ಭಾರತ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ರದ್ದಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಕಾರಣ ಪಲಾಶ್ ಮಚ್ಚಲ್ ಗಿಂದ ಮತ್ತೊಂದು ಸಂಬಂಧ ಎಂಬ ವಿಚಾರವೂ ಬಹಳ ಚರ್ಚೆಯಾಗಿತ್ತು. ಆದರೆ ಸ್ಮೃತಿ ಮಂದಾನ ಅದನ್ನ ಅಧಿಕೃತವಾಗಿ ಹೇಳಲಿಲ್ಲ. ಇದೀಗ ನಟ, ನಿರ್ಮಾಪಕ ವಿಜ್ಞಾನ್ ಮಾನೆ, ಮಚ್ಚಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗಾಯಕ, ಸಂಗೀತ ನಿರ್ದೇಶಕ ಪಲಾಶ್, ಬಿಡುಗಡೆಯಾಗದ ಸಿನಿಮಾವೊಂದಕ್ಕೆ ಸಂಬಂಧಿಸಿದಂತೆ 40 ಲಕ್ಷ ರೂಪಾಯಿಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಾನೆ ದೂರು ದಾಖಲಿಸಿದ್ದಾರೆ. ತಾನೂ ಸ್ಮೃತಿ ಮಂದನ ಅವರ ಬಾಲ್ಯದ ಸ್ನೇಹಿತ. ಮಂದಾನ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾದೆ ಎಂದು ಮಾನೆ ಹೇಳಿಕೊಂಡಿದ್ದಾರೆ. ಪಲಾಶ್ ಮುಚ್ಚಲ್ 2025 ನವೆಂಬರ್ ನಲ್ಲಿ ನಡೆದ ತಮ್ಮ ಮದುವೆ ಸಮಾರಂಭದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಬೆಡ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ.
ನಾನು ಅವರ ಮದುವೆಯಲ್ಲಿದ್ದೆ. ಅದು ನವೆಂಬರ್ 23,2025 ಆಗ ಆತ ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ. ಆ ದೃಶ್ಯ ಭಯಾನಕವಾಗಿಯೇ ಇತ್ತು. ಭಾರತೀಯ ಮಹಿಳಾ ಕ್ರಿಕೆಟಿಗರು ಅವನನ್ನು ಹೊಡೆದಿದ್ದರು. ಅವರ ಇಡೀ ಕುಟುಂಬವೇ ಕಳ್ಳರು. ಅವನು ಮದುವೆಯಾಗಿ ಸಾಂಗ್ಲಿಯಲ್ಲಿ ನೆಲೆಸುತ್ತಾನೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯ್ತು ಎಂದಿದ್ದಾರೆ. ಪಲಾಶ್ ಮತ್ತು ಅವರ ಕುಟುಂಬವನ್ನು ಒಳಗೊಂಡ ಚಿತ್ರದಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿದ್ದೇನೆ ಎಂದು ಮಾನೆ ಹೇಳಿದ್ದಾರೆ.






