ಇನ್ನರ್ ವ್ಹೀಲ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷರಾಗಿ ಶ್ರೀಮತಿ ಮೋಕ್ಷರುದ್ರಸ್ವಾಮಿ ಕಾರ್ಯದರ್ಶಿಯಾಗಿ ರೇಷ್ಮಖಾನಂ ಅಧಿಕಾರ ಸ್ವೀಕಾರ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜು.09) : ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಇದರ 2023-24 ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಮತಿ ಮೋಕ್ಷ ರುದ್ರಸ್ವಾಮಿ ಹಾಗೂ ಕಾರ್ಯದರ್ಶಿಯಾಗಿ ರೇಷ್ಮಖಾನಂ ಇವರುಗಳ ಪದಗ್ರಹಣ ಸ್ವೀಕಾರ ಸಮಾರಂಭ ದವಳಗಿರಿ ಬಡಾವಣೆಯಲ್ಲಿರುವ ಗಾಯತ್ರಿ ಶಿವರಾಂ ಇನ್ನರ್‍ವೀಲ್ ಭವನದಲ್ಲಿ ಶುಕ್ರವಾರ ನಡೆಯಿತು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಶ್ರೀಮತಿ ಮೋಕ್ಷ ರುದ್ರಸ್ವಾಮಿ ಒಂದು ವರ್ಷದ ನನ್ನ ಅಧಿಕಾರವಧಿಯಲ್ಲಿ ಬಡವರು, ನಿರ್ಗತಿಕರು, ಅನಾಥರು, ವೃದ್ದರು, ಅಂಗವಿಕಲರಿಗೆ ನೆರವಾಗುವ ರೀತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಇದಕ್ಕೆ ಇನ್ನರ್‍ವೀಲ್ ಕ್ಲಬ್‍ನ ಎಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು.

ಶಿಕ್ಷಣದಿಂದ ವಂಚಿತರಾದ ಅನಾಥ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲಾಗುವುದು. ವಿಶೇಷವಾಗಿ ಮಹಿಳೆಯರು ಸ್ವಾವಲಂಭಿಯಾಗಿ ಬದುಕಬೇಕಾಗಿರುವುದರಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸೋಣ. ಒಂದು ವರ್ಷದ ಅವಧಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಯೋಜನೆಗಳನ್ನು ಹಾಕಿಕೊಳ್ಳುತ್ತೇನೆಂದು ಹೇಳಿದರು.

ಪಾಸ್ಟ್ ನ್ಯಾಷನಲ್ ಎಡಿಟರ್ ವೀಣ ಸ್ವಾಮಿ ಪದಗ್ರಹಣ ಸಮಾರಂಭ ನೆರವೇರಿಸಿದರು. ಪಾಸ್ಟ್ ಡಿಸ್ಟ್ರಿಕ್ಟ್ ಚೇರ್ಮನ್ ಜ್ಯೋತಿ ಲಕ್ಷ್ಮಣ್ ಬಿಲೆಟಿನ್ ಬಿಡುಗಡೆಗೊಳಿಸಿದರು. ಹಿಂದಿನ ಅಧ್ಯಕ್ಷೆ ಮಾಲಾ ನಾಗರಾಜ್, ಕಾರ್ಯದರ್ಶಿ ವಿಜಯ ಕಿರಣ್ ವೇದಿಕೆಯಲ್ಲಿದ್ದರು.

2023-24 ನೇ ಸಾಲಿನ ಉಪಾಧ್ಯಕ್ಷೆ ಜ್ಯೋತಿ ದೇವೇಂದ್ರಪ್ಪ, ಆಫೀಸ್ ಬೇರರ್ಸ್‍ಗಳಾಗಿ ಐ.ಪಿ.ಪಿ.ಮಾಲಾ ನಾಗರಾಜ್, ಖಜಾಂಚಿ ದೀಪ ದತ್ತ, ಐ.ಎಸ್.ಓ. ಶೈಲ ವಿಶ್ವನಾಥ್, ಎಡಿಟರ್ ನಂದಿನಿ ಟಿ.ಎಸ್. ಜಂಟಿ ಕಾರ್ಯದರ್ಶಿ ವೀಣ ಜಯರಾಂ, ನಿರ್ದೇಶಕರುಗಳಾಗಿ ಸುಜಾತ ಪ್ರಕಾಶ್, ನಾಗರತ್ನ ವಿಶ್ವನಾಥ್, ಶೈಲಜಾರೆಡ್ಡಿ, ರೂಪ ವಿಶ್ವನಾಥ್, ವಿಜಯ ಕಿರಣ್, ಶಾಲಿನಿ ಪ್ರದೀಪ್, ಅಮೃತ ಸಂತೋಷ್, ರುದ್ರಾಣಿ ಗಂಗಾಧರ್, ಶಾಂತರೆಡ್ಡಿ, ಪೂಜ ದೀಪಕ್, ನಮ್ರತ, ಸುಮ ರಾಜಶೇಖರ್, ರಮ್ಯ ರಾಜ್‍ಕುಮಾರ್, ಪುಷ್ಪ ದಯಾನಂದ್, ಗೌರಮ್ಮ ಇವರುಗಳು ಪದಗ್ರಹಣ ಸ್ವೀಕಾರ ಸಮಾರಂಭದಲ್ಲಿದ್ದರು.

ಇದೇ ಸಂದರ್ಭದಲ್ಲಿ ಬಡ ಮಹಿಳೆಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *