ಅಪ್ಪು ಹಾದಿ ಹಿಡಿದ ಹಲವು ಪತ್ರಕರ್ತರು..!

1 Min Read

 

ಬೆಂಗಳೂರು: ಅಪ್ಪು 11ನೇ ಪುಣ್ಯ ತಿಥಿ ಹಿನ್ನೆಲೆ ಇಂದು ಅರಮನೆ ಆವರಣದಲ್ಲಿ ಅಭಿಮಾನಿಗಳಿಗಾಗಿ ಪುಣ್ಯಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನ್ನಸಂತರ್ಪಣೆ, ರಕ್ತದಾನ, ನೇತ್ರದಾನ ಶಿಬಿರಗಳು ನಡೆಯುತ್ತಿವೆ.

ನಿನ್ನೆ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಪುಣ್ಯ ತಿಥಿ ಕಾರ್ಯ ನೆರವೇರಿದೆ. ಆದ್ರೆ ಇಂದು ಅಭಿಮಾನಿಗಳಿಗಾಗಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ವೇಳೆ ಪತ್ರಕರ್ತರು ಅಪ್ಪು ಮಾಡಿದ ಕೆಲಸಕ್ಕೆ ಸಾಥ್ ನೀಡಿದ್ದಾರೆ.

ಅಪ್ಪು ಬದುಕಿದ್ದಾಗ ಸಾವಿರಾರು ಜನರ ಬದುಕಿಗೆ ಆಸರೆಯಾಗಿದ್ದರು. ನಿರ್ಗತಿಕರಿಗೂ ಬದುಕು ರೂಪಿಸಿಕೊಟ್ಟಿದ್ದರು, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದರು. ಕಷ್ಟ ಎಂದು ಬಂದವರಿಗೆ ಬರಿಗೈನಲ್ಲಿ ಕಳುಹಿಸಿದವರೇ ಅಲ್ಲ. ನಿಧನದ ಬಳಿಕವೂ ನಾಲ್ವರಿಗೆ ಬೆಳಕಾದವರು. ನೇತ್ರದಾನ ಮಾಡಿ ಸಾರ್ಥಕತೆ ಮೆರೆದವರು. ಇದೀಗ ಪತ್ರಕರ್ತರು ಅದೇ ಹಾದಿ ಹಿಡಿದಿದ್ದಾರೆ.

ಪುಣ್ಯ ಸ್ಮರಣೆಯ ಸುದ್ದಿ ಮಾಡಲು ತೆರಳಿರುವ ಕೆಲವು ಪತ್ರಕರ್ತರು ಅರಮನೆ ಆವರಣದಲ್ಲಿ ಆಯೋಜಿಸಿರುವ ನೇತ್ರದಾನ ಶಿಬಿರದಲ್ಲಿ ತಮ್ಮ ನೇತ್ರದಾನ ಮಾಡಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಇನ್ನು ಕೆಲವು ಪತ್ರಕರ್ತರು ರಕ್ತದಾನವನ್ನು ಮಾಡಿದ್ದಾರೆ.

ಇನ್ನು ಎಲ್ಲಾ ಕೆಲಸಗಳನ್ನ ಶಿವಣ್ಣ ಹತ್ತಿರದಿಂದ ನೋಡುತ್ತಿದ್ದು, ಅಭಿಮಾನಿಗಳನ್ನ ಮಾತಾಡಿಸಿ, ಉಪಚರಿಸಿದ್ದಾರೆ. ಜೊತೆಗೆ ರಕ್ತದಾನ ಶಿಬಿರದಲ್ಲಿ ಶಿವಣ್ಣ ಕೂಡ ರಕ್ತದಾನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *