ಮಂಗಳೂರು; ಸುಹಾಸ್ ಶೆಟ್ಟಿ ಹ* ಬಳಿಕ ಜಿಲ್ಲೆಯಲ್ಲಿ ತಳಮಳ ಜೋರಾಗಿದೆ. ಆತಂಕವೂ ಹೆಚ್ಚಾಗಿದೆ. ಮಂಗಳೂರನ್ನೇ ಈ ಹತ್ಯೆ ಬೆಚ್ಚಿ ಬೀಳಿಸಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ವಿಚಾರಣೆಯನ್ನು ನಡೆಸಲಾಗುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡ ಮಂಗಳೂರಿಗೆ ಭೇಟಿ ನೀಡಿ, ಮಹತ್ವದ ಘೋಷಣೆಯೊಂದನ್ನ ಮಾಡಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿಯ ಎರಡು ಜಿಲ್ಲೆಗೆ ಸ್ಪೆಷಲ್ ಫೋರ್ಸ್ ನಿಯೋಜನೆ ಮಾಡಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್ ಅವರು, ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕರಾವಳಿಯಲ್ಲಿ ಸದ್ಯ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಹೀಗಾಗಿ ಸುಹಾಸ್ ಶೆಟ್ಟಿ ಪ್ರಕತಣದ ಬಳಿಕ ಮತ್ತೊಂದು ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅದು ಆಂಟಿ ನಕ್ಸಲ್ ಫೋರ್ಸ್ ಮಾದರಿಯಲ್ಲೇ ಇರಲಿದೆ. ಉಡುಪಿ, ದಕ್ಷಿಣ ಕನ್ನಡ 2 ಜಿಲ್ಲೆಗಳಲ್ಲಿ ಆಂಟಿ ಕಮ್ಯುನಲ್ ಫೋರ್ಸ್ ಸ್ಥಾಪನೆ ಮಾಡಲಾಗುತ್ತಿದೆ.
ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡವನ್ನ ಇಲ್ಲಿಗೆ ನೇಮಿಸುತ್ತೇವೆ. ಕಾರ್ಕಳದಲ್ಲಿದ್ದ ANF ತರವೇ ಈ ಎರಡು ಜಿಲ್ಲೆಯಲ್ಲಿ ಕಮ್ಯುನಲ್ ಟಾಸ್ಕ್ ಫೋರ್ಸ್ ಇರುತ್ತೆ. ಪ್ರತ್ಯೇಕ ತಂಡವನ್ನು ನಾವೂ ಇಲ್ಲಿ ಇಡುತ್ತೇವೆ. ಎಎನ್ಎಫ್ ನಲ್ಲಿದ್ದ ಕೆಲವರನ್ನು ತಗೊತೀವಿ. ಕೆವರು ಬೇರೆ ಕಡೆಯಿಂದ ಬರ್ತಾರೆ. ಸದ್ಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಫೋರ್ಸ್ ಕೆಲಸ ಮಾಡಲಿದೆ. ಅವರಿಗೆ ಸ್ವತಂತ್ರ ಅಧಿಕಾರ ಕೊಡುತ್ತೇವೆ ಎಂದು ಗೃಹ ಸಚುವ ಜಿ.ಪರಮೇಶ್ವರ್ ತಿಳಿಸಿದ್ದಾರೆ.















