in ,

ಸೌಭಾಗ್ಯ ಬಸವರಾಜನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ಮಾಜಿ ಶಾಸಕ ಎಸ್. ಕೆ.ಬಿ. ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ?

suddione whatsapp group join

 

ವರದಿ ಮತ್ತು ಫೋಟೋ ಕೃಪೆ : ಸುರೇಶ್ ಪಟ್ಟಣ್,                         ಮೊ : 87220 22817

ಚಿತ್ರದುರ್ಗ: (ಏ.09) :  2023 ವಿಧಾನಸಭಾ ಚುನಾವಣೆಗೆ ಚಿತ್ರದುರ್ಗದಿಂದ ಸೌಭಾಗ್ಯ ಬಸವರಾಜನ್ ರವರು ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅವರು ತಿಳಿಸಿದರು.

ನಗರದ ಕಾರ್ಯನಿರ್ತರ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

2023 ವಿಧಾನ ಸಭಾ ಕ್ಷೇತ್ರ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದಂತಹ ನನಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಇದರಿಂದ ಬೇಸರ ಪಟ್ಟಿದ್ದರು ನನ್ನ ಅಭಿಮಾನಿಗಳು ಚುನಾವಣೆಗೆ ಸ್ವರ್ಧೆ ಮಾಡುವಂತೆ ಅವರಿಗೆ ತಿಳಿಸಿದರು.

ಅಭಿಮಾನಿ, ಕಾರ್ಯಕರ್ತರ ಸಭೆ ಕರೆದಾಗ ನೀವು ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ನಾನು ಅಥವಾ ನನ್ನ ಪತ್ನಿ ಸ್ಪರ್ಧೆ ಎಂಬ ಅನಿಸಿಕೆ ಬಂದಾಗ ಚರ್ಚಿಸಿ ನಮ್ಮ ಪತ್ನಿಯನ್ನು ಕಣಕ್ಕೆ ಇಳಿಸಲು ತಿರ್ಮಾನ ಮಾಡಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಎಲ್ಲಾ ಪಕ್ಷದ ಎಲ್ಲಾ ಜನಾಂಗದ ಜನರು ಬೆಂಬಲ ನೀಡುತ್ತಿದ್ದು ನಮ್ಮ ಶಕ್ತಿ ಹೆಚ್ಚಿಸಿದ್ದು ಕಳೆದ ಮೂವತ್ತು ವರ್ಷಗಳ ಕಾಲ ನಾವು ಜನರ ಜೊತೆ ಸಂಪರ್ಕದಲ್ಲಿದ್ದು ಕಷ್ಟ ಸುಖ ಆಲಿಸುವ ಕೆಲಸ ನಮ್ಮ ಕುಟುಂಬ ಮಾಡಿದ್ದು ಅದಕ್ಕೆ ಜನ ನಮ್ಮ ಬೆಂಬಲವಾಗಿ ನಿಲ್ಲುತ್ತಾನೆ ಎಂಬ ನಂಬಿಕೆ ನಮಗಿದೆ ಎಂದು ಭರವಸೆ ಇದೆ ಎಂದು ಎಸ್,ಕೆ,ಬಸವರಾಜನ್ ಹೇಳಿದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ ನಮ್ಮ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಸೌಭಾಗ್ಯ ಬಸವರಾಜನ್ ಅವರು ಎಂದು ಸೋಲು ಕಂಡಿಲ್ಲ. ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿಯವರೆಗೂ ಎಲ್ಲೂ ಕೂಡ ಸೋಲು ಕಂಡಿಲ್ಲ. ಹಾಗಾಗಿ ನನ್ನ ಮೇಲೆ ವಿಶ್ವಾಸ ಹೆಚ್ಚು ಇದೆ. ಕಳೆದ ಬಾರಿ ಸಹ ಸ್ಪರ್ಧೆ ಮಾಡಿಲ್ಲ ನೀವು. ನೀವು ಸ್ಪರ್ಧೆ ಮಾಡಿಲ್ಲ ಎಂದರೆ ನಾವು ಯಾರ ಮನೆ ಬಾಗಿಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದು ನಮ್ಮ ಕಾರ್ಯಕರ್ತರ ನಿರ್ಧಾರಕ್ಕೆ ನಾವು ಬದ್ಧವಾಗಿ ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.

3 ಬಾರಿ ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಅಕ್ಕ ಎಂದು ಜಿಲ್ಲೆಯ ಜನ ಪ್ರೀತಿಸುತ್ತಾರೆ. ಎಂತಹ ಪರಿಸ್ಥಿತಿ ಬಂದರೂ ಸಹ ಚಿತ್ರದುರ್ಗ ಬಿಟ್ಟು ಹೋಗಲಿಲ್ಲಿ. ಅವರ ಋಣ ತೀರಿಸಲು ನಾನು ಸ್ಪರ್ಧೆ ಮಾಡಬೇಕು. ಎಲ್ಲಾ ತಾಯಂದಿರು ನೀವು ಸ್ಪರ್ಧೆ ಮಾಡಬೇಕು. ಎಲ್ಲಾರ ಮನೆಯಲ್ಲಿ ಹೆಣ್ಣು ಮಕ್ಕಳ ಸ್ಪರ್ಧೆಗೆ ಬೆಂಬಲ ನೀಡಲ್ಲ. ಆದರೆ ನನ್ನ ಪತಿ ಬಸಣ್ಣ ಅವರು ನನಗೆ ಸ್ಪರ್ಧೆಗೆ ಬೆಂಬಲ ನೀಡಿದ್ದು ನನಗೆ ಸಂತಸ ತಂದಿದ್ದಾರೆ.

ಸ್ವಾಮೀಜಿಗಳು, ಅಕ್ಕಂದಿರು, ಅಣ್ಣಂದಿರು, ಸಮಾಜದ ಮುಖಂಡರು,ಇತರೆ ಸಮಾಜದ ಮುಖಂಡರು ಸಹ ನನಗೆ ಬೆಂಬಲ ವ್ಯಕ್ತಪಡಿಸಿದ್ದು ನನಗೆ ಶಕ್ತಿ ತಂದಿದೆ ಎಂದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಪುಷ್ಪ-2 ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ಹಿಂದೂ ಭಾವನೆಗೆ ಧಕ್ಕೆ ತಂದರಾ..?

ಈ ರಾಶಿಯವರ ವೈಭೋಗದ ಜೀವನ, ಭು-ವ್ಯವಹಾರಗಳಲ್ಲಿ ತೃಪ್ತಿ, ಸೇವಾ ಆಧಾರಿತ ಉದ್ಯೋಗಿಗಳಿಗೆ ಸಿಹಿ ಸುದ್ದಿ