ಚಿತ್ರದುರ್ಗ | ಎಸ್.ಎಲ್.ವಿ. ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

suddionenews
1 Min Read

ಚಿತ್ರದುರ್ಗ :  ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ (ರಿ) ಅಡಿಯಲ್ಲಿ ನಡೆಯುತ್ತಿರುವ ಎಸ್.ಎಲ್.ವಿ.ಪದವಿಪೂರ್ವ ಕಾಲೇಜು, ದ್ವಿತೀಯ ಪಿ.ಯು.ಸಿ 2022ರ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.

ಕು.ಬಸವರಾಜು.ಕೆ. 600 ಅಂಕಗಳಿಗೆ 590 ಅಂಕಗಳನ್ನು ಗಳಿಸಿ, ಪಿ.ಯು.ಸಿ. ವಿಜ್ಞಾನ ಸಂಯೋಜನೆಯಲ್ಲಿ ಚಿತ್ರದುರ್ಗ ನಗರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಕು.ಮೇಘನಾ.ಎ.ಕೆ. (582) ಹಾಗೂ ಕು.ಹರಿಕೃಷ್ಣ (569) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕು.ವೈಷ್ಣವಿ.ಎಂ.ಎಸ್. (570), ಕು.ಚಿನ್ಮಯಿ.ಎಂ.ಎಸ್. (94.33) ಹಾಗೂ ಕು.ಲಾವಣ್ಯ.ವಿ. (559) ಅಂಕಗಳನ್ನು ಗಳಿಸಿ ಕ್ರಮವಾಗಿ ಪ್ರಥಮ. ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.

ಸಾಧಕರನ್ನು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಶ್ರೀ ಎಂ.ಚಂದ್ರಪ್ಪನವರು, ಆಡಳಿತಾಧಿಕಾರಿಗಳಾದ ಶ್ರೀಮತಿ ಚಂದ್ರಕಲಾ ಚಂದ್ರಪ್ಪನವರು, ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಎಂ.ಸಿ.ರಘುಚಂದನ್, ಪ್ರಾಂಶುಪಾಲರಾದ ಶ್ರೀ ಬಿ.ಎ.ಕೊಟ್ರೇಶ್ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *