ಬಳ್ಳಾರಿ: ಜಿಲ್ಲೆಯಲ್ಲಿ ಚುನಾವಣಾ ಬಿಸಿ ಜೋರಾಗಿದೆ. ಬಿಜೆಪಿ ಮತ್ತು ಜನಾರ್ದನ ರೆಡ್ಡಿ ಪಕ್ಷದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಸಹೋದರರ ನಡುವೆಯೇ ಸ್ಪರ್ಧೆ ಏರ್ಪಟ್ಟಿದ್ದು, ಚರ್ಚೆಗಳು ಶುರುವಾಗಿದೆ. ಜನಾರ್ದನ ರೆಡ್ಡಿ ತಮ್ಮ ಹೆಂಡತಿ ಅರುಣ ಲಕ್ಷ್ಮೀಯನ್ನೇ ಬಳ್ಳಾರಿಯಿಂದ ಸ್ಪರ್ಧೆಗೆ ಇಳಿಸುವುದಾಗಿ ತಿಳಿಸಿದ್ದು, ಬಿಜೆಪಿಯಲ್ಲಿ ಕೊಂಚ ನಡುಕ ಶುರುವಾಗಿದೆ.
ಈ ಬಗ್ಗೆ ಮಾತನಾಡಿರುವ ಸೋಮಶೇಖರ ರೆಡ್ಡಿ, ನನ್ನ ನಡುವೆ ನ್ಯೂಟ್ರಲ್ ಎಂಬುದು ಇರುವುದಿಲ್ಲ. 2013ರಲ್ಲಿ ತಮ್ಮ ಕಷ್ಟ ಎಂದಾಗ ಓಡಾಡಿದ್ದೆ. ಸಹೋದರನಿಗಾಗಿ ನಾನು ಕೂಡ ಆರು ತಿಂಗಳು ಜೈಲಿನಲ್ಲಿದ್ದೆ. ಆಗ ಎಲ್ಲರೂ ನನ್ನ ಬಗ್ಗೆ ಕೊಂಡಾಡಿದ್ದರು. ನನ್ನ ಸೊಸೆಯೇ ಒಂದು ಸಲ ಹೇಳಿದ್ರು ನಿನ್ನ ಋಣ ತೀರಿಸುವುದಕ್ಕೆ ಆಗಲ್ಲ ಅಂತ. ಮಗಳು ಹೇಳಿದ್ದಳು ದೊಡ್ಡಪ್ಪ ನಿಮ್ಮ ಋಣ ದೊಡ್ಡದು ಅಂತ. ನಿಲ್ಲಲಿ ಪರವಾಗಲಿ. ದೇವರು ಇದ್ದಾನೆ. ನಮ್ಮ ಮನೆ ದೇವರು ಕಾಪಾಡುತ್ತಾನೆ.
ಜನಾರ್ದನ ರೆಡ್ಡಿಗೆ ನನ್ನಂತೆ ತ್ಯಾಗದ ಮನೋಭಾವ ಇಲ್ಲ. ಸಹೋದರನಿಗಾಗಿ ನಾನು ಆರು ತಿಂಗಳು ಜೈಲಿನಲ್ಲಿದ್ದೆ. ಇದು ಸರಿ ಅನ್ನಿಸಲ್ಲ. ಒಬ್ಬ ಸ್ವಾಮಿಯೇ ಹೇಳಿದ್ದಾರೆ. ಏನ್ ರೀ ಇವರೆಲ್ಲಾ ಈ ತರ ಮಾಡ್ತಾ ಇದ್ದಾರೆ. ಪಕ್ಷ ಮಾಡಿದ್ದೆ ತಪ್ಪು ಈಗ ನಿಮ್ಮ ಎದುರಿಗೆ ನಿಲ್ಲಿಸುತ್ತಾ ಇದ್ದಾರಲ್ಲ ಎಂದಿದ್ದಾರೆ. ಸಂಪಾದನೆ ಮಾಡಿಕೊಂಡಿದ್ದು ಅವರು ಇಲ್ಲದೆ ಇರುವವರ ಮೇಲೆ ಹೀಗೆ ಮಡ್ತಾ ಇದ್ದಾರೆ ಎಂದಿದ್ದಾರೆ