Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭೂಮಿ ಇಲ್ಲದ ಹಾಗೂ ವಸತಿ ಹೀನರಿಗೆ ಮೂಲಸೌಕರ್ಯ ಒದಗಿಸಲು ವಿಶೇಷ ಗಮನ ನೀಡಬೇಕು : ಕುಮಾರ್ ಸಮತಳ

Facebook
Twitter
Telegram
WhatsApp

 

ಚಿತ್ರದುರ್ಗ :  ಅನೇಕ ವರ್ಷಗಳಿಂದಲೂ ಸಾಗುವಳಿ ಮಾಡಿ ಬದುಕುತ್ತಿರುವ ಬಡವರ ಭೂಮಿಯನ್ನು ಕಸಿಯುವ ಹುನ್ನಾರ ನಡೆಸುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ, ದಲಿತ ವಿರೋಧಿ, ಬಡಜನರ ವಿರೋಧಿ ಕಾಯ್ದೆಗಳನ್ನು ಧಿಕ್ಕರಿಸಿ ಮಾರ್ಚ್ 21ರಿಂದ 23ರ ವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪರ್ಯಾಯ ಅಧಿವೇಶನ ನಡೆಸಿ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದೆಂದು ಭೂಮಿ-ವಸತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕುಮಾರ್ ಸಮತಳ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಭೂ-ಸುಧಾರಣಾ ಕಾಯ್ದೆಯಡಿ ಬಡವರಿಗೆ ಹಾಗೂ ತುಂಡು ಭೂಮಿಗಳನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ನೀಡುವುದನ್ನು ಬಿಟ್ಟು ಹಣಕ್ಕೆ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ ಇದು ಬಡವರಿಗೆ ಬಲವಾದ ಪೆಟ್ಟು ಕೊಟ್ಟಂತಾಗಿದೆ. ಕಂದಾಯ ಮಂತ್ರಿ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿದ್ದು, ಇದರಲ್ಲಿ ಐವರು ಮಂತ್ರಿಗಳಿದ್ದಾರೆ.

ಯಾವುದೇ ಕಾರಣಕ್ಕೂ ಸಾಗುವಳಿ ಮಾಡುವವರನ್ನು ಖಾಲಿ ಮಾಡಿಸಬಾರದೆಂದು ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಎಲ್ಲಾ ಸಂಘಟನೆಗಳವರು ಸೇರಿಕೊಂಡು ಪರ್ಯಾಯ ಅಧಿವೇಶನ ನಡೆಸಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಿಗ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಂದುವರೆ ಲಕ್ಷ ಅರ್ಜಿಗಳು ಬಾಕಿ ಇದ್ದು, ಭೂಮಿ ಇಲ್ಲದ ಹಾಗೂ ವಸತಿ ಹೀನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಶಾಸಕರುಗಳು ವಿಶೇಷ ಗಮನ ನೀಡಬೇಕು ಎಂದು ಕುಮಾರ್ ಸಮತಳ ಮನವಿ ಮಾಡಿದರು.

ಕರ್ನಾಟಕ ಜನಶಕ್ತಿ ರಾಜ್ಯಸಮಿತಿಯ ಸದಸ್ಯ ಟಿ.ಶಫಿವುಲ್ಲಾ ಮಾತನಾಡಿ 2015ರಲ್ಲಿ ಹುಟ್ಟಿಕೊಂಡ ಭೂಮಿ-ವಸತಿ ಹೋರಾಟ ಸಮಿತಿ ಸತತವಾಗಿ ಹಲವಾರು ಹೋರಾಟ, ಚಳುವಳಿ, ಪ್ರತಿಭಟನೆಗಳನ್ನು ಮಾಡಿ ಬಡ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಬರುತ್ತಿದ್ದೇವೆ.

ಇಲ್ಲಿಯವರೆಗೂ ನಮ್ಮ ಹೋರಾಟಗಳಿಗೆ ರಾಜ್ಯ ಸರ್ಕಾರ ಸ್ಪಂಧಿಸದ ಕಾರಣ ಇದೇ ತಿಂಗಳ 21ರಿಂದ 3 ದಿನಗಳ ಕಾಲ ಬೆಂಗಳೂರಿನ ಸ್ವಾತಂತ್ರ್ಯ ಉದ್ಯನವನದಲ್ಲಿ ಜನರ ಪರ್ಯಾಯ ಅಧಿವೇಶನ ನಡೆಸಲಾಗುವುದು. ಚಿತ್ರದುರ್ಗದಿಂದ 250ಜನ ಭಾಗವಹಿಸಲಿದ್ದಾರೆ ಎಂದರು.

ಸತ್ಯಪ್ಪ ಮಲ್ಲಾಪುರ ಮಾತನಾಡಿ ಕಂದಾಯ ಇಲಾಖೆಯವರು ಮೊದಲು ಭೂಮಿಗಳನ್ನು ಸರ್ವೇ ಮಾಡಿಸಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕು ಪತ್ರಗಳನ್ನು ನೀಡಬೇಕು. ಸರ್ಕಾರ ದಿನಕ್ಕೊಂದು ಕಾನೂನು ಜಾರಿಗೆ ತರುತ್ತಿರುವುದರಿಂದ ತುಂಡು ಭೂಮಿಗಳನ್ನೇ ನಂಬಿಕೊಂಡಿರುವ ರೈತರು ನೊಂದಿದ್ದಾರೆ. ಜಿಲ್ಲಾಧಿಕಾರಿ ತಹಶೀಲ್ದಾರ್ ಇವರುಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಆಯಾ ಕ್ಷೇತ್ರದ ಶಾಸಕರುಗಳು ಈ ಬಗ್ಗೆ ಗಮನ ಹರಿಸಲಿ ಎಂದು ವಿನಂತಿಸಿದರು.

ಈಚಗಟ್ಟ ಕರಿಯಣ್ಣ, ಹನುಮಂತಪ್ಪ ಗೋನೂರು, ಪುರುಷೋತ್ತಮ, ರಾಜಣ್ಣ ಇನ್ನು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ರೈತರಲ್ಲಿ ಸಂತಸ ತಂದ ಮಳೆ : ಉಳುಮೆಗೆ ಸಿದ್ಧತೆ

  ಚಿತ್ರದುರ್ಗ: ಕಳೆದ ಬಾರಿ ಮಳೆಯಿಲ್ಲದೆ, ಸರಿಯಾದ ಬಿತ್ತನೆ ಮಾಡಲಾಗದೆ ಹೈರಾಣಾಗಿದ್ದ ರೈತರ ಮೊಗದಲ್ಲಿ ಈಗ ಸಂತಸ ತುಂಬಿ ತುಳುಕುತ್ತಿದೆ. ಜಿಲ್ಲೆಯಲ್ಲೂ ಮಳೆಯ ದರ್ಶನ ಭಾಗ್ಯವಾಗಿದೆ. ಹೀಗಾಗಿ ರೈತರು ಉಳುಮೆ ಮಾಡಲು ಎಲ್ಲಾ ತಯಾರಿ

ಸನಾತನ ಧರ್ಮದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದ ಜಗದ್ಗುರು ಶಂಕರಾಚಾರ್ಯರರು : ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿಕೆ

  ಚಿತ್ರದುರ್ಗ.12: ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

error: Content is protected !!