ದುಡ್ಡೆ ದೊಡ್ಡಪ್ಪ ಅಲ್ಲ, ಸ್ಕಿಲ್ ತುಂಬಾ ಮುಖ್ಯ: ಸಿಎಂ ಬೊಮ್ಮಾಯಿ

1 Min Read

 

ಬೆಂಗಳೂರು: ನನಗೆ ಇಂದು ಬಹಳ ಸಂತೋಷ ಆಗಿದೆ. ಕೌಶಲ್ಯ ಇರುವವರ ಜೊತೆ ನಾನು ಕೂತಿದ್ದೇನೆ. ಕೌಶಲ್ಯ ನ್ಯಾಚುರಲ್ ಆಗಿ ಬರುವ ಪ್ರಕ್ರಿಯೆ. ನಾವು ಸ್ವಲ್ಪ ಜ್ಞಾನ ಬಳಸಬೇಕು ಅಷ್ಟೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

 

ಒಂದು ಪೇಪರ್ ತೆಗೆದುಕೊಂಡು ನೇರ ಗೆರೆ ಎಳೆಯೋದು ಎಲ್ಲರೂ ಮಾಡ್ತಾರೆ. ಅದನ್ನ ವಿಭಿನ್ನವಾಗಿ ಮಾಡೋದು ಕಲೆ. ಯಾವ ರೀತಿ ಜ್ಞಾನ ಕದಿಯಲು ಸಾಧ್ಯವಿಲ್ಲ, ಸ್ಕಿಲ್ ಕೂಡ
ಪೇಟೆಂಟ್ ಪಡೆಯಲು ಸಾಧ್ಯವಿಲ್ಲ. ತನ್ನ ಆಸ್ಟ್ರೇಲಿಯಾ ಸ್ನೇಹಿತನ ಬಗ್ಗೆ ಘಟನೆ ವಿವರಿಸಿದ ಸಿಎಂ.

 

ಷೇರಿನಲ್ಲಿ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡ. ಬಳಿಕ ಕಾರ್ಪೆಂಟರ್ ಆಗಿ ಸ್ಕಿಲ್ ಬಳಸಿ, ಈಗ ಮತ್ತೆ ಶ್ರೀಮಂತ ಆಗಿದ್ದಾನೆ. ದುಡ್ಡೆ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ. ನಾನು ಒಂದು ಕಿ.ಮೀ ರಸ್ತೆ ಮಾಡಲು ಸಾಂಕ್ಷೆನ್ ಮಾಡಬಹುದು. ಆದ್ರೆ ಅದನ್ನ ಬಿಸಿಲಿನಲ್ಲಿ ನಿಂತು ಅಚ್ಚು ಕಟ್ಟಾಗಿ ಮಾಡಬೇಕಾದ್ರೆ ಶ್ರಮ ಬೇಕು. ಪ್ರೊಡಕ್ಷನ್ ಮತ್ತು ಪ್ರೊಡಕ್ಟ್ಸ್ ಎರಡೂ ಸರಿಯಾಗಿ ಖಾಲಿಯಾಗಬೇಕು, ಅದನ್ನ ಮಾಡಲು ಸ್ಕಿಲ್ಸ್ ಬೇಕು. ಸ್ಕಿಲ್ಸ್ ಸೈನ್ಸ್ ವಿಷಯ ಈಗ ಅಧ್ಯಯನ ಮಾಡಲು ಅವಕಾಶ ಇದೆ.

ಸ್ಕಿಲ್ ಎಲ್ಲರಿಗೂ ಸಿಗುವಂತೆ ಆಗಬೇಕು. ಸ್ಕಿಲ್ ಡೆವಲಪ್ಮೆಂಟ್ ಮತ್ತು ಜೀವನೋಪಾಯ ಎರಡು ಸೇರಿಸಿ ಯೋಜನೆ ರೂಪಿಸಲಾಗಿದೆ. ದೇಶದಲ್ಲಿ ಹೈ ಟೆಕ್ನಾಲಜಿ ಬಳಸಿ ಕೆಲಸ ಮಾಡುವ ಯೋಜನೆ ಕರ್ನಾಟಕದಲ್ಲಿ ಇದೆ. IT ಟೆಕ್ನಾಲಜಿ ಕರ್ನಾಟಕದಲ್ಲಿ ಇದೆ. ಆರು ಇಂಜಿನಿಯರಿಂಗ್ ಕಾಲೇಜುಗಳನ್ನ IIT ಮಾದರಿಯಲ್ಲಿ ಅಪ್ ಗ್ರೇಡ್ ಮಾಡಲಾಗ್ತಿದೆ. ದೇಶದಲ್ಲಿ ಕೆಲವೇ ಕೆಲವು IIT ಇದೆ. ನಾವು ಇಲ್ಲಿರೋ ಇಂಜಿನಿಯರಿಂಗ್ ಕಾಲೇಜನ್ನೇ IIT ಮಾದರಿಯಲ್ಲಿ ಮಾಡಬೇಕಿದೆ. ಈ ವರ್ಷವೇ ಕಾಲೇಜು ಪ್ರಾರಂಭಿಸಲು ಸೂಚಿಸಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *