ಮಾ.20 ರಂದು ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ಪರಿವರ್ತನಾ ಫೌಂಡೇಶನ್ ಟ್ರಸ್ಟ್ ವತಿಯಿಂದ “ಗುಬ್ಬಚ್ಚಿ ಬರ್ಡ್ ಫೆಸ್ಟಿವಲ್”

1 Min Read

ಚಿತ್ರದುರ್ಗ, (ಮಾ.19):  ಗುಬ್ಬಚ್ಚಿ ಬರ್ಡ್ ಟ್ರಸ್ಟ್, ಪರಿವರ್ತನಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಮಾ.20 ರಂದು ವಿಶ್ವ ಗುಬ್ಬಚ್ಚಿ­ಗಳ ದಿನಾಚರಣೆ ಅಂಗವಾಗಿ “ಗುಬ್ಬಚ್ಚಿ ಬರ್ಡ್ ಫೆಸ್ಟಿವಲ್” ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  • ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ.
  • · ಉದ್ಘಾಟನೆಯ ನಂತರ ನಗರ ಗಾಂಧಿವೃತ್ತದಿಂದ ಬಿ.ಡಿ. ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿ ವೃತ್ತದ ವರೆಗೆ (ಘೋಷಣಾ ರಹಿತ) ಜಾಥಾ ನಡೆಸಲಾಗುವುದು.
  • · 10ಕ್ಕೂ ಹೆಚ್ಚ ಸಂಘ ಸಂಸ್ಥೆಗಳಿಂದ ಅಂದಾಜು 100 ಜನ ಪರಿಸರ ಪ್ರೇಮಿಗಳು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಂತರ ಮನೆ ಮನೆಗೂ ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುವ ಪಕ್ಷಿಗಳಿಗಾಗಿ ಉಚಿತ ತಟ್ಟೆಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :
ಎಂ. ಕಾರ್ತಿಕ್
ಅಧ್ಯಕ್ಷರು, ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ಪರಿವರ್ತನಾ ಫೌಂಡೇಶನ್ ಟ್ರಸ್ಟ್, ಚಿತ್ರದುರ್ಗ
ಮೊ : 9986818001

Share This Article
Leave a Comment

Leave a Reply

Your email address will not be published. Required fields are marked *