ಬೆಂಗಳೂರು: ಕನ್ನಡ ಕಿರುತೆರೆಯಲ್ಲಿಯೇ ಮಂಡ್ಯದ ರವಿ ಅಂತ ಖ್ಯಾತಿ ಪಡೆದವರು. ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಕನ್ನಡದ ಹೆಸರಾಂತ ನಿರ್ದೇಶಕ ಟಿ ಎನ್ ಸೀತರಾಮ್ ಅವರ ಇತ್ತಿಚಿನ ಧಾರವಾಹಿ ಮಗಳು ಜಾನಕಿ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಎಲ್ಲರ ಗಮನ ಸೆಳೆದಿದ್ದರು. ಅದಾದ ಬಳಿಕ ಹಲವು ಧಾರಾವಾಹಿಯಲ್ಲಿ ಪಾತ್ರಗಳನ್ನು ಮಾಡಿದ್ದರು.
ನಟ ಮಂಡ್ಯ ರವಿ ಅನಾರೋಗ್ಯದಿಂದ ಬಳಲುತ್ತಿದ್ದರು. ಜಾಂಡೀಸ್ ಕಾಡುತ್ತಿದ್ದು, ಜೊತೆಗೆ ಕಿಡ್ನಿ ಸಮಸ್ಯೆಯೂ ಎದುರಾಗಿತ್ತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿಯ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಡ್ಯಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿದ್ದು, ಅಂತ್ಯ ಸಂಸ್ಕಾರವನ್ನು ಹುಟ್ಟೂರಿನಲ್ಲಿಯೇ ನಡೆಸಲಾಗುತ್ತದೆ.
ಮಂಡ್ಯ ರವಿಗೆ ಇನ್ನು 42 ವರ್ಷ. ಓದುತ್ತಿರುವಾಗಲೇ ನಟನೆ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದವರು. ಎಂಎ ಇಂಗ್ಲೀಷ್ ಹಾಗೂ ಎಲ್ಎಲ್ಬಿ ಮಾಡಿ ನಟನೆಯತ್ತ ಮುಖ ಮಾಡಿದರು. ನಾಟಕಗಳಲ್ಲಿಯೇ ಹೆಚ್ಚು ಪಾಲ್ಗೊಳ್ಳುತ್ತಿದ್ದ ನಟ ರವಿ, ಬಳಿಕ ಧಾರಾವಾಹಿಯ ಮೂಲಕ ಎಂಟ್ರಿಯಾಗಿದ್ದರು. ನಂತರ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದರು. ರವಿ ಅವರ ಅಕಾಲಿಕ ನಿಧನಕ್ಕೆ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.