ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷರಾಗಿ ಶ್ರೀಮತಿ ಶ್ರೀದೇವಿ ಅವಿರೋಧ ಆಯ್ಕೆ

1 Min Read

 

ವರದಿ ಮತ್ತು ಫೋಟೋ
                              ಸುರೇಶ್ ಪಟ್ಟಣ್,                                         ಮೊ: 87220 22817

ಚಿತ್ರದುರ್ಗ,(ಡಿ.14) : ಚಿತ್ರದುರ್ಗ ನಗರಸಭೆಯ ಉಪಾಧ್ಯಕ್ಷರಾಗಿ 33ನೇ ವಾರ್ಡಿನ ಸದಸ್ಯೆ ಶ್ರೀಮತಿ ಶ್ರೀದೇವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಮಂಜುಳಾರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಗರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಶ್ರೀಮತಿ ಶ್ರೀದೇವಿಯವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿದ್ದ ತಹಶೀಲ್ದಾರ್ ಸತ್ಯನಾರಾಯಣರವರು ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

35 ಸದಸ್ಯ ಬಲದ ನಗರಸಭೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ 27 ಸದಸ್ಯರು ಹಾಜರಾಗಿದ್ದರು. 8 ಸದಸ್ಯರು ಸೇರಿದಂತೆ ಉಳಿದಂತೆ ಸದಸ್ಯರಾಗಿರುವ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಗೈರು ಹಾಜರಾಗಿದ್ದರು. ಇಂದು ಬೆಳಿಗ್ಗೆ 10 ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಚಿತ್ರದುರ್ಗ ನಗರಸಭೆಯು 17 ಬಿಜೆಪಿ, 05 ಕಾಂಗ್ರೆಸ್ 06 ಜೆಡಿಎಸ್. ಹಾಗೂ 07 ಪಕ್ಷೇತರರು ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆವಿಗೂ ಮೂರು ಜನ ಉಪಾಧ್ಯಕ್ಷರಾಗಿ ಅಧಿಕಾರವನ್ನು ನಡೆಸಿದ್ದಾರೆ ಶ್ರೀದೇವಿಯವರು ನಾಲ್ಕನೇಯವರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಸತ್ಯನಾರಾಯಣ ಎಲ್ಲರು ಒಗ್ಗಟಾಗಿ ಸೇರಿಕೊಂಡು ಚಿತ್ರದುರ್ಗದ ಅಭೀವೃದ್ದಿಯತ್ತ ಕೊಂಡ್ಯೂಯುವತ್ತ ಗಮನ ನೀಡಿ ಎಂದು ಸದಸ್ಯರಿಗೆ ಕರೆ ನೀಡಿದರು.

ನೂತನ ಉಪಾಧ್ಯಕ್ಷರಾದ ಶ್ರೀದೇವಿಯವರು ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ನಗರದ ಶುಚಿತ್ವ, ಕುಡಿಯುವ ನೀರು, ಬೀದಿ ದೀಪಂತಹ ಸಮಸ್ಯೆಗಳ ಬಗ್ಗೆ ಗಮನ ನೀಡಲಾಗುವುದು. ನಗರವನ್ನು ಅಭೀವೃದ್ದಿಯತ್ತ ಕೊಂಡ್ಯೂಯಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು, ಚುನಾವಣಾಧಿಕಾರಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *