ಹಾವು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ. ತೀರಾ ಭಯಗೊಂಡವರು ಅದನ್ನು ಸಾಯಿಸಿಯೇ ಬಿಡುತ್ತಾರೆ. ಇನ್ನು ಕೆಲವರು ಅದನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ ಹಾವುಗಳೇ ಮನುಷ್ಯರನ್ನು ರಕ್ಷಣೆ ಮಾಡುವುದನ್ನು ಕೇಳಿದ್ದೀರಾ. ಸಾಧ್ಯವೇ ಇಲ್ಲ ಅಲ್ವಾ. ಆದರೆ ಕೇರಳದಲ್ಲು ಹಾವುಗಳಿಂದ ಪೊಲೀಸರಿಗೆ ರಕ್ಷಣೆ ಸಿಕ್ಕಿದೆ.
ಕೇರಳದ ಇಡುಕಿಯಲ್ಲಿರುವ ಕುಂಬಮೆಟ್ಟು ಪೊಲೀಸ್ ಠಾಣೆ ಬಳಿ ಕೋತಿಗಳ ಕಾಟ ಹೆಚ್ಚಾಗಿತ್ತು. ಏನೇ ಮಾಡಿದರೂ ಕೋತಿಗಳ ಉಪಟಳವನ್ನು ನಿಲ್ಲಿಸಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಹಾವುಗಳನ್ನು ಪೊಲೀಸ್ ಠಾಣೆಯ ಗೋಡೆ, ಮರ ಗಿಡ ಮೇಲೆಲ್ಲಾ ಬಿಟ್ಟಿರುವ ಪರಿಣಾಮ ಕೋತಿಗಳು ಬರುತ್ತಿಲ್ಲ. ಆದರೆ ನಿಜವಾದ ಹಾವುಗಳಲ್ಲ ಬದಲಿಗೆ, ಪ್ಲಾಸ್ಟಿಕ್ ಹಾವು.
ಈ ಐಡಿಯಾ ಕೊಟ್ಟಿದ್ದು, ಅದೇ ಊರಿನ ಒಬ್ಬ ರೈತ. ಈ ಬಗ್ಗೆ ಮಾತನಾಡಿದ ಆ ರೈತ, ನಮ್ಮ ಜಮೀನಿನಲ್ಲೂ ಇದೇ ರೀತಿಯ ಕೋತಿಗಳ ಹಾವಳಿ ಇತ್ತು. ನಾನು ಹಾವನ್ನು ತಂದು ಹಾಕಿದ್ದೆ. ಆಗ ಅವುಗಳ ಕಾಟ ಕಡಿಮೆಯಾಗಿದೆ. ಅದಕ್ಕೆ ಆ ಐಡಿಯಾ ಹೇಳಿಕೊಟ್ಟೆ ಎಂದು ಹೇಳಿದ್ದಾರೆ.
ಇನ್ಸ್ಪೆಕ್ಟರ್ ಪಿ ಕೆ ಲಾಲಾಬಾಯಿ ಮಾತನಾಡಿ, ಹಲವು ವರ್ಷಗಲಿಂದಲೂ ಕೋತಿಗಳ ಕಾಟ ಇತ್ತು. ಆದ್ರೆ ರಬ್ಬರ್ ಹಾವುಗಳನ್ನು ಬಳಸಿದ ಮೇಲೆ ಈಗ ಕೋತಿಗಳ ಕಾಟದಿಂದ ಮುಕ್ತಿ ಪಡೆದಿದ್ದೇದೆ. ಇನ್ನಷ್ಟು ರಬ್ಬರ್ ಹಾವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಹೇಳಿದ್ದಾರೆ.