ದೇವನಹಳ್ಳಿ: ದೇವೇಗೌಡರ ಭದ್ರಕೋಟೆಯನ್ನು ಛಿದ್ರ ಮಾಡಲು ಹೊರಟಿದ್ದಾರಲ್ಲ ಅವರೆಲ್ಲ ಒಂದೇ ಅಲ್ವಾ. ಒಂದೇ ಫ್ಲೈಟ್ ನಲ್ಲಿ ಹೋಗಿರುವ ಫೋಟೋಗಳಿವೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವನು ಈಗ ಬಿಜೆಪಿಯ ಮಹಾನಾಯಕ ಆಗೋದಕ್ಕೆ ಹೊರಟಿದ್ದಾನೆ. ಅವ್ನನ್ನು ಸುತ್ತಿಸುತ್ತಾ ಇದ್ದಾರೆ ಸುತ್ತಿಸಲಿ ಎಂದಿದ್ದಾರೆ.
ಇನ್ನು ಪಿಎಸ್ಐ ಅಕ್ರಮದಲ್ಲಿ ಅಶ್ವತ್ಥ್ ನಾರಾಯಣ್ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಈ ವೇಳೆ ಚಾರಕ್ಕೆ ಸಂಬಂಧಿಸಿದಂತೆ ಹಲವಾರು ರೀತಿ, ಕೇಂದ್ರೀಯ ಮಟ್ಟದಲ್ಲಿಯೇ ಬೆಂಗಳೂರು ನಗರದಿಂದಲೆ ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿರುವುದು ಮಾಹಿತಿಗಳು ಸೋರಿಕೆಯಾಗುತ್ತಿದೆ. ಇದು ಕಲಬುರಗಿಗೆ ಸೀಮಿತವಾಗಿಲ್ಲ ಬೆಂಗಳೂರು ನಗರದಲ್ಲಿ ಸಹ ಇದಕ್ಕೆ ಉತ್ತೇಜನ ಕೊಡುತ್ತಿರುವುದು, ದೊಡ್ಡಮಟ್ಟದ ಅಧಿಕಾರಿಗಳಿಂದಲೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ನಾನು ಈ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇನೆ. ನಾಳೆ ನಾಡಿದ್ದರಲ್ಲಿ ನಿಮ್ಮ ಮುಂದೆ ಸಮಗ್ರವಾಗಿ ಮುಂದಿಡುತ್ತೇನೆ. ನನಗೆ ಯಾವ ಮಾಹಿತಿ ಬರುತ್ತೆ, ವಾಸ್ತವಾಂಶ ಯಾವುದೇ ರೀತಿಯಲ್ಲಿ ಯಾರನ್ನು ಟಾರ್ಗೆಟ್ ಇಟ್ಟು ಹೇಳಲ್ಲ. ಇದರ ವಾಸ್ತವಾಂಶ ಏನಿದೆ..? ನನಗೂ ಆ ನೊಂದ ಅಭ್ಯರ್ಥಿಗಳೇನಿದ್ದಾರೆ ಅವರು ಸಂಪರ್ಕಿಸಿದ್ದಾರೆ. 545 ಆಯ್ಕೆಯಾದಂತ ಪಟ್ಟಿ ರದ್ದು ಮಾಡಿ ಹೊಸದಾಗಿ ಪರೀಕ್ಷೆ ಬರೆಯಲು ಸರ್ಕಾರದಿಂದ ತೀರ್ಮಾನವಾಗಿದೆ. ಅದರಲ್ಲಿ ಕೆಲವರು ಸತ್ಯಾಗ್ರಹ ಮಾಡುತ್ತಿದ್ದಾರೆ. ನನಗೂ ಸಹ ಆ ಬೆಂಬಲ ಕೊಡಿ ಅಂತ ಆಯ್ಕೆಯಾದ ಒಂದು ವರ್ಗದವರು ಕೇಳುತ್ತಿದ್ದಾರೆ. ಈಗಾಗಲೇ ಏಕಾಏಕಿ ಯಾಕೆ ರದ್ದು ಮಾಡಿದ್ದೀರಿ. ಸಂಪೂರ್ಣ ವರದಿ ತೆಗೆದುಕೊಂಡ ಬಳಿಕ ತೀರ್ಮಾನಕ್ಕೆ ಬರಬೇಕಾಗಿತ್ತು ಎಂದು ಸರ್ಕಾರಕ್ಕೆ ಕೇಳಿದ್ದೆ. ಆದರೆ ನನಗೆ ಬೇರೆ ಬೇರೆ ರೀತಿಯಾದ ಮಾಹಿತಿ ಬರುತ್ತಿದೆ ಎಂದಿದ್ದಾರೆ.