ನವದೆಹಲಿ: ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಬಿಸಿಸಿಐ ಆಯ್ಕೆ ಮಾಡಿದ್ದು, ಹೊಸ ವಿಚಾರವೊಂದು ಹೊರ ಬಿದ್ದಿದೆ. ಅವರ ಮಗನೇ ಅವರ ಆಯ್ಕೆಗೆ ಕಾರಣವಂತೆ. ಈ ಬಗ್ಗೆ ಬಿಸಿಸಿಐ ಹೊಸ ವಿಚಾರ ಬಿಚ್ಚಿಟ್ಟಿದೆ.
ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದು, ಮಗನ ಕಾರಣದಿಂದಲೇ ರಾಹುಲ್ ದ್ರಾವಿಡ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ರಾಹುಲ್ ಮಗ ನನಗೆ ಕರೆ ಮಾಡಿ, ಅವರು ಮನೆಯಲ್ಲಿ ತುಂಬಾ ಸ್ಟ್ರಿಕ್ಟ್. ನನ್ನಪ್ಪನನ್ನು ಕೋಚ್ ಆಗಿ ಆಯ್ಕೆ ಮಾಡಿಬಿಡಿ ಎಂದು ಮಗ ಬೆದರಿಕೆ ಹಾಕಿದ್ದ. ಆಗ ನಾನು ದ್ರಾವಿಡ್ ಗೆ ಹೇಳಿದೆ. ಈಗ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಸಮಯ ಸೇರಿಕೊಂಡು ಬಿಡು ಎಂದೆ ಎಂದು ಸತ್ಯಾಂಶ ಹೇಳಿದ್ದಾರೆ.
ನಾವಿಬ್ಬರು ಒಟ್ಟಿಗೆ ಬೆಳೆದವರು. ಒಟ್ಟಿಗೆ ವೃತ್ತಿ ಆರಂಭಿಸಿದವರು. ಹೆಚ್ಚಿನ ಸಮಯವನ್ನ ಒಟ್ಟಾಗಿ ಕಳೆದಿದ್ದೇವೆ. ಹಾಗಾಗಿ ನಮ್ಮಿಬ್ಬರ ನಡುವೆ ಎಲ್ಲವೂ ಓಪನ್ ಆಗಿಯೇ ಇರುತ್ತೆ ಎಂದು ಅವರು ರಾಹುಲ್ ದ್ರಾವಿಡ್ ಹಾಗೂ ಅವರ ನಡುವಿನ ಸ್ನೇಹವನ್ನ ತಿಳಿಸಿದ್ದಾರೆ.