ಶೀಘ್ರದಲ್ಲೇ ಚಿನ್ನದ ಬೆಲೆ 1 ಲಕ್ಷ ರೂಪಾಯಿ…?

ಸುದ್ದಿಒನ್ : ಗಗನಕ್ಕೇರುತ್ತಿರುವ ಬಂಗಾರದ ಬೆಲೆ ಏರಿಕೆ ನಿಲ್ಲುತ್ತಿಲ್ಲ. ಊಹೆಗೆ ನಿಲುಕದ ರೀತಿಯಲ್ಲಿ ನಿರೀಕ್ಷೆಗಿಂತ ವೇಗವಾಗಿ ಬೆಲೆ ಏರುತ್ತಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಮೊದಲ ಬಾರಿಗೆ 89,000 ರೂಪಾಯಿಗಳ ಗಡಿಯನ್ನು ತಲುಪಿದೆ. ಬೆಳ್ಳಿ ಕೂಡ ಏರಿಕೆ ಕಂಡಿದೆ.

ಈ ಏರಿಕೆ ಇನ್ನೂ ಎಷ್ಟು ಕಾಲ ? ಒಂದು ಲಕ್ಷ ರೂಪಾಯಿ ಗಡಿ ಮುಟ್ಟಿದ ನಂತರ ಅದು ನಿಲ್ಲುತ್ತದೆಯೇ? ಅಥವಾ ಅದು ಇನ್ನೂ ಮುಂದುವರಿಯುತ್ತದೆಯೇ ? ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ.

ಸಪ್ತ ಸಾಗರದಾಚೆ ಇರುವ ಒಂದು ದೇಶದ ಅಧ್ಯಕ್ಷರು ವಿಶ್ವಾದ್ಯಂತ ಚಿನ್ನದ ಬೆಲೆಯನ್ನು ನಿಯಂತ್ರಿಸುತ್ತಾನೆ. ಹೌದು ಇದು ನಿಜ. ಅಮೆರಿಕದ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದುಕೊಂಡರೆ ಭಾರತದಲ್ಲಿ ಒಂದು ತೊಲ ಚಿನ್ನದ (10 ಗ್ರಾಂ) ಬೆಲೆ ಒಂದು ಲಕ್ಷ ರೂಪಾಯಿಗಳನ್ನು ದಾಟುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಶೀಘ್ರದಲ್ಲೇ 10 ಗ್ರಾಂ ಚಿನ್ನದ ಬೆಲೆ ರೂ. ಒಂದು ಲಕ್ಷ ದಾಟುವುದು ಖಚಿತ ಎನಿಸುತ್ತದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಅಮೆರಿಕವು ಲಂಡನ್‌ನ ಥ್ರೆಡ್ ಸ್ಟ್ರೀಟ್‌ನಲ್ಲಿರುವ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪದಿಂದ ಚಿನ್ನವನ್ನು ಆರ್ಡರ್ ಮಾಡಲು ಪ್ರಾರಂಭಿಸಿದೆ. ಹೀಗಾಗಿ, ಇಲ್ಲಿಯವರೆಗೆ 8,000 ಚಿನ್ನದ ಬಾರ್‌ಗಳು ಅಮೆರಿಕದ ನ್ಯೂಯಾರ್ಕ್ ಚಿನ್ನದ ಮೀಸಲು ಪ್ರದೇಶವನ್ನು ತಲುಪಿವೆ. ಇದರ ಪರಿಣಾಮವಾಗಿ ನ್ಯೂಯಾರ್ಕ್ ಚಿನ್ನದ ಮೀಸಲು 17.5 ಮಿಲಿಯನ್ ಟ್ರಾಯ್ ಔನ್ಸ್ ನಿಂದ 34 ಮಿಲಿಯನ್ ಟ್ರಾಯ್ ಔನ್ಸ್ ಗೆ ಏರಿತು.

ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪವು ಲಂಡನ್‌ನ ಥ್ರೆಡ್‌ನೀಡಲ್ ಸ್ಟ್ರೀಟ್ ನಲ್ಲಿದೆ. ಇಲ್ಲಿ, ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಖಜಾನೆಯಲ್ಲಿ 22 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ನಿಕ್ಷೇಪಗಳನ್ನು ಇಡಲಾಗಿದೆ. ಪ್ರಪಂಚದಾದ್ಯಂತದ ದೊಡ್ಡ ಉದ್ಯಮಿಗಳು ತಮ್ಮ ಚಿನ್ನವನ್ನು ಈ ಬ್ಯಾಂಕಿನಲ್ಲಿ ಇಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅಮೆರಿಕ ತನ್ನ ಚಿನ್ನವನ್ನು ಹಿಂತೆಗೆದುಕೊಳ್ಳುವುದರಿಂದ ಮುಂಬರುವ ದಿನಗಳಲ್ಲಿ ಅದರ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಅಮೆರಿಕ ತನ್ನ ಚಿನ್ನದ ನಿಕ್ಷೇಪವನ್ನು ಹೆಚ್ಚಿಸುತ್ತಿರುವ ರೀತಿಯನ್ನು ಗಮನಿಸಿದರೆ, ಡೊನಾಲ್ಡ್ ಟ್ರಂಪ್ ಮುಂಬರುವ ದಿನಗಳಲ್ಲಿ ಚಿನ್ನದ ಆಮದಿನ ಮೇಲೆ ಭಾರಿ ಸುಂಕ ವಿಧಿಸಬಹುದು ಎಂಬುದು ಸ್ಪಷ್ಟವಾಗಿದೆ. ಇದು ಸಂಭವಿಸಿದಲ್ಲಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗುವುದು ಸಹಜ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತದ ಚಿನ್ನದ ಆಮದು ಶೇ. 41 ರಷ್ಟು ಹೆಚ್ಚಾಗಿದೆ. ಇದರಿಂದಾಗಿ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ಲಕ್ಷ ರೂ.ಗೆ ಏರಿಕೆಯಾಗಲಿದೆ. ಒಂದು ಲಕ್ಷ ದಾಟಬಹುದು ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಅಂದಾಜಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *