ಬೆಂಗಳೂರು: ಒಮಿಕ್ರಾನ್ ವೈರಸ್ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದೆ. ಈಗಾಗ್ಲೇ ಕರ್ನಾಟಕದಲ್ಲೂ ಎರಡೂ ಕೇಸ್ ಗಳು ಪತ್ತೆಯಾಗಿದ್ದು, ಈಗಾಗ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕದಲ್ಲಿದ್ದವರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಇನ್ನು ಬಿಬಿಎಂಪಿಗೆ ದಕ್ಷಿಣ ಆಫ್ರಿಕಾದಿಂದ ಬಂದವರದ್ದೇ ದೊಡ್ಡ ತಲೆನೋವಾಗಿದೆ. ಈಗಾಗ್ಲೇ ದಕ್ಷಿಣ ಆಫ್ರಿಕಾದಿಂದ 57 ಮಂದಿ ಬಂದಿದ್ದಾರೆ. ಅವರಲ್ಲೆರನ್ನು ಬಿಬಿಎಂಪಿ ಗಮನದಲ್ಲಿಟ್ಟುಕೊಂಡಿದೆ. ಅದರಲ್ಲಿ ಇತ್ತೀಚೆಗಷ್ಟೇ 10 ಜನ ಎಸ್ಕೇಪ್ ಆಗಿದ್ದರು. ಅದರಲ್ಲಿ 9 ಜನ ಮಾತ್ರ ಪತ್ತೆಯಾಗಿದ್ದಾರೆ.

ಬಿಬಿಎಂಪಿ ಪೊಲೀಸರ ಸಹಕಾರ ತೆಗೆದುಕೊಂಡು ಹುಡುಕಾಟ ನಡೆಸಿದಾಗ 9 ಮಂದಿಯಷ್ಡೇ ಪತ್ತೆಯಾಗಿದ್ದಾರೆ. ಇನ್ನೊಬ್ಬ ಪತ್ತೆಯಾಗಿಲ್ಲ. ಆತನಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
38 ದೇಶಗಳಿಗೆ ಒಮಿಕ್ರಾನ್ ಎಂಟ್ರಿಯಾಗಿದ್ದು, ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಅಮೆರಿಕಾ, ರಷ್ಯಾ, ಕೆನಡಾಗೂ ಕಾಟ ಶುರುವಾಗಿದೆ. ಅದರಲ್ಲೂ ದ.ಆಫ್ರಿಕಾದಿಂದ ಬರುತ್ತಿರುವ ವ್ಯಕ್ತಿಗಳಲ್ಲಿ ಒಮಿಕ್ರಾನ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಬೆಂಗಳೂರಿನಲ್ಲೂ ಆ ರಾಷ್ಟ್ರದಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ.

