ನೈರುತ್ಯ ಪದವೀಧರ ಚುನಾವಣೆ : ಬಂಡಾಯವೆದ್ದ ರಘುಪತಿ ಭಟ್ ಗೆ ಬೆಂಬಲ ನೀಡಿದ ಈಶ್ವರಪ್ಪ

suddionenews
1 Min Read

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಇಬ್ಬರು ಈಗ ಒಂದೇ ದೋಣಿಯ ಪಯಣಗಿರು. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯಿಂದ ಅವರನ್ನು ಉಚ್ಛಟಾನೆ ಕೂಡ ಮಾಡಿದ್ದಾರೆ. ಇದೀಗ ರಘುಪತಿ ಭಟ್ ಕೂಡ ಅದೇ ಹಾದಿ ಹಿಡಿದಿದ್ದಾರೆ.

ನೈರುತ್ಯ ಪದವೀಧರರ ಚುನಾವಣೆಗೆ ರಘುಪತಿ ಭಟ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈ ಬಾರಿ ಬಿಜೆಪಿ ಅವರಿಗೂ ಟಿಕೆಟ್ ನೀಡಿಲ್ಲ. ಈ ಬೆಳವಣಿಗೆ ಸಹಜವಾಗಿಯೇ ಬಿಜೆಪಿ ಕಟ್ಟಾಳುಗಳಿಗೆ ಬೇಸರ ತರಿಸಿದೆ. ಇದೀಗ ರಘುಪತಿ ಭಟ್ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧರಿಸಿದ್ದಾರೆ. ಪಕ್ಷದಿಂದ ಉಚ್ಛಾಟನೆ ಮಾಡಿದರು ಸರಿ, ನಿಲ್ಲುತ್ತೇನೆ ಎಂಬ ದೃಢ ನಿರ್ಧಾರವನ್ನು ಅಂದೇ ತಿಳಿಸಿದ್ದಾರೆ. ಇದೀಗ ರಘುಪತಿ ಭಟ್ ಬೆಂಬಲಕ್ಕೆ ಕೆ.ಎಸ್ ಈಶ್ವರಪ್ಪ ನಿಂತಿದ್ದು, ಅವರಿಗೆ ವೋಟ್ ಹಾಕುವುದಾಗಿ ಹೇಳಿದ್ದಾರೆ. ಜೂನ್ 3ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಶಿವಮೊಗ್ಗದಾದ್ಯಂತ ರಘುಪತಿ ಭಟ್ ಪರ ಪ್ರಚಾರ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆ.ಎಸ್. ಈಶ್ವರಪ್ಪ, ಪಕ್ಷದ ವ್ಯವಹಾರಗಳಲ್ಲಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಏಕಸ್ವಾಮ್ಯ ಮೆರೆಯುತ್ತಿದೆ. ಮೊದಲಿದ್ದ ಸಾಮೂಹಿಕ ನಾಯಕತ್ವ ಈಗ ಕಾಣೆಯಾಗಿದೆ. ಇದನ್ನೇ ಬದಲಾಯಿಸಬೇಕು ಎಂದು ತಾನೂ ಮತ್ತು ರಘುಪತಿ ಭಟ್ ಪಣ ತೊಟ್ಟಿದ್ದೇವೆ. ಬ್ರಹ್ಮ ಅಡ್ಡ ಬಂದರೂ ನೈರುತ್ಯ ಪದವೀಧರ ಕ್ಷೇತ್ರದಿಂದ ಭಟ್ ಗೆಲುವು ಸಾಧಿಸುತ್ತಾರೆ. ಹಿಂದುತ್ವದಲ್ಲಿ ಶಿವಮೊಗ್ಗ ಜಿಲ್ಲೆಯು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗಿಂತ ಹಿಂದೆ ಏನು ಇಲ್ಲ. ಹಿಂದುತ್ವದಲ್ಲಿ ನಂಬಿಕೆ ಇರುವವರು ಭಟ್ ಪರವಾಗಿ ಮನೆ ಮನೆಗೆ ಹೋಗಿ ಮತಯಾಚಿಸೋಣಾ ಎಂದರು.

Share This Article
Leave a Comment

Leave a Reply

Your email address will not be published. Required fields are marked *