧ್ಯಯನ, ರತ್ನಶಾಸ್ತ್ರ, ಭಾರತೀಯ ಪ್ರಾಚೀನ ಆಚರಣೆಗಳು, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಸಧ್ಯಯನ, ಮರಗಿಡ, ಅಂಚೆಯ ಸ್ಯಾಂಪು ಇತ್ಯಾದಿಗಳನ್ನು ಬರೆದು ಹಾಗೂ ಸಂಪಾದಿಸಿದ ಕೃತಿಗಳಾಗಿವೆ.

ಇತಿಹಾಸದ ನಂಟು:

ಹುಟ್ಟಿದೂರಿನ ಕೋಟೆಕೊತ್ತಲ, ಗುಡಿ, ಹಳ್ಳ-ಕೊಳ್ಳ, ಉಪ್ಪಿನ ಮಾಳೆ, ಗುಡ್ಡ, ಗವಿ, ಕಲ್ಲು ಪಡಾವುಗಳ ನಡುವೆ ಬೆಳೆದ ಆರಾಧ್ಯರು, ಸ್ವಾತಂತ್ರ್ಯ ಹೋರಾಟ, ಗಾಂಧೀ ಬದುಕು, ತತ್ವ, ದೇಶ, ಸಮಾಜಸ್ವಾಸ್ಥ್ಯದ ಬಗ್ಗೆ ಅಪ್ಪ ಅಮ್ಮನ ಮಾರ್ಗದರ್ಶನವು ಪ್ರಾಧ್ಯಪಕನಾಗಿ ರೂಪುಗೊಳ್ಳಲು ಅನುಕೂಲವಾಯ್ತು. ನಾಡಿನ ಸಂಸ್ಕøತಿ, ಪ್ರಾಚೀನ ಇತಿಹಾಸ, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ ಆಚರಣೆಗಳ ಬಗೆಗೆ ಮೂವತ್ತಕ್ಕೂ ಹೆಚ್ಚು ಲೇಖನಗಳನ್ನು ಮಂಡಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಯಲ್ಲಿನ ಶಿಲಾಯುಗದ ಮಾನವ ವಿರಚಿತ ರೇಖಾಚಿತ್ರಗಳು, ನೆರಳು ಬೆಳಕಿನ ಚಿತ್ರಗಳು, ಹುಟ್ಟು ಬಂಡೆಗಳಲ್ಲಿನ ಪ್ರಾಣಿ ಮತ್ತು ಮನುಷ್ಯನ ಆಕೃತಿಗಳನ್ನು ಉಜ್ಜಿ ಮೂಡಿಸಿರುವ ವಿಷಯ ಕುರಿತ ಸಂಶೋಧನೆಯ ಹಾದಿಯಲ್ಲಿ ಎಂಬ ಕೃತಿಯನ್ನು 1983 ರಲ್ಲಿ ಪ್ರಕಟಿಸಿದರು. ಪುರಾತನ ಇತಿಹಾಸದ ಪ್ಮಟಗಳನ್ನು ಅಧ್ಯಯನಕ್ಕಾಗಿ ತೆರೆದಿಟ್ಟರು. ಆಸಕ್ತಿ ತಳೆದ ಅನೇಕ ದೇಶೀಯರು ಮತ್ತು ವಿದೇಶಿ ವಿದ್ವಾಂಸರು ಇವರ ಕೃತಿಯಿಂದಾಗಿ ಆಕರ್ಷಿತರಾಗಿ ಸಂಶೋಧನೆಯ ವಿದ್ಯಾಭ್ಯಾಸಗಳಲ್ಲಿ ತೊಡಗಿದ್ದಾರೆ. ಇದೊಂದು ಕಾರ್ಯಶೋಧನೆ ತಮ್ಮ ಜೀವನದ ಒಂದು ಸಾಧನೆಯ ಮೈಲಿಗಲ್ಲು ಎಂದು ಆರಾಧ್ಯರು ಒಂದೆಡೆ ಸ್ಮರಿಸುತ್ತಾರೆ.

ಸಾಹಿತ್ಯ ಕೃಷಿ:
ಕಾಶಿ ಸಾಹಿತ್ಯ ಸಮೀಕ್ಷೆ (ಸಂಭಾವನ ಕೃತಿ-ಸಂಪಾದನೆ), ಸಂಶೋಧನೆಯ ಹಾದಿಯಲ್ಲಿ (ಪ್ರಾಚೀನ ಗುಹಾಚಿತ್ರಗಳ ಬಗೆಗೆ), ಸೀಮೇಗಿಲ್ಲದೋರ ಸೂರಿನ ಕೆಳಗೆ (ಗೆ ಲೇಖನಗಳು), ಚಿತ್ರದುರ್ಗ (ವಯಸ್ಕರ ಶಿಕ್ಷಣ ಸಮಿತಿಗೆ), ಚಿತ್ರದುರ್ಗ (ರಾಜ್ಯ ಮತ್ತು ಪ್ರಚಾರ ಇಲಾಖೆಗೆ), ಸೋಮನ ಕರಿಯಪ್ಪ (ಜಾನಪದ ಅಕಾದೆಮಿಗೆ), ಗಿರಿಮಲ್ಲಿಗೆ (ತರಾಸು ಸ್ಮರಣ ಸಂಪುಟದ ಸಂಪಾದನೆ), ರಾಷ್ಟ್ರನಾಯಕ (ಎಸ್ಸೆನ್ ಸಂಪುಟದ ಸಂಪಾದನೆ –ವಿದ್ವಾಂಸ ಮಿತ್ರರೊಡನೆ), ಪನ್ನೀರು ಗಿಂಡಿ (ಚಿತ್ರಣ,2020), ಚಿತ್ರದುರ್ಗ ಜಿಲ್ಲೆಯ ಮೂವರು ಅವಧೂತರು (2021).

ಸ್ಥಾನಮಾನಗಳು:
ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ, ಸ್ಥಳೀಯ ನಾಗರೀಕ ಹಿತರಕ್ಷಣಾ ವೇದಿಕೆ ಇವುಗಳ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಶಸ್ತಿ ಗೌರವಗಳು:
ಚಿತ್ರದುರ್ಗ ಜ್ಞಾನಭಾರತಿ ಟ್ರಸ್ಟ್ ಗೌರವ (2000), ಚಿತ್ರದುರ್ಗ ಜಿಲ್ಲಾ ಉತ್ಸವದಲ್ಲಿ ಗೌರವ (2006), ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾಡಳಿತದಿಂದ ಗೌರವ (2006), 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉಡುಪಿ ಗೌರವ (2007), ಕಾಂಗ್ರೇಸ್ ಸಂಸ್ಥಾಪನಾ 127ನೇ ವರ್ಷಾಚರಣೆ ಸಚಿದರ್ಭ ಚಿತ್ರದುರ್ಗ ಕಾಂಗ್ರೇಸ್ ಸಮಿತಿ ವತಿಯಿಂದ ಗೌರವ (2011), ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ “ಮುರುಘಾಶ್ರೀ” ಪ್ರಶಿಸ್ತಿ ಸ್ವೀಕರಿಸಿದ್ದಾರೆ.

 

ಸಂ.ಲೇಖನ: ಕೆ.ಪಿ.ಎಂ.ಗಣೇಶಯ್ಯ, ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ ದೂ: 9448664878

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸರ್ಕಾರಿ ಭೂಮಿಯನ್ನು ಸಕ್ರಮಗೊಳಿಸಲು ಸರ್ಕಾರ ನಿರ್ಧಾರ..!

ಬೆಂಗಳೂರು: ಸಾಕಷ್ಟು ಕಡೆ ಸರ್ಕಾರಿ ಭೂಮಿಯಲ್ಲೇ ಜನ ಉಳುಮೆ ಜಮೀನು ಮಾಡಿಕೊಂಡಿದ್ದಾರೆ. ಇದೀಗ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಕರ್ ಹುಕುಂ ಯೋಜನೆಯಡಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸಚಿವ ಕೃಷ್ಣ

ಚಿತ್ರದುರ್ಗ ಡಿಸಿಸಿ ಬ್ಯಾಂಕ್ ನಿಂದ 17 ಲಕ್ಷ ಶಿಕ್ಷಣ ನಿಧಿಗೆ ದೇಣಿಗೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಚಿತ್ರದುರ್ಗ ಇದರ ದಿನಾಂಕ:05-10-2024 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸನ್ಮಾನ್ಯ ಡಿ. ಸುಧಾಕರ್, ಮಾನ್ಯ

ಚಿತ್ರದುರ್ಗದಲ್ಲಿ ಶರನ್ನವರಾತ್ರಿ ಸಂಭ್ರಮ : ಕಣಿವೆಮಾರಮ್ಮ ಹಾಗೂ ತುಳಜಾ ಭವಾನಿ ದೇವಿಗೆ ವಿಶೇಷ ಪೂಜೆ

  ವರದಿ ಮತ್ತು ಫೋಟೋ ಕೃಪೆ, ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಹೊಳಲ್ಕೆರೆ, ಅಕ್ಟೋಬರ್. 05 : ದಸರಾ ನವರಾತ್ರಿ ವಿಶೇಷವಾಗಿ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನಿಗೆ ಶನಿವಾರ

error: Content is protected !!