ವಿಶೇಷ ಲೇಖನ : ಜೆ. ಪರುಶುರಾಮ, ನಿವೃತ್ತ ಹಿರಿಯ ಭೂವಿಜ್ಞಾನಿ, ಚಿತ್ರದುರ್ಗ. ಮೊ : 944833882
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.16 : ವಿಧಿ ಮತ್ತೆ ಕೊಪಿಸಿಗೊಂಡಿದೆ. ಕೊರೊನಾದಿಂದ ದೇಶ ಎರಡು ವರ್ಷ ತತ್ತರಿಸಿ ಹೋಗಿತ್ತು. ಮುಂದಿನ ದಿನಗಳಲ್ಲಿ ಇಡೀ ಜಗತ್ತು ನೀರಿಗಾಗಿ ಪರದಾಡುವ ದಿನಗಳೇನೂ ದೂರವಿಲ್ಲ. ಈಗಾಗಲೇ ನಾವು ನೀರಿನ ಅಭಾವ ಮತ್ತು ಅಂತರ್ಜಲದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಾವು ಇನ್ನಾದರು ಎಚ್ಚರ ವಹಿಸಬೇಕು. ಇಲ್ಲವಾದರೆ ಕೊನೆಗೆ ಈ ಜಗತ್ತಿನ ದುಃಖದ ಪಯಣ ಬಹು ಬೇಗ ಬರುವುದರಲ್ಲಿ ಅನುಮಾನವೇ ಇಲ್ಲ ಎಂದು ಹಿರಿಯ ಭೂವಿಜ್ಞಾನಿ ಜೆ. ಪರುಶುರಾಮ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬರಸಿಡಿಲಿನಿಂದ ತತ್ತರಿಸಿದ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್‍ಟೌನ್ ವಿಶ್ವದ ಮೊದಲ ನೀರು ಮುಕ್ತ ನಗರ ಎಂದು ಏಪ್ರ್ರಿಲ್ 14, 2023 ರಲ್ಲಿ ಅಲ್ಲಿನ ಸರ್ಕಾರ ಘೋಷಿಸಿದೆ.
ಇನ್ನಾದರೂ ಎಚ್ಚೆತ್ತುಕೊಂಡು ನಾವು ನೀರನ್ನು ಮಿತವಾಗಿ ಬಳಸಿ. ನೀರನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಿ, ಪ್ರಪಂಚದ ನೀರಿನಲ್ಲಿ ಕೇವಲ 2.7% ಮಾತ್ರ ಕುಡಿಯಲು ಯೋಗ್ಯವಾಗಿದೆ. ಅಣೆಕಟ್ಟುಗಳಲ್ಲಿನ ನೀರಿನ ಮಟ್ಟ ಕಡಿಮೆಯಾಗಿದೆ. ಜವಾಬ್ದಾರಿ ನಾಗರಿಕರಾಗಿ ನಾವು ನೀರನ್ನು ವ್ಯರ್ಥಮಾಡುವುದನ್ನು ನಿಲ್ಲಿಸಿ, ನೀರನ್ನು ಮಿತವಾಗಿ ಬಳಸಬೇಕು. ನಮ್ಮ ದೇಶದ ಹಲವಾರು ಪ್ರದೇಶಗಳು ಇಂತಹ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುವ ಸಂಭವ ಹೆಚ್ಚು. ಇದು ವೈಜ್ಞಾನಿಕವಾಗಿ ಸತ್ಯವಾಗಿದೆ.
ಚಿತ್ರದುರ್ಗ ಜಿಲ್ಲೆಯು ಈಗಾಗಲೇ ಬರಪೀಡಿತ ಪ್ರದೇಶ ಎಂದು ಗುರುತಿಸಿ ಕೊಂಡಿದೆ. ನೀರಿನ ಮೂಲ ಕಡಿಮೆ ಇರುವುದರಿಂದ ಅಂತರ್ಜಲ ಬಳಕೆ ಹೆಚ್ಚಾಗಿದೆ. ಆಂತರ್ಜಲದ ಮಟ್ಟ ಬಹಳ ಕೆಳಗೆ ಇಳಿಯುತ್ತಿದೆ. ಮುಂದಿನ ದಿನಗಳಲ್ಲಿ ಭದ್ರಾ ಮೇಲ್ಡಂಡೆ ಬಂದರೆ ಸುಮಾರು ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲದ ವೃದ್ಧಿ ಮಾಡಬಹುದು.
ಅಲ್ಲಿಯವರೆಗೆ ಅಂತರ್ಜಲದ ಬಳಕೆಗಳನ್ನು ಮಿತವಾಗಿ ಉಪಯೋಗಿಸಬೇಕು ಹಾಗೂ ಮುಂದೆ ಬರುವ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ನಾವೆಲ್ಲಾ ಒಂದಾಗಿ ಅಂತರ್ಜಲದ ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನಸಬೇಕಾಗುತ್ತದೆ. ಇಲ್ಲವಾದರೆ ನಮ್ಮ ದೇಶವೂ ಕೇಪ್ ಟೌನ್ ಆಗುವುದು ದೂರವಿಲ್ಲ ಎಂದು ಹಿರಿಯ ಭೂವಿಜ್ಞಾನಿ ಜೆ. ಪರುಶುರಾಮ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ.