ಹಾವೇರಿ: ಹೀರೆಮಠದ ಬಾಗಿಲು ಮುರಿದು ಸ್ಫಟಿಕ ಲಿಂಗವನ್ನು ಕಳ್ಳತನ ಮಾಡಿರುವ ಘಟನೆ ರಾಣೆಬೆನ್ನೂರಿನ ಲಿಂಗದಹಳ್ಳಿ ಹಿರೇಮಠದಲ್ಲಿ ನಡೆದಿದೆ. ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಮಠದ ಸ್ಫಟಿಕ ಲಿಂಗವೂ ಪುರಾತನ ಕಾಲದ್ದಾಗಿದೆ. ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಸ್ಫಟಿಕ ಲಿಂಗವೆಂಬ ಖ್ಯಾತಿ ಪಡೆದಿದೆ. ಮಠದಲ್ಲಿ ಸ್ವಾಮೀಜಿಗಳು ಇಲ್ಲದ ವೇಳೆಯನ್ನು ಗಮನಿಸಿದ ಕಿಡಿಗೇಡಿಗಳು ಇಂಥ ಕೃತ್ಯವೆಸಗಿದ್ದಾರೆ.
ಎಂಟನೇ ಶತಮಾನದ ಲಿಂಗ ಇದಾಗಿದೆ. ಮಠದಲ್ಲಿ ವೀರಭದ್ರ ಶಿವಾಚಾರ್ಯರು ಇಲ್ಲದ್ದನ್ನು ಗಮನಿಸಿ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಭಕ್ತಾಧಿಗಳು ಕೂಡ ಗಾಬರಿಯಾಗಿದ್ದಾರೆ.
![](https://suddione.com/content/uploads/2025/01/shivasagar.webp)
![](https://suddione.com/content/uploads/2025/01/studio-11-2.webp)