ಪಂಚಭೂತಗಳಲ್ಲಿ ಲೀನರಾದ ಎಸ್.ಎಂ.ಕೃಷ್ಣ: ಮೊಮ್ಮಗ ಅಮರ್ಥ್ಯರಿಂದ ಚಿತೆಗೆ ಅಗ್ನಿ ಸ್ಪರ್ಶ

suddionenews
1 Min Read

ಮಂಡ್ಯ: ಮಾಜಿ ಮುಖ್ಯಮಂತ್ರಿ, ನಾಡು ಕಂಡ ಧೀಮಂತ ನಾಯಕ ಎಸ್.ಎಂ.ಕೃಷ್ಣ ಇನ್ನು ನೆನಪು ಮಾತ್ರ. ವಯೋಸಹಜ ಅನಾರೋಗ್ಯದಿಂದ ನಿನ್ನೆ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ನಿಧನರಾದರು. ಇಂದು ಹುಟ್ಊರು ಸೋಮನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆದಿದೆ. ಅಂತ್ಯಸಂಸ್ಕಾರದಲ್ಲಿ ರಾಜಕೀಯ ನಾಯಕರೆಲ್ಲ ಭಾಗಿಯಾಗಿದ್ದರು. ಮೂರು ಪಕ್ಷಗಳ ನಾಯಕರು ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.

ಅಂತ್ಯಸಂಸ್ಜಾರಕ್ಕೂ ಮುನ್ನ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯ್ತು. ಮೂರು ಸುತ್ತು ಕುಶಾಲತೋಪು ಸಿಡಿಸಿ ನಮನ ಸಲ್ಲಿಸಿದರು. ಕೃಷ್ಣ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಮೊಮ್ಮಗ ಅಮರ್ಥ್ಯ ಅವರೇ ಮುಂದೆ ನಿಂತು ಮಾಡಿದರು. ಸಂಜೆ ವೇಳೆಗೆ ಪಂಚಭೂತಗಳಲ್ಲಿ ಲೀನರಾದರು.

ಎಸ್.ಎಂ.ಕೃಷ್ಣ ನಿಧನರಾದಾಗಿನಿಂದ ಡಿಸಿಎಂ ಡಿಕೆ ಶಿವಕುಮಾರ್ ಪಾರ್ಥಿವ ಶರೀರದ ಜೊತೆಗೆ ಇದ್ದರು. ಮೆರವಣಿಗೆಯಲ್ಲೂ ಪಾರ್ಥೀವ ಶರೀರದ ಮುಂದೆಯೇ ಕುಳಿತಿದ್ದರು. ಕೃಷ್ಣ ಅವರನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು. ಕಡೆಗೆ ಕೃಷ್ಣ ಅವರ ಅಂತಿಮ ಯಾತ್ರೆಗೆ ಡಿಕೆ ಬ್ರದರ್ಸ್ ಹಾಗೂ ಮಗ ಹೆಗಲು ಕೊಟ್ಟರು. ಚಿತಾ ಮಂಟಪದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಅಂತ್ಯಸಂಸ್ಕಾರ ಮಾಡಲಾಯ್ತು.

ಪುಷ್ಪಲಂಕರಾಗಳಿಂದ ಮಾಡಿದ್ದ ಮಂಟಪದಲ್ಲಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸೋಮನಹಳ್ಳಿಗೆ ತರಲಾಗಿತ್ತು. ಸೋಮನಹಳ್ಳಿಯಲ್ಲೂ ಸಾವಿರಾರು ಜನ ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರಕ್ಕೆ ಕೊನೆಯ ಪೂಜೆ ಸಲ್ಲಿಸುವಾಗ ಅವರ ಪತ್ನಿ ಪ್ರೇಮಾ ಅವರು ಬಿಕ್ಕಿ ಬಿಕ್ಕಿ ಅತ್ತರು. ಮಗಳು ಮಾಳವಿಕ ಮೌನವಾಗಿದ್ದರು. ಭಾರವಾದ ಮನಸ್ಸಿನಿಂದ ಅಮರ್ಥ್ಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *