ಮಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ನಡೆದು ಹತ್ತು ವರ್ಷಗಳೇ ನಡೆದಿವೆ. ಆದ್ರೆ ಇನ್ನು ಕೂಡ ನ್ಯಾಯ ಮಾತ್ರ ಸಿಕ್ಕಿಲ್ಲ. ಇತ್ತಿಚೆಗೆ ನ್ಯಾಯಕ್ಕಾಗಿ ಹೋರಾಟ ತೀವ್ರಗೊಂಡಿದೆ. ಇದೀಗ ಬಿಜೆಪಿ ನಾಯಕರು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸುನೀಲ್ ಕುಮಾರ್ ಮಾತನಾಡಿದ್ದಾರೆ. ನಾವೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
2012ರ ಘಟನೆ ಇಂದು ತೀವ್ರತೆ ಪಡೆದುಕೊಳ್ತಿದೆ. ಸೌಜನ್ಯ ಹತ್ಯೆ, ಅತ್ಯಾಚಾರ ನಾಗರಿಕ ಸಮಾಜ ಒಪ್ಪಲ್ಲ. ಹೋರಾಟದಿಂದ ಬಿಜೆಪಿ ಎಂದಿಗೂ ಹಿಂದೆ ಸರಿಯಲ್ಲ. ಸೌಜನ್ಯ ಪ್ರಕರಣದ ಎಲ್ಲಾ ಹೋರಾಟಕ್ಕೂ ಬಿಜೆಪಿ ಬೆಂಬಲ ನೀಡುತ್ತದೆ.
ಕೆಲವರು ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರಾ ಏನು ಹೇಳಿದ್ರು..? ಪ್ರಕರಣದ ಹಿಂದೆ ಯಾರಿದ್ದಾರೆ ಎಂಬ ಸತ್ಯ ಗೊತ್ತಿದೆ ಎಂದಿದ್ದಾರೆ. ಸತ್ಯ ಹೇಳಿದರೆ ಜೀವಕ್ಕೆ ಆತಂಕ ಎಂದಿದ್ದಾರೆ. ವಸಂತ ಬಂಗೇರಾ ಸತ್ಯ ಹೇಳಿದರೆ ಬೆಂಬಲಿಸುತ್ತೇವೆ. ಸತ್ಯ ಗೊತ್ತಿದ್ದರೂ ಮುಚ್ಚಿಡುವುದು ಅಪರಾಧವೇ ಸರಿ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.