ಮಂಡ್ಯ: ರಾಜಕೀಯ ಬಿಟ್ಟರು ನಾನು ಮಂಡ್ಯ ಬಿಡುವುದಿಲ್ಲ. ಹಲವರು ನಾನು ಮಂಡ್ಯ ಬಿಡುತ್ತೇನೆ ಎಂದು ಕಾಯುತ್ತಿದ್ದಾರೆ. ಆದ್ರೆ ನಾನು ಮಂಡ್ಯ ಬಿಡುವುದಿಲ್ಲ. ಮಂಡ್ಯ ಜನರ ಆಸೆಯಂತೆ ನಾನು ಇಲ್ಲಿಗೆ ಬಂದಿದ್ದೇನೆ. ಮಂಡ್ಯ ಬಿಟ್ಟು ಬೇರೆ ಕಡೆಗೆ ನಾನೇಕೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ ಬಿಡ್ತೇನೆ ಅಂತ ಪಾಪ ಒಂದಷ್ಟು ಜನ ಕನಸು ಕಾಣುತ್ತಿದ್ದಾರೆ. ಅವರ ಕನಸಿಗೆ ನಾನು ನೀರು ಚೆಲ್ಲಿದ ಹಾಗೆ. ಕ್ಷೇತ್ರ ಹಿಡುಕುತ್ತಿದ್ದೇನೆ ಎಂಬುದು ಯಾರ ಕನಸು ಎಂಬುದು ಗೊತ್ತಿಲ್ಲ. ರಾಜಕೀಯದಲ್ಲಿ ಏನೇನೋ ಆಗಬೇಕು ಎಂದು ರಾಜಕೀಯಕ್ಕೆ ಬಂದಿರೋದಲ್ಲ. ರಾಜಕೀಯ ಬೇಕಾದ್ರೆ ಇವತ್ತಲ್ಲ ನಾಳೆ ಬಿಡ್ತೀನಿ. ಆದರೆ ಮಂಡ್ಯ ಬಿಡಲ್ಲ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ.


