ಸಾವಯವ ಕೃಷಿ ಮೂಲಕ ಭೂಮಿಯ ಫಲವತ್ತತೆಯನ್ನು ಉಳಿಸಬೇಕಿದೆ : ಜಗದೀಶ್

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 14 : ಸರ್ಕಾರ ಕೈಗಾರಿಕೆಯನ್ನು ಪ್ರೋತ್ಸಾಹ ಮಾಡಬೇಕಾದರೆ ಅದನ್ನು ನಡೆಸುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಸರಿಯಾದ ರೀತಿಯಲ್ಲಿ ಕೌಶಲ್ಯ ಹಾಗೂ ಸರಿಯಾದ ರೀತಿಯಲ್ಲಿ ಮಾರುಕಟ್ಟೆಯನ್ನು ನೀಡಿದಾಗ ಮಾತ್ರ ಉತ್ತಮವಾದ ಕೈಗಾರಿಕ್ಯೋದ್ಯಮಿಯಾಗಲು ಸಾಧ್ಯವಿದೆ ಎಂದು ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಕಳೆದ 12 ರಿಂದ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಮೂರನೇ ದಿನವಾದ ಶುಕ್ರವಾರ ನಡೆದ ಯುವ ಸಮಾವೇಶದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರದ ಮಾರ್ಗಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಇಂದಿನ ಯುವ ಜನತೆಯಲ್ಲಿ ಸರಿಯಾದ ಕೌಶಲ್ಯ ಇಲ್ಲ ಏನೇ ಕೇಳಿದರೂ ಸಹಾ ಗೊತ್ತಿಲ್ಲ ಎಂಬ ಉತ್ತರ ಬರುತ್ತದೆ. ಆದರೆ ಮೊಬೈಲ್ ಬಳಕೆ ಮಾಡುವುದು ಮಾತ್ರ ಎಲ್ಲರಿಗೂ ಸಹಾ ಬರುತ್ತದೆ, ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಇದೆ. ಅದರೆ ಕೃಷಿಗೆ ಅಗತ್ಯವಾಗಿ ಬೇಕಾದ ಮಾಹಿತಿಯನ್ನು ಕೃಷಿ ವಿಜ್ಞಾನಿಗಳು ಪರಿಣಿತರು ನೀಡುತ್ತಿಲ್ಲ. ಇದರ ಬದಲು ಉತ್ತಮವಾದ ರೈತ ಎಲ್ಲವನ್ನು ಸಹಾ ಹೇಳುತ್ತಾನೆ ಇದು ನಮ್ಮ ದೌರ್ಭಾಗ್ಯವಾಗಿದೆ ಎಂದರು.

ನಮ್ಮಲ್ಲಿನ ಶೇ.90 ರಷ್ಟು ವಿದ್ಯಾರ್ಥಿಗಳು ಪುಸ್ತಕದ ಬದನೆಕಾಯಿ ಆಗಿದ್ದಾರೆ. ಆದರೆ ಅವರಿಗೆ ಪ್ರಪಂಚದ ಜ್ಞಾನ ಇಲ್ಲವಾಗಿದೆ. ನಮ್ಮಲ್ಲಿ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಆದರೆ ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಇಲ್ಲವಾಗಿದೆ, ನಮ್ಮಲ್ಲಿ ಕಾಲಿಗೆ ಹಾಕಿಕೊಳ್ಳುವ ಚಪ್ಪಲಿ ಎಸಿ ರೂಂನಲ್ಲಿ ಇವೆ ಅದರೆ ನಾವು ಸೇವಿಸುವ ಆಹಾರ ಬೀದಿಯಲ್ಲಿ ಮಾರಾಟವಾಗುತ್ತದೆ. ಕೃಷಿ ಉತ್ತಮ, ವ್ಯಾಪಾರ ಮಧ್ಯಮವಾದರೆ ನೌಕರಿ ಕನಿಷ್ಠವಾಗಿದೆ. ಒಂದು ಕಾಲದಲ್ಲಿ ಕೃಷಿ ಹಸಿರು ಕ್ರಾಂತಿಯಾಗಿತ್ತು ಆದರೆ ಈಗ ಅದು ವಾಂತಿಯಾಗುತ್ತಿದೆ, ಈಗ ನಾವುಗಳು ವಿಷವಾದ ಆಹಾರವನ್ನು ಸೇವನೆಯನ್ನು ಮಾಡಲಾಗುತ್ತಿದೆ, ಇದರಿಂದ ನಮ್ಮ ದೇಹ ರೋಗಗಳ ಗೂಡಾಗಿದೆ, ಭೂಮಿಯೂ ಸಹಾ ರಸಾಯನಿಕದಿಂದ ಕೂಡಿದ್ದು ಬೇರೆ ಬೆಳೆ ಬಾರದ ರೀತಿಯಲ್ಲಿ ಆಗುತ್ತಿದೆ ಎಂದು ವಿಷಾಧಿಸಿದರು.

ನಮ್ಮ ರೈತರು ಒಂದೇ ರೀತಿಯ ಬೆಳೆಯನ್ನು ಬೆಳೆಯದೆ ಬಹು ಬೆಳೆಯನ್ನು ಬೆಳೆಯುವುದರ ಮೂಲಕ ಮಾರುಕಟ್ಟೆಯನ್ನು ಬೆಳಸಬೇಕಿದೆ ಒಂದೇ ರೀತಿಯ ಬೆಳೆಯನ್ನು ಬೆಳೆಯುವುದರಿಂದ ಮಾರುಕಟ್ಟೆ ಬಿದ್ಡು ಹೋಗುತ್ತದೆ ಇದರಿಂದ ರೈತನಿಗೆ ನಷ್ಠವಾಗುತ್ತದೆ. ದೇಶದಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ ಅವುಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕಿದೆ, ಅವುಗಳಿಗೆ ಮಾರುಕಟ್ಟೆಯನ್ನು ನೀಡಬೇಕಿದೆ. ಆಗ ಮಾತ್ರ ಅವುಗಳು ಬೆಳೆಯಲು ಸಾಧ್ಯವಿದೆ ದೇಶದಲ್ಲಿ ಸಣ್ಣ-ಸಣ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಪ್ರಾರಂಭವಾಗುವುದರ ಮೂಲಕ ದೇಶದ ಆರ್ಥಿಕ ಪ್ರಗತಿಯಲ್ಲಿ ನಾವು ಸಹಾ ಭಾಗಿದಾರರಾಗಬೇಕಿದೆ ಸಾವಯವ ಕೃಷಿಯನ್ನು ಮಾಡುವುದರ ಮೂಲಕ ಭೂಮಿಯ ಫಲವತ್ತತೆಯನ್ನು ಉಳಿಸಬೇಕಿದೆ ಎಂದು ಜಗದೀಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಯೋಜಕರು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಸಹ ಸಂಘಟಿಕರಾದ ಅನಿತ್ ಕುಮಾರ್, ಕೆ.ಟಿ.ಕುಮಾರ್ ಸ್ವಾಮಿ, ಡಿವೈಎಸ್‍ಪಿ ದಿನಕರ್, ಚಂದ್ರಶೇಖರ್ ಮೋಹನ್ ಕುಮಾರ್, ಪ್ರದೀಪ್, ಸಹ ಸಂಚಾಲಕರಾದ ಹನುಮಂತೇಗೌಡ, ಸಂತೋಷ ಕೋಟಿ ಭಾಗವಹಿಸಿದ್ದರು.

Share This Article