Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅರಿಶಿನ.. ಬಳೆ.. ಮೆಹಂದಿ ಶಾಸ್ತ್ರ ಮುಗಿಸಿದ್ದ ಸ್ಮೃತಿ ಮಂದಾನ ಮದುವೆ ಮುಂದೂಡಿಕೆ..!

---Advertisement---

ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ಮುಂದುಯಡಿಕೆಯಾಗಿದೆ. ನಿನ್ನೆಯೆಲ್ಲ ಮದುವೆಯ ಸಂಭ್ರಮದಲ್ಲಿ ಮಿಂದೆದ್ದಿದ್ದರು. ಅರಿಶಿನ ಶಾಸ್ತ್ರ, ಮೆಹಂದಿ ಕಾರ್ಯಕ್ರಮ, ಸಂಗೀತ್ ಎಲ್ಲವು ಬಹಳ ಅದ್ದೂರಿಯಾಗಿ ನಡೆದಿತ್ತು. ಆದರೆ‌ ಇಂದು ನಡೆಯಬೇಕಿದ್ದ ಮದುವೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಸ್ಮೃತಿ ಮಂದಾನ ಅವರ ತಂದೆ ದಿಢೀರನೆ ಅನಾರೋಗ್ಯಕ್ಕೀಡಾಗಿದ್ದರು. ಆದ ಕಾರಣ ಮದುವೆಯನ್ನ ಮುಂದೂಡಲಾಗಿದೆ. ಅವರ ತಂದೆಗೆ ಚಿಕುತ್ಸೆ ನೀಡುತ್ತಿದ್ದು, ಮದುವೆ ಮುಂದುಯಡಿಕೆಯಾಗಿರುವ ಬಗ್ಗೆ ಕುಟುಂಬದ ಮೂಲಗಳು ಸ್ಪಷ್ಟ ಪಡಿಸಿವೆ. ಬೆಳಗ್ಗೆ ತಿಂಡಿ ತಿನ್ನುವಾಗಲೇ ಸ್ಮೃತಿ ಮಂದಾನ ಅವರ ತಂದೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅವರ ತಂದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು ಕೂಡ ತೀವ್ರ ನಿಗಾ ಘಟಕದಲ್ಲಿ ಇಟ್ಟು ನೋಡಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ನೀಡುತ್ತಿರುವ ಕಾರಣ ಅವರು ಕೂಡ ಸ್ಪಂದಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಸ್ಮೃತಿ ಮಂದಾನ ಅವರ ತಂದೆಗೆ ಲಘು ಹೃದಯಾಘಾತವಾಗಿದೆ ಎನ್ನಲಾಗಿದೆ. ತಂದೆಯವರು ಆಸ್ಪತ್ರೆಯಲ್ಲಿರುವಾಗ ಮದುವೆಯಾಗುವುದಕ್ಕೆ ಅಷ್ಟು ಪ್ರೀತಿಯ ಮಗಳ ಮನಸ್ಸು ಒಪ್ಪುವುದಕ್ಕೆ ಸಾಧ್ಯವೂ ಇರಲ್ಲ. ಮೊದಲು ತಂದೆಯ ಆರೋಗ್ಯ ಸರಿಯಾದ ಮೇಲೆ, ತಂದೆಯ ಸಮ್ಮುಖದಲ್ಲಿಯೇ ಮತ್ತೆ ಮದುವೆ ಆಗಲಿದ್ದಾರೆ. ಆದರೆ ಕಳೆದ ಎರಡ್ಮೂರು ದಿನದಿಂದ ಮಹಾರಾಷ್ಟ್ರದ ಸಾಂಗ್ಲಿಯಾದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.‌ ಪಲಾಶ್ ಮುಚ್ಚಲ್ ಹಾಗೂ ಮಂದಾನ ಮದುವೆ ಯಾವಾಗ ಅನ್ನೋದು ಇನ್ನು ಗೊತ್ತಿಲ್ಲ. ಆದರೆ ಅವರ ತಂದೆ ಶ್ರೀನಿವಾಸ್ ಚೇತರಿಸಿಕೊಳ್ಳುವ ತನಕ ಮದುವೆಯನ್ನು ಇಬ್ಬರು ಮುಮನದೂಡಿದ್ದಾರೆ ಎನ್ನಲಾಗಿದೆ. ಕಳೆದ ಎರಡ್ಮೂರು ದಿನದಿಂದ ಮದುವೆಯ ಸಂಭ್ರಮ ಕಂಡು ಫ್ಯಾನ್ಸ್ ಕೂಡ ಶುಭ ಹಾರೈಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...